Showing posts with label breaking news. Show all posts
Showing posts with label breaking news. Show all posts

ಮಡಿಕೇರಿಯ ಸರಕಾರಿ ವಸತಿ ಗೃಹಗಳ ಅವ್ಯವಸ್ಥೆಗಳ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಕರವೇ ಆಗ್ರಹ

ಮಡಿಕೇರಿ ನಗರ (web@timesofcoorg) ಮಡಿಕೇರಿ ನಗರದ ಹೊಸ ಬಡಾವಣೆ ಯಲ್ಲಿ ವಿವಿಧ ಸರಕಾರಿ ಇಲಾಖೆ ಗಳಿಗೆ  ಸಂಬಂಧ ಪಡುವ ಕೆಲವು ವಸತಿ ಗೃಹಗಳಿದ್ದು ಕೆಲವು ವಸತಿಗೃಹಗಳಲ್ಲಿ  ಮಾತ್ರ  ಜನರು ವಾಸ ಮಾಡುತ್ತಿದ್ದು  ಬಾಕಿ ಎಲ್ಲವೂ ಪಾಳು ಬಿದ್ದಿದು ಕಾಡು ಬೆಳೆದು  ಹೋಗಿದೆ  ಮರಮುಟ್ಟುಗಳು ಗೆದ್ದಲು ಹಿಡಿದು ಮನೆಯ ಬಾಗಿಲು ಕಿಟಕಿ ಹಾಗೂ  ಕಬ್ಬಿಣ ಸಾಮಾಗ್ರಿಗಳು ಮಣ್ಣು ಹಿಡಿದು ಹೋಗುತ್ತಿವೆ  ಇದಕ್ಕೆ ಸಂಬಂಧಪಟ್ಟ ಇಲಾಖೆಗಳು ಯಾಕೆ ಜಾಣಮೌನ ಪ್ರದರ್ಶನ ಮಾಡುತ್ತಿವೆ? ಇದು ಯಾವ ಇಲಾಖೆಗಳಿಗೆ  ಸಂಬಂಧಪಟ್ಟವು? ಮಡಿಕೇರಿ ನಗರದಾದ್ಯಂತ ನಿವೇಶನ ವಿಲ್ಲದೆ ಹಲವು  ಕಡುಬಡವರು ನಗರ ಸಭೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಗಳಲ್ಲಿ ಮನೆಗಳಿಗಾಗಿ ಅರ್ಜಿ  ಸಲ್ಲಿಸುತ್ತಿದ್ದು  ಇಲಾಖೆಗಳಿಗೆ ಇರುವ ವಸತಿಗೃಹಗಳನ್ನು  ಬಳಸಿಕೊಳ್ಳದೆ ಹಾಳುಗೆಡವುತ್ತಿರುವುದು ಎಷ್ಟು ಸರಿ? ಸರಕಾರಿ ಇಲಾಖೆಗಳು ಜನರ ತೆರಿಗೆ ಹಣದಿದ ನಿರ್ಮಿಸಿದಂತಹ ಸರಕಾರಿ ಇಲಾಖೆಗಳಿಗೆ  ಸಂಬಂಧಪಡುವ  ವಸತಿಗೃಹಗಳನ್ನು  ಈ ರೀತಿಯಲ್ಲಿ  ಹಾಳುಗೆಡವುದು ಎಷ್ಟು ಸರಿ  ಅದಲ್ಲದೆ ಪಾಳುಬಿದ್ದ  ಈ ವಸತಿಗೃಹಗಳು ಈಗ ಪುಂಡ ಪೋಕರಿಗಳ  ತಾಣವಾಗಿದ್ದು, ಅಕ್ರಮ  ಚಟುವಟಿಕೆಗೆ  ಅಡ್ಡೆಯಾಗಿದೆ.

 ಹಾಗೂ ಇದೇ ವಸತಿಗೃಹಗಳಲ್ಲಿ ಯಾವುದೇ  ಇಲಾಖೆಗಳಿಗೆ ಸಂಬಂಧಪಡದ  ಖಾಸಗಿ ವ್ಯಕ್ತಿಗಳು  ವಾಸ ಮಾಡುತ್ತಿರುವುದು ಕಂಡುಬರುತ್ತಿದೆ ಇವರಿಗೆ  ಇವರುಗಳಿಗೆ ಸರಕಾರಿ ವಸತಿಗೃಹದಲ್ಲಿ ವಾಸಮಾಡಲು ಅವಕಾಶ ನೀಡಿದವವರಾರು? ಇದಕ್ಕೆ ಸಂಬಂಧಪಟ್ಟ ಇಲಾಖೆಗಳು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಇದರ ಬಗ್ಗೆ ಕ್ರಮ ತೆಗೆದುಕೊಂಡು ಮಣ್ಣಾಗಿ ಹೋಗುತ್ತಿರುವ  ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಿದ ವಸತಿಗೃಹಗಳ ಅವ್ಯವಸ್ಥೆ  ಬಗ್ಗೆ ಪರಿಶೀಲನೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ  ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.

ಕಾಂಗ್ರೆಸ್ ಕಾರ್ಮಿಕ ವಿಭಾಗದ ಜಿಲ್ಲಾ ಉಪಾದ್ಯಕ್ಷರಾಗಿ ಎಂ.ಎನ್.ಪ್ರೇಮವಸಂತ್ ನೇಮಕ

 ಕೊಡ್ಲಿಪೇಟೆ (web@timesofcoorg) :ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಉಪಾದ್ಯಕ್ಷರಾಗಿ  "ಎಂ.ಎನ್.ಪ್ರೇಮವಸಂತ್ ರನ್ನು ನೇಮಕ ಮಾಡಲಾಗಿದೆ,

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಹಾಗೂ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ತಾಕೇರಿ ರವರ ಶಿಪಾರಸ್ಸಿನಂತೆ ಕಾರ್ಮಿಕ ವಿಭಾಗದ ಜಿಲ್ಲಾದ್ಯಕ್ಷ ಟಿ.ಡಿ.ಗೊವಿಂದರಾಜ್ ದಾಸ್  ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕಾತಿ ಆದೇಶ ಪತ್ರವನ್ನು ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ವಿತರಿಸಿದರು,


ಕೊಡ್ಲಿಪೇಟೆ ಸಮೀಪದ ನೀರುಗುಂದ ಗ್ರಾಮದ ನಿವಾಸಿಯಾದ ಪ್ರೇಮವಸಂತ್ ದಲಿತ ಸಂಘಟನೆಯ ರಾಜ್ಯ ಸಮಿತಿಯಲ್ಲಿ  ಹಾಗೂ ಮಹಿಳಾ ಸಂಘಟನೆಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ


ನಾಪೋಕ್ಲಿನಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು (web@timesofcoorg): ಸ್ಥಳಿಯ ನಾಡಕಛೇರಿಯಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ನಡೆಯಿತು.ಉಪವಿಭಾಗಾಧಿಕಾರಿಗಳ ಆದೇಶದಂತೆ ಮಡಿಕೇರಿ ತಾಲೂಕು ತಹಶೀಲ್ದಾರ್ ಮಹೇಶ್ ರವರ ನೇತೃತ್ವದಲ್ಲಿ ನಾಪೋಕ್ಲು ವಿಭಾಗದ ಸುಮಾರು 55 ಫಲಾನುಭಾವಿಗಳಿಗೆ ಪಿಂಚಣಿ ಮಂಜೂರಾತಿ ಆದೇಶ ಪತ್ರವನ್ನು ವಿತರಿಸಲಾಯಿತು.

ಈ ಸಂದರ್ಭ ಮಾತನಾಡಿದ ತಹಶೀಲ್ದಾರ್ ಮಹೇಶ್ 60 ವರ್ಷ ಮೇಲ್ಪಟ್ಟವರಿಗೆ, ವಿಧವೆಯರಿಗೆ ಮತ್ತು ವಿಕಲ ಚೇತನರಿಗೆ ಸರ್ಕಾರ ಇಂತಹ ಪಿಂಚಣಿ ಸೌಲಭ್ಯವನ್ನು ನೀಡಲಾಗುತ್ತಿದ್ದು ಇದರ ಸದುಪಯೋಗವನ್ನು ಅರ್ಹರು ಪಡೆದುಕೊಳ್ಳುವಂತೆ ಕೋರಿದರು.

ಈ ಸಂದರ್ಭ ಉಪ ತಹಶೀಲ್ದಾರ್ ಸುನಿಲ್ ಕುಮಾರ್, ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮಲೆಕ್ಕಿಗೆ ಅಮೃತ,ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಏಪ್ರಿಲ್ 1 ರಿಂದ ನಾಲ್ಕುನಾಡು ಪ್ಲಾಂಟರ್ಸ್ ಕ್ಲಬ್ ಹಾಕಿ ಪಂದ್ಯಾಟ

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು (web@timesofcoorg) : ಸ್ಥಳೀಯ ನಾಲ್ಕುನಾಡು ಪ್ಲಾಂಟರ್ಸ್ ಕ್ಲಬ್ ವತಿಯಿಂದ  ಏ.1ರಿಂದ ನಾಪೋಕ್ಲು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಾಲ್ಕು ನಾಡಿಗೆ ಒಳಪಡುವ ಕೊಡವ ಕುಟುಂಬಗಳ ಮಧ್ಯೆ ಹಾಕಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಬಾಚಮಂಡ  ಲವ ಚಿನ್ನಪ್ಪ ನವರು ನಾಪೋಕ್ಲಿನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳುಯಾವುದೇ  ಅತಿಥಿ ಆಟಗಾರರನ್ನು ಆಡಿಸುವಂತಿಲ್ಲ ಪಂದ್ಯಾಟದಲ್ಲಿ ವಿಜೇತರಾದ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ನಗದು ನೀಡಲಾಗುವುದು ಎಂದು ಲವ ಚಿನ್ನಪ್ಪ ತಿಳಿಸಿದರು.

 ಅಂಬಿ ಕಾರ್ಯಪ್ಪ ಮಾತನಾಡಿ ಕಳೆದ 4 ವರ್ಷಗಳಿಂದ ಕೊಡವ ಕುಟುಂಬಗಳ ಹಾಕಿ ಪಂದ್ಯಾಟವು ಕೊರೊನಾದಿಂದ ಸ್ಥಗಿತಗೊಂಡಿತ್ತು ಇದನ್ನು ಮರುಕಳಿಸುವ ಉದ್ದೇಶದಿಂದ ನಾವು ಈ ಪದ್ಯವನ್ನು ಆಯೋಜಿಸಲಾಗಿದ್ದು ಆದ್ದರಿಂದ ನಾಲ್ಕು ನಾಡಿನ ಕೊಡವ ಕುಟುಂಬಗಳ ಸಹಕಾರ ಮುಖ್ಯವಾಗಿ ಬೇಕು ಎಂದರು.

ಕೇಟೋಳಿರ ಹರೀಶ್ ಪೂವಯ್ಯ ಮಾತನಾಡಿ ನಮ್ಮ ಕ್ಲಬ್ ವತಿಯಿಂದ ಈಗಾಗಲೇ ರಾಜ್ಯಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಏರ್ಪಡಿಸಿ ಯಶಸ್ವಿಯಾಗಿದ್ದು ಆದ್ದರಿಂದ ಪ್ರತಿಯೊಬ್ಬರು ಮುಂದಿನ ಹಾಕಿ ಪಂದ್ಯಾಟಕ್ಕೆ ನಮ್ಮೊಂದಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಕ್ಲಬ್ ನ ಉಪಾಧ್ಯಕ್ಷರಾದ ಅರೆಯಡ ರತ್ನಾ ಪೆಮ್ಮಯ್ಯ, ಕಾರ್ಯದರ್ಶಿ ಚಿಯಕಪೂವಂಡ ಅಪ್ಪಚ್ಚು,ಸಹ ಕಾರ್ಯದರ್ಶಿ ಕೇಟೋಳಿರ ಹರೀಶ್ ಪೂವಯ್ಯ, ಖಜಾಂಚಿ ಕರವಂಡ ಬೆಲ್ಲು ಬೆಳ್ಯಪ್ಪ,ನಿರ್ದೇಶಕ ಬೊಳ್ಳಚ್ಚೆಟ್ಟೀರ ಸುರೇಶ್, ಶಿವ ಚಾಳಿಯಂಡ ಅಂಬಿ ಕಾರ್ಯಪ್ಪ, ಅರೆಯಡ ಅಶೋಕ್ ಮುದ್ದಪ್ಪ, ಕುಂದ್ಯೋಲಂಡ ಬೋಪಣ್ಣ, ಚೇನಂಡ ಸುರೇಶ್ ನಾಣಯ್ಯ, ಕೇಟೋಳಿರ ಶಮ್ಮಿ ಸುಬ್ಬಯ್ಯ, ಚೋಕಿರ ರೋಷನ್, ಮತ್ತಿತರರು ಉಪಸ್ಥಿತರಿದ್ದರು.

ಶನಿವಾರಸಂತೆ ನೆಮ್ಮದಿ ಕೇಂದ್ರದಲ್ಲಿ ಆಧಾರ್ ಸೇವೆ ಪುನರ್ ಕಲ್ಪಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಶಿವರಾಮೇಗೌಡರ ಕರವೇ ಕಾರ್ಯಕರ್ತರು ಮನವಿ

ಶನಿವಾರಸಂತೆ ನೆಮ್ಮದಿ ಕೇಂದ್ರದಲ್ಲಿ ಆಧಾರ್ ಸೇವೆ ಪುನರ್ ಕಲ್ಪಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಶಿವರಾಮೇಗೌಡರ ಕರವೇ ಕಾರ್ಯಕರ್ತರು ಪತ್ರಿಕೆ ಹೇಳಿಕೆ ಮುಖಾಂತರ  ಮನವಿ

ಸೋಮವಾರಪೇಟೆ : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಯ ಕಂದಾಯ ಇಲಾಖೆಯಲ್ಲಿರುವ ನೆಮ್ಮದಿ ಕೇಂದ್ರದಲ್ಲಿ 3ತಿಂಗಳಿನಿಂದ ಆಧಾರ್ ಸೇವೆ ನಿಂತು ಹೋಗಿದ್ದು, ಕಂಪ್ಯೂಟರ್ ರಿಪೇರಿಯಿಂದ ಆಧಾರ್ ಸೇವೆ ನಿಂತು ಹೋಗಿರುತ್ತದೆ .ಇದನ್ನು ಬೇಗನೆ ಸರಿಪಡಿಸಬೇಕೆಂದು ಈ ಹಿಂದೆ ಕಂದಾಯ ಇಲಾಖೆಯಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು ಹಾಗೂ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಆಧಾರ್ ಸೆಕ್ಷನ್ ನಲ್ಲಿರುವ ಸೋಮಶೇಖರ್ ರವರನ್ನು ಭೇಟಿ ಮಾಡಿ ಆದಷ್ಟು ಬೇಗನೆ ಸರಿಪಡಿಸಬೇಕೆಂದು ಶಿವರಾಮೇಗೌಡರ ಕರವೇ ಕಾರ್ಯಕರ್ತರು ಈ ಮೊದಲೆ ತಿಳಿಸಿದ್ದರು ಸರಿಪಡಿಸಿಲ್ಲ, ಆದರೂ ಈವರೆಗೂ ಆಧಾರ್ ಕಾರ್ಡ್ ತೆಗೆಯುವಲ್ಲಿ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ .ಯಾಕೆ ಅಂತ ಗೊತ್ತಾಗುತ್ತಿಲ್ಲ. ಇದರ ಬಗ್ಗೆ ಜಿಲ್ಲಾಧಿಕಾರಿಯವರು  ಬೇಗನೆ ಕ್ರಮ ಕೈಗೊಂಡು ಆಧಾರ್ ಕಾರ್ಡ್ ತೆಗೆಯುವಂತೆ  ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ .. ಹೊರಗಡೆ (ಪ್ರವೇಟ್) ನಲ್ಲಿ ಆಧಾರ್ ಕಾರ್ಡ್ ಮಾಡಿಸಿದರೆ ಬಡವರ ಸುಲಿಗೆ ಆಗುತ್ತಿರುವ ಬಗ್ಗೆ   ಈ ಹಿಂದೆ ಕರವೇ ಕಾರ್ಯಕರ್ತರು ತಿಳಿಸಿದರು. ಆದರೂ  ಈವರೆಗೂ ಆಧಾರ್ ಕಾರ್ಡ್  ಸೆಂಟರ್ ಪ್ರಾರಂಭ ಮಾಡದಿರಲು  ಏನು ಕಾರಣ ಎಂದು ಕರವೇ ಕಾರ್ಯಕರ್ತರ ಪ್ರಶ್ನಿಸಿದ್ಧಾರೆ.

 ಶನಿವಾರಸಂತೆ ಕಂದಾಯ ಇಲಾಖೆಯಲ್ಲಿರುವ  ನೆಮ್ಮದಿ ಕೇಂದ್ರದಲ್ಲಿರುವ ಆಧಾರ್ ಕಾರ್ಡ್  ಓಪನ್ ಮಾಡಬೇಕೆಂದು ಕರವೇ ಕಾರ್ಯಕರ್ತರು ಮನವಿ ಮಾಡಿದ್ದಾರೆ.

ಅಭಿವೃದ್ಧಿ ಬಗ್ಗೆ ಮಾತೆತ್ತಲು ನೈತಿಕತೆ ಇಲ್ಲದ ಸಂಸದನಿಂದ ಕೋಮು ಭಾವನೆ ಕೆರಳಿಸುವ ಪ್ರಯತ್ನ ಖಂಡನೀಯ - ತಮ್ಲೀಖ್ ದಾರಿಮಿ

ಮಡಿಕೇರಿ:  ಜಿಲ್ಲೆಯ  ಅಭಿವೃದ್ಧಿ ಬಗ್ಗೆ ಚರ್ಚೆಗಳಾಗಬೇಕಾದ ಅದೆಷ್ಟೋ ಸಮಸ್ಯಗಳಿವೆ. ಇನ್ನೂ  ಮೂಲ ಸೌಕರ್ಯಗಳು ತಲುಪದ ಅದೆಷ್ಟೋ ಕುಟುಂಬಗಳಿವೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತರುತ್ತಾರೆ ಎಂದು ಸರ್ಕಾರ ಜನರ ಕಣ್ಣಿಗೆ ಮಣ್ಣೆರಚಲಾಗಿದೆ. ರಸ್ತೆಗಳ ಪರಿಸ್ಥಿತಿ ಹದೆಗೆಟ್ಟಿದೆ. ಇವುಗಳನ್ನೇನು ಬಗೆಹರಿಸಲು ಸಾಧ್ಯವಾಗದ ಸಂಸದ ಕೊಡಗಿಗೆ ಬರುವಾಗಲೆಲ್ಲವೂ ಒಂದೊಂದು ಕೋಮ ಪ್ರಚೋದನಕಾರಿ ಹೇಳಿಕೆ ನೀಡುವುದು ವಾಡಿಕೆಯಾಗಿದೆ. ಅಭಿವೃದ್ಧಿ ಬಗ್ಗೆ ಮಾತನಾಡಲಾಗದ ಪ್ರತಾಪ್ ಸಿಂಹರ ರಾಜಕೀಯ ಅಸ್ತಿತ್ವದ ಉಳಿವು ಕೇವಲ ಕೋಮು  ದ್ವೇಷದಿಂದ ಮಾತ್ರವಾಗಿದೆ ಎಂದು ಎಸ್ ಕೆ ಎಸ್ ಎಸ್ ಎಫ್ ಕೊಡಗು ಜಿಲ್ಲಾ ಅಧ್ಯಕ್ಷ ತಮ್ಲೀಖ್ ದಾರಿಮಿ ಮಡಿಕೇರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಪ್ರವಾಹ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಜಿಲ್ಲೆಯ ಜನರು ತೀರಾ ಸಂಕಷ್ಟದಲ್ಲಿದ್ದರು. ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಯಾವುದೇ ವಿಶೇಷ ಯೋಜನೆಗಳನ್ನು ಕೊಡಗಿಗೆ ತರಲು ನಮ್ಮ ಈ ಸಂಸದರಿಂದ ಸಾಧ್ಯವಾಗಲಿಲ್ಲ.ಕೃಷಿಯನ್ನೇ ನಂಬಿ ಬದುಕು ಸಾಗಿಸುತ್ತಿರುವ ಬೆಳೆಗಾರರು ಪ್ರಕೃತಿ ವಿಕೋಪ ಸೇರಿದಂತೆ ಕಾಡು ಪ್ರಾಣಿಗಳ ಹಾವಳಿಯಿಂದ ನಿರಂತರ ಸಂಕಷ್ಟ ಎದುರಿಸುತ್ತಿದ್ದಾರೆ .ಕಾಡಾನೆ. ಹುಲಿ ಹಾವಳಿಯಿಂದ ಕಾರ್ಮಿಕರು. ಬೆಳೆಗಾರರು ಸಂಕಷ್ಟದ ಜೀವನ ನಡೆಸುವುದರೊಂದಿಗೆ ಪ್ರಾಣಹಾನಿಯೂ ಸಂಭವಿಸುತ್ತಲೇ ಇದೆ. ಕಾಡು ಪ್ರಾಣಿಗಳು ಬಾರದಾಗಿ ಶಾಶ್ವತವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರದಿಂದ ಯಾವುದೇ ಯೋಜನೆಗಳನ್ನು ರೂಪಿಸದೆ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡದೆ ಕಡೆಗಣಿಸಿದ್ದಾರೆ.ಕಸ್ತೂರಿ ರಂಗನ್ ವರದಿ. ಹೈಟೆನ್ಷನ್ ಪವರ್ ಲೈನ್ ನನ್ನ ಹೆಗಲಿಗೆ ಬಿಡಿ ಎಂದು ಬಹಿರಂಗವಾಗಿ ಹೇಳಿದ ಪ್ರತಾಪ್ ಸಿಂಹ ಗೆದ್ದ ನಂತರ ಎಲ್ಲವೂ ಮೌನವಾಗಿ ಜನರಿಗೆ ದ್ರೋಹ ಮಾಡಿದ್ದಾರೆ.ಜಿಲ್ಲೆಯ ಪ್ರಜ್ಞಾವಂತರು ಪ್ರಶ್ನೆ ಮಾಡುತ್ತಾರೆ ಎಂಬ ಭಯದಿಂದ ಒಂದು ವರ್ಗವನ್ನು ಗುರಿಯಾಗಿಸಿಕೊಂಡು ಹೇಳಿಕೆಗಳನ್ನು ನೀಡುವ ಮೂಲಕ ಅಭಿವೃದ್ಧಿಯನ್ನು ಮರೆಮಾಚಿ ಜನರ ನಡುವೆ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಶಾಂತಿಯುತ ಕೊಡಗಿನಲ್ಲಿ ಇಲ್ಲಿನ ಉತ್ತಮ ವಾತಾವರಣ ನಾಶಪಡಿಸಿ ಜನರ ಮನಸ್ಸಿನಲ್ಲಿ ಕೋಮು ದ್ವೇಷ ಹರಡಿಸುವ ಪ್ರಯತ್ನ ಒಬ್ಬ ಜನಪ್ರತಿನಿಧಿಯಿಂದ ನಡೆಯುತ್ತಿರುವುದು ತುಂಬಾ ಖೇದಕರ ಸಂಗತಿ. ಎರಡು ಜಿಲ್ಲೆಯನ್ನು ಪ್ರತಿನಿಧಿಸುವ ಒಬ್ಬ ಸಂಸದ ತನ್ನ ಸ್ಥಾನವನ್ನು, ಜವಬ್ದಾರಿಯನ್ನು ತಿಳಿಯದ ರೀತಿಯಲ್ಲಿ ದೇಶದ ಸಂವಿಧಾನಕ್ಕೆ ಬೆಲೆ ಕಲ್ಪಿಸದೆ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. ಭಾರತ ಯಾವುದೇ ಧರ್ಮದ ದೇಶವಲ್ಲ. ಭಾರತದ ಎಲ್ಲಾ ಜಾತಿ ಧರ್ಮಗಳನ್ನೊಳಗೊಂಡು, ಸಂವಿಧಾನ ಎಲ್ಲರಿಗೂ ಸಮಾನ ಹಕ್ಕನ್ನು ನೀಡುತ್ತಿದೆ. ಆದರೆ ಜನರನ್ನು ಸಮಾನವಾಗಿ ಕಂಡು ಎಲ್ಲರ ಏಳಿಗೆಗಾಗಿ ಪ್ರಯತ್ನಿಸಬೇಕಾದ ಒಬ್ಬ ಜನಪ್ರತಿನಿಧಿ ಒಂದು ಮತೀಯ ಸಂಘಟನೆಯ ವಾಕ್ತಾರನಂತೆ ಕೋಮು ದ್ವೇಷಕ್ಕೆ ಪ್ರೇರಣೆ ನೀಡಿ ಒಂದು ಕೋಮನ್ನು ಮಾತ್ರ ಗುರಿಯಾಗಿಸಿಕೊಂಡು ಪ್ರಚೋದನಕಾರಿ ಹೇಳಿಕೆ  ನೀಡುತ್ತಲೇ ಬರುತ್ತಿದೆ. ಇದು ಒಬ್ಬ ಸಂಸದನಿಂದ ಬರಬೇಕಾದ ವರ್ತನೆಯಲ್ಲ.ಇಷ್ಟ ಬಂದಂತೆ ವಸ್ತ್ರ ಧರಿಸಿ ಹೋಗಬೇಕೆಂದರೆ ಮದ್ರಸಾಗಳಿಗೆ ಹೋಗಿ ಎಂದು ಹೆಣ್ಣು ಮಕ್ಕಳ ಹಿಜಾಬಿನ ಕುರಿತಾಗಿ ಸಂಸದರು ತುಚ್ಛವಾದ ಮಾತನಾಡಿದ್ದಾರೆ. ಹಿಂಜಾಬ್ ಇಸ್ಲಾಂ ಮಹಿಳೆಯರಿಗೆ ನೀಡುವ ಒಂದು ರಕ್ಷಣಾ ಕವಚ, ಅದು ಇಸ್ಲಾಮಿನ ಸಂಸ್ಕೃತಿ, ಸಣ್ಣ ಪ್ರಾಯದಿಂದಲೇ ಹೆಣ್ಣು ಮಕ್ಕಳು ಅದನ್ನು ದರಿಸುತ್ತಾ ಬರುತ್ತಾರೆ. ಇತ್ತೀಚಿನ ದಿನಗಳ ವರೆಗೆ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ದರಿಸುವುದರಿಂದ ಯಾವುದೇ ತೊಂದರೆಗಳು ಯಾರಿಂದಲೂ ಕಂಡುಬರಲಿಲ್ಲ. ಆದರೆ ಈಗ ಸಂಘಪರಿವಾರ ಸಂಘಟನೆಗಳ ಷಡ್ಯಂತ್ರಗಳಿಂದಾಗಿ ರಾಜ್ಯದ ವಿವಿಧ ಕಾಲೇಜುಗಳಲ್ಲಿ ಹಿಜಾಬ್ ವಿವಾದ ತಲೆ ಹೆತ್ತುತ್ತಿದೆ. ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ದರಿಸುವುದರಿಂದ ಪ್ರತಾಪ್ ಸಿಂಹ ಒಳಗೊಂಡ ಮತೀಯವಾದಿಗಳಿಗೆ ಸಮಸ್ಯೆಯಾದರು ಏನು ? ಮುಸ್ಲಿಂ ಹೆಣ್ಣು ಮಕ್ಕಳು ಅವರ ಇಚ್ಛೆ ಅನುಸಾರ ಹಿಜಾಬ್ ದರಿಸುತ್ತಿದ್ದಾರೆ. ಅದನ್ನು ಇನ್ನೊಬ್ಬರಿಗೆ ಎಲ್ಲೂ ಸಹ ಹೇರುತ್ತಿಲ್ಲ. ಪ್ರತಾಪ್ ಸಿಂಹ  ನಿಮ್ಮ ಸಂಸ್ಕೃತಿಯನ್ನು ನಮ್ಮ ಮೇಲೆ ಹೇರುವ ಪ್ರಯತ್ನ ಮಾಡಬೇಡಿ ಎಂಬ ಬೆದರಿಕೆಯ ಕರೆಯನ್ನು ನೀಡುತ್ತಿದ್ದಾರೆ. ಆದರೆ ಇಲ್ಲಿ ಮುಸ್ಲಿಂ ಸಮುದಾಯ ಯಾವತ್ತೂ ಕೂಡ ತಮ್ಮ ಆಚಾರಗಳನ್ನು ಇನ್ನೊಬ್ಬರ ಮೇಲೆ ಹೇರಿದ ಉದಾಹರಣೆ ಭಾರತ ದೇಶದಲ್ಲಿ ನಡೆದಿರುವುದಾಗಿ ಕಾಣಲು ಸಾಧ್ಯವಿಲ್ಲ. ಆದರೆ ಜೈ ಶ್ರೀರಾಂ ಹೇಳುವಂತೆ ವಯೋವೃದ್ಧರಿಗೂ ಸಹ ಒತ್ತಡ ಹೇರಿ ಆಕ್ರಮಣ ನಡೆಸುತ್ತಿರುವ ಸಂಘಪರಿವಾರದ ಸಲಹೆಗಳು ಪ್ರಬುದ್ಧ ಮುಸ್ಲಿಂ ಸಮುದಾಯಕ್ಕೆ ಅಗತ್ಯವಿಲ್ಲ. ಮದ್ರಸಾಗಳ ವಿರುದ್ಧ ತುಚ್ಚವಾಗಿ ಮಾತನಾಡುವ ಪ್ರತಾಪ್ ಸಿಂಹ ಈ ಮದ್ರಸಾಗಳು ದೇಶಕ್ಕೆ ನೀಡಿದ ಕೊಡುಗೆಗಳನ್ನು ತಿಳಿದುಕೊಳ್ಳಬೇಕಾಗಿದೆ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟದ ಕಿಡಿ ಆರಂಭಿಸಿದ್ದು, ಅಚಂಚಲ ಹೋರಾಟಕ್ಕಿರುವ ಮನೋಸ್ಥೈರ್ಯ ನೀಡಿದ್ದು ಇದೇ ಮದ್ರಸಾಗಳು ಎಂಬುದು ಪ್ರತಾಪ ಸಿಂಹ ತಿಳಿದುಕೊಳ್ಳಬೇಕಾಗಿದೆ.ನಿಮಗೆ ಇಷ್ಟ ಬಂದಂತೆ ಜೀವಿಸಲು ಪಾಕಿಸ್ತಾನಕ್ಕೆ ಹೋಗಿ ಎಂಬ ಹೇಳಿಕೆ ನೀಡಿದ ಸಂಸದ ಪ್ರತಾಪ ಸಿಂಹ ಜಾತಿ ಧರ್ಮ ವ್ಯತ್ಯಾಸ ಇಲ್ಲದೆ ಬುಜಕ್ಕೆ ಬುಜ ಕೊಟ್ಟು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪೂರ್ವಜರ ಇತಿಹಾಸವನ್ನು ನೆನಪಿಸಬೇಕಾಗಿದೆ. ನಾವು ಇಲ್ಲೇ ಹುಟ್ಟಿ, ನಮ್ಮ ಪೂರ್ವಜರು ತಂದು ಕೊಟ್ಟು ಸ್ವಾತಂತ್ರ್ಯದಿಂದ ಇಲ್ಲಿ ಬದುಕುತ್ತಿದ್ದೇವೆ. ನಮ್ಮ ಮರಣವು ಸಹ ಈ ಪವಿತ್ರ ಭಾರತದ ಮಣ್ಣಿನಲ್ಲಾಗಿರುತ್ತದೆ. ಯಾವುದೇ ಸಮುದಾಯ ಇಲ್ಲಿ ಇಷ್ಟ ಬಂದಂತೆ ಬದುಕುತ್ತಿಲ್ಲ. ಎಲ್ಲಾ ಸಮುದಾಯವು ಇಲ್ಲಿನ ಸಂವಿಧಾನಕ್ಕೆ ಬೆಲೆಕೊಟ್ಟು, ಕಾನೂನನ್ನು  ಪಾಲಿಸಿ  ಬದುಕು ಸಾಗಿಸುತ್ತಿದ್ದಾರೆ. ಆದ್ದರಿಂದಲೇ ಭಾರತ ದೇಶವು ಸಧೃಡವಾಗಿದೆ. ಇಲ್ಲಿನ ಸಂವಿಧಾನ ಒಪ್ಪಿಕೊಳ್ಳಲು ಸಾಧ್ಯವಿಲ್ಲದವರು ಈ ದೇಶ ಬಿಟ್ಟು ತೊಲಗಿ ಜಾತ್ಯತೀತ ಜನರಿಗೆ ಸುಗಮ ಬದುಕು ಸಾಗಿಸಲು ಅನುವು ಮಾಡಿಕೊಡಬೇಕಾಗಿದೆ ಎಂದು ತಮ್ಲೀಖ್ ದಾರಿಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಫಿ ಮಂಡಳಿಯಿಂದ ಮಣ್ಣು ಪರೀಕ್ಷೆ ಶಿಬಿರ ಗುಣಮಟ್ಟ ಕಾಪಾಡಿ ಅಭಿವೃದ್ಧಿಯೊಂದಿಗೆ ಮುಂದೆ ಬನ್ನಿ

ಸಿದ್ದಾಪುರ : ತಮ್ಮ ಜಮೀನುಗಳಲ್ಲಿ ಮಣ್ಣಿನ ಗುಣಮಟ್ಟವನ್ನು ಕಾಪಾಡಿಕೊಂಡು ಲಾಭದಾಯಕವಾಗಿ ಕೃಷಿ ಪಸಲು ಬೆಳೆಯುವದರೊಂದಿಗೆ ಕಾಫಿ ಬೋರ್ಡ್ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು  ಅಭಿವೃದ್ಧಿಯೊಂದಿಗೆ ಮುಂದೆ ಬರಬೇಕೆಂದು  ಮಡಿಕೇರಿ ಕಾಫಿ ಮಂಡಳಿಯ ವಿಸ್ತರಣಾ ವಿಭಾಗದ ಅಧಿಕಾರಿ ಪದ್ಮಭೂಷಣ ಹೇಳಿದರು.ಅರೆಕಾಡು ಗ್ರಾಮದಲ್ಲಿ ಕೊಡವ  ವೆಲ್ ಫೇರ್ &ರಿಕ್ರಿಯೆಶನ್ ಅಸೋಸಿಯೇಷನ್  ಸಹಕಾರದೊಂದಿಗೆ ಕಾಫಿ ಮಂಡಳಿ ವತಿಯಿಂದ ಮಣ್ಣು ಪರೀಕ್ಷಾ ಶಿಬಿರ ಹಾಗೂ ಮಣ್ಣಿನ ಗುಣಮಟ್ಟದ ಬಗ್ಗೆ ರೈತರಿಗೆ ಮಾಹಿತಿ ಕಾರ್ಯಾಗಾರ  ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ರೈತರ ಬೆನ್ನೆಲುಬಾಗಿರುವ ಕೃಷಿ ಭೂಮಿಯನ್ನು ಬೆಳೆಗೆ ಯೋಗ್ಯವಾಗುವ ರೀತಿಯಲ್ಲಿ ಮಣ್ಣಿನ ಗುಣಮಟ್ಟವನ್ನು ಕಾಪಾಡಿಕೊಂಡು ಅಭಿವೃದ್ಧಿಯೊಂದಿಗೆ ಮುನ್ನಡೆಯಬೇಕೆಂದು ಸಲಹೆ ನೀಡಿದ ಅವರು  ಅಪಾಯಕಾರಿ ರಾಸಾಯನಿಕ ಬಳಕೆಯಿಂದ ಮಣ್ಣಿನ ಮೇಲೆ ಪರಿಣಾಮ ಬೀರುತ್ತಿದ್ದು   ಇದರಿಂದ ಕೃಷಿ ಬೆಳೆಗೆ ಹಿನ್ನಡೆಯಾಗಲಿದೆ.ರೈತರು ತಮ್ಮ ಕೃಷಿ ಭೂಮಿಯ ಮಣ್ಣಿನ  ಸುಧಾರಣೆಯ ಬಗ್ಗೆ ತಿಳಿದುಕೊಂಡು ಕಾಫಿ ಮಂಡಳಿಯ ಸಲಹೆಗಳನ್ನು ಪಡೆದುಕೊಳ್ಳಬೇಕು ಕಾಫಿ ಮಂಡಳಿಯಿಂದ ಮಣ್ಣಿನ ಗುಣಮಟ್ಟದ ಬಗ್ಗೆ ಸಂಚಾರಿ ಪರೀಕ್ಷೆ ನಡೆಸಲಾಗುತ್ತಿದ್ದು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು .ಕೊಡವ ವೆಲ್ ಫೇರ್&ರಿಕ್ರಿಯೇಷನ್ ಅಸೋಸಿಯೇಷನ್ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಶಿಬಿರ ಉದ್ಘಾಟಿಸಿ ಮಾತನಾಡಿ  ಅರೆಕಾಡು ಹೊಸ್ಕೇರಿ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೊಡವ ವೆಲ್ಫೇರ್ ಅಸೋಸಿಯೇಶನ್ ಸಕ್ರಿಯವಾಗಿ ಸಮಾಜ ಸೇವೆಯಲ್ಲೂ ತೊಡಗಿಸಿ ಕೊಂಡಿದ್ದು ರೈತರು ಬೆಳೆಗಾರರಿಗೂ ಹಲವಾರು ಶಿಬಿರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕೃಷಿಯೊಂದಿಗೆ  ಆರ್ಥಿಕವಾಗಿ ಮುನ್ನಡೆಯಲು ಇಂತಹ ಕಾರ್ಯಕ್ರಮಗಳು ಅತ್ಯವಶ್ಯಕವಾಗಿದ್ದು  ಇದರ ಪ್ರಯೋಜನ ಪಡೆದುಕೊಳ್ಳವುದರ ಮೂಲಕ ಆರ್ಥಿಕವಾಗಿ ಅಭಿವೃದ್ಧಿಯೊಂದಿಗೆ ಮುಂದೆ ಬರಬೇಕೆಂದರು ಈ ಸಂದರ್ಭ ಕಾಫಿ ಮಂಡಳಿಯ ವಿವಿಧ ವಿಭಾಗದ ಅಧಿಕಾರಿಗಳಾದ ಶಿವಕುಮಾರಸ್ವಾಮಿ, ಅಜಿತ್ ಕುಮಾರ್ ರಾವತ್, ಕಾಫಿ ಸಂಶೋಧನಾ ಕೇಂದ್ರದ ರಜೀಬ್,ಕೊಡವ ವೆಲ್ಫೆರ್ ಅಸೋಸಿಯೇಶನ್ ನ ಉಪಾಧ್ಯಕ್ಷ ಬಲ್ಲಚಂಡ ಕಾವೇರಪ್ಪ,ಕಾರ್ಯದರ್ಶಿ ನೆಲ್ಲಮಕ್ಕಡ ಪಾವನ್,ಖಜಾಂಜಿ ಕಮಾಂಡರ್ ಉತ್ತಪ್ಪ,ಗ್ರಾಮ ಪಂಚಾಯ್ತಿ ಸದಸ್ಯ ಯೂಸುಫ್ ಅಲಿ,ಪ್ರಮುಖರಾದ  ಬಲ್ಲಾರಂಡ ಅಭಿ, ಟಿ.ಎಸ್ ನಾಣಯ್ಯ, ಎಂ.ಕೆ ಸಲೀಂ,ಕುಕ್ಕೇರ ಕುಶ, ಎ.ಬಿ ಸೋಮಯ್ಯ,ಕೆ. ಎ ಮುತ್ತಣ್ಣ,ಕುಕ್ಕೇರ ಅಯ್ಯಪ್ಪ, ಸಿ.ಎಸ್ ಕಾಳಪ್ಪ,ಕೆ.ಎ ಗಣಪತಿ ,ಬಲ್ಲಚಂಡ ಚಂದನ್,ಸುನೀಲ್ ,ಚೇರಂಡ ಸುಭಾಷ್,   ನಾಣಯ್ಯ, ಪ್ರಕಾಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ಕಾಡಾನೆ ದಾಳಿ. ವಿದ್ಯಾರ್ಥಿ ಮನೆಗೆ ಎಸ್ ಡಿ ಪಿ ಐ ಪ್ರಮುಖರ ಬೇಟಿ. 25 ಲಕ್ಷ ಪರಿಹಾರ ನೀಡಲು ಒತ್ತಾಯ.ಪ್ರತಿಭಟನೆ ಎಚ್ಚರಿಕೆ .

ಸಿದ್ದಾಪುರ; ಕಾಡಾನೆ ದಾಳಿಗೆ ಬಲಿಯಾದ ನೆಲ್ಯಹುದಿಕೇರಿ ಸಮೀಪದ  ನಲ್ವತೇಕ್ರೆ ಗ್ರಾಮದ ವಿದ್ಯಾರ್ಥಿಯ ಕುಟುಂಬಕ್ಕೆ ಸರಕಾರ ರೂ 25 ಲಕ್ಷ ಪರಿಹಾರ ನೀಡುವಂತೆ ಎಸ್.ಡಿ.ಪಿ.ಐ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಒತ್ತಾಯಿಸಿದರು.ಮೃತ ವಿದ್ಯಾರ್ಥಿ ಮೊಹಮ್ಮದ್ ಆಶಿಕ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಕಳೆದ ಹಲವು ದಶಕಗಳಿಂದ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ನಿರಂತರವಾಗಿದ್ದು.ಪ್ರತಿ ವರ್ಷ ಐವತ್ತಕ್ಕೂ ಹೆಚ್ಚು  ಮಾನವ ಹಾಗೂ ಜಾನುವಾರುಗಳು ಬಲಿಯಾಗುತ್ತಿದೆ. ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ರೈತರು ಕಾಡು ಪ್ರಾಣಿಗಳ ಹಾವಳಿಂದ ಭತ್ತ ಸೇರಿದಂತೆ ಅನೇಕ ಕೃಷಿ ಫಸಲುಗಳು ಬೆಳಸುವುದನ್ನೇ ಕೈ ಬಿಟ್ಟಿದ್ದಾರೆ.ಸಾಲ ಸೋಲ ಮಾಡಿ ಬೆಳೆದ ಫಸಲುಗಳು ಕಾಡಾನೆ ಪಾಲಾಗುತ್ತಿದ್ದು ಸಂಕಷ್ಟದ ನಡುವೆ  ರೈತರು ಕಂಗಾಲಾಗಿದ್ದಾರೆ.ಹೊಟ್ಟೆಪಾಡಿನ ಜೀವನಕ್ಕಾಗಿ ಕೂಲಿ ಕೆಲಸವನ್ನೇ ನಂಬಿ ಬದುಕುತ್ತಿರುವ ಕಾರ್ಮಿಕ ಕುಟುಂಬಗಳು  ಕಾಡು ಪ್ರಾಣಿಗಳ ಹಾವಳಿಗೆ  ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಗುಡ್ಡಗಾಡು ಪ್ರದೇಶವಾಗಿರುವ ಜಿಲ್ಲೆಯಲ್ಲಿ ಶಾಲಾ ಮಕ್ಕಳು, ಸಾರ್ವಜನಿಕರು ನೆಮ್ಮದಿಯಾಗಿ ನಡೆದಾಡಲು ಸಾಧ್ಯವಾಗದಂತಾಗಿದೆ.ನಿರಂತರ ಆನೆ ದಾಳಿಯಿಂದ ಸಾವು ನೋವುಗಳು ಸಂಭವಿಸುತ್ತಲೇ ಇದ್ದು ಕಳೆದ ವರ್ಷ ಹುಲಿ ದಾಳಿಗೆ ಮೂವರು ಬಲಿಯಾಗಿದ್ದಾರೆ.ಇಂತಹ ಗಂಭೀರ ಘಟನೆಗಳು ಸಂಭವಿಸುತ್ತಲೇ ಇದ್ದರೂ ಜನಪ್ರತಿನಿಧಿಗಳು ಮಾತ್ರ ಕಲಾಪಗಳಲ್ಲಿ ಚಕಾರವೆತ್ತದೆ.ಜಾತಿ ರಾಜಕಾರಣಗಳಿಗೆ ಸೀಮಿತವಾಗುತ್ತಿದ್ದಾರೆ. ಹಲವು ವರ್ಷಗಳಿಂದ ಗೆದ್ದು ಅಧಿಕಾರ ನಡೆಸಿರುವ ಜನಪ್ರತಿನಿಧಿಗಳ ನಿರ್ಲಕ್ಷ್ಯಯಿಂದ ಜಿಲ್ಲೆಯ ಜನರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಕಾರ್ಮಿಕರು, ಬೆಳೆಗಾರರ ಸಮಸ್ಯೆಗಳಿಗೂ ಸ್ಪಂದಿಸದೆ . ಕಾಡು ಪ್ರಾಣಿಗಳ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟಲು ಮುಂದಾಗದೆನಿರ್ಲಕ್ಷ್ಯ ತೋರುತ್ತಿರುವ ಹಿನ್ನೆಲೆಯಲ್ಲಿ   ಗಂಭೀರ ಸಮಸ್ಯೆಗಳು ಹೆಚ್ಚಾಗಲು ಕಾರಣವಾಗಿದೆ.ಜನಪ್ರತಿನಿಧಿಗಳು ಜಿಲ್ಲೆಯ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ  ಶಾಶ್ವತ ಯೋಜನೆಗಳ ಬಗ್ಗೆ ಗಮನ ಹರಿಸಿ ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟದಿದ್ದಲ್ಲಿ ಬೃಹತ್ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ನಿಯೋಗದಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶಫಿ,  ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಉಸ್ಮಾನ್, ಗ್ರಾಮ ಪಂಚಾಯತಿ ಸದಸ್ಯ ಸಂಶೀರ್, ಪ್ರಮುಖರಾದ ಅಶ್ರಫ್, ಶೌಕತ್, ಸಲೀಂ ಇದ್ದರು.

ಕಾಡಾನೆ ದಾಳಿಯಿಂದ ಗಾಯಗೊಂಡು ಆಸ್ಪತ್ರೆಯಲ್ಲಿರುವ ವ್ಯಕ್ತಿಗೆ ಚಿಕಿತ್ಸೆ ವೆಚ್ಚ ನೀಡದ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ. ಜ 3ರಂದು ಅರಣ್ಯ ಇಲಾಖೆ ಕಚೇರಿ ಮುಂದೆ ಆದಿವಾಸಿಗಳ ಪ್ರತಿಭಟನೆ.

ಸಿದ್ದಾಪುರ : ಒಂದೂವರೆ ತಿಂಗಳ ಹಿಂದೆ ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡು ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕನಿಗೆ ಚಿಕಿತ್ಸೆ ವೆಚ್ಚ ನೀಡದೆ  ನಿರ್ಲಕ್ಷ್ಯ ತೋರುತ್ತಿರುವ ಅರಣ್ಯ ಇಲಾಖೆಯ ವಿರುದ್ಧ ಜ 3 oರಂದು ಆದಿವಾಸಿಗಳನ್ನು ಒಗ್ಗೂಡಿಸಿ ಮತ್ತಿಗೋಡು ಅರಣ್ಯ ಕಚೇರಿ ಮುಂದೆ  ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಆದಿವಾಸಿ ಮುಖಂಡ ಜೆ. ಕೆ ಅಪ್ಪಾಜಿ ಎಚ್ಚರಿಸಿದ್ದಾರೆ.ಆದಿವಾಸಿ ಸಮುದಾಯದ  ಕಾರ್ಮಿಕ ರವಿ ಆನೆ ದಾಳಿಯಿಂದ ಗಾಯಗೊಂಡು ಮೈಸೂರಿನ ಡಿಎಂಅರ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದು. ಇದೀಗ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲು ತಿಳಿಸಿದ್ದಾರೆ.ಚಿಕಿತ್ಸಾ ವೆಚ್ಚ  ಅಂದಾಜು 3ಲಕ್ಷಕ್ಕೂ ಹೆಚ್ಚು  ಬಿಲ್ ಪಾವತಿಸಬೇಕಾಗಿದ್ದು ರವಿ ಕುಟುಂಬ ಅತ್ಯಂತ ಬಡ ಕಾರ್ಮಿಕ ಕುಟುಂಬವಾಗಿರುವುದರಿಂದ ಅಷ್ಟು ಹಣ ಕಟ್ಟಲು ಸಾಧ್ಯವಾಗದೆ ಆಸ್ಪತ್ರೆಯಲ್ಲೇ ದಿನಕಳೆಯುತ್ತಿದ್ದಾರೆ.ಕಾಡಾನೆ ದಾಳಿ ಸಂದರ್ಭ ಸಿದ್ದಾಪುರ  ಆಸ್ಪತ್ರೆಗೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿಕಿತ್ಸೆ ವೆಚ್ಚ ನೀಡುವುದಾಗಿ ಭರವಸೆ ನೀಡಿ ಆಸ್ಪತ್ರೆಗೆ ದಾಖಲು ಮಾಡಲು ಸೂಚಿಸಿದ್ದರು.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ  ರವಿಗೆ ಯಾವುದೇ ಪರಿಹಾರ ಹಾಗೂ  ಆಸ್ಪತ್ರೆಯ ಚಿಕಿತ್ಸೆ ವೆಚ್ಚವು  ನೀಡದೆ ಅಸಹಾಯಕತೆ ತೋರುತ್ತಿರುವ ಅಧಿಕಾರಿಗಳ ವಿರುದ್ಧ  ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ರವಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದ ಅವರು ಚಿಕಿತ್ಸೆ ವೆಚ್ಚ ನೀಡದ ಅರಣ್ಯ ಇಲಾಖೆ ವಿರುದ್ಧ ಮತ್ತಿಗೋಡು ಅರಣ್ಯ ಕಚೇರಿ ಮುಂದೆ ಜ 3ರಂದು  ಆದಿವಾಸಿಗಳನ್ನು  ಒಗ್ಗೂಡಿಸಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ......ಘಟನೆ ಹಿನ್ನೆಲೆ     ವಿರಾಜಪೇಟೆ ತಾಲೂಕಿನ ಮಾಲ್ದಾರೆ ಸಮೀಪದ  ತಟ್ಟಳ್ಳಿಯಿಂದ ಕೆಲಸ ಮುಗಿಸಿ ಲಿಂಗಾಪುರ ಸಮೀಪವಿರುವ ಮಾಲಕಟ್ಟಿ ಹಾಡಿಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿಯಿಂದ ರವಿ ಹಾಗೂ ಶಶಿ ಕಾರ್ಮಿಕರಿಬ್ಬರು ಗಂಭೀರ ಗಾಯಗೊಂಡಿದ್ದು ಬೈಕ್ ಸಂಪೂರ್ಣ ಜಖಂಗೊಂಡಿತು.ಕಾಡಾನೆ ದಾಳಿಯಿಂದ ಗಾಯಗೊಂಡ ಇಬ್ಬರನ್ನೂ     ಹಾಡಿ ನಿವಾಸಿಗಳು ಸಿದ್ದಾಪುರ  ಆಸ್ಪತ್ರೆಗೆ ದಾಖಲಿಸಲಾಗಿತ್ತುಅಂದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿಕಿತ್ಸೆ ವೆಚ್ಚ ನೀಡುವುದಾಗಿ ಭರವಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದರು  ಗಂಭೀರ ಗಾಯಗೊಂಡಿದ್ದ ರವಿ ಎಂಬವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಯ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿ ಎಂ ಅರ್ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿರುವ ರವಿ ಡಿಸ್ಚಾರ್ಜ್ ಮಾಡಲು ಹಣ ನೀಡಬೇಕೆಂದು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.  

*ಕೊಡಗು ಜಿಲ್ಲೆಗೆ ಡಿಕೆಶಿ ಭೇಟಿ ನಂತರ ಹತಾಶಗೊಂಡ ಬಿಜೆಪಿ*. ಡಿಕೆಶಿ ವಿರುದ್ಧ ಅಪಪ್ರಚಾರಕ್ಕೆ ಖಂಡನೆ: ಸರಿತಾ ಪೂಣಚ್ಚ

ಮಡಿಕೇರಿ : ಇದುವರೆಗೂ ಜಿಲ್ಲೆಗೆ ಭೇಟಿ ನೀಡುವ ಯಾವುದೇ ನಾಯಕರುಗಳು ಹಾಗೂ ಜನಪ್ರತಿನಿಧಿಗಳನ್ನು ಸಂಪ್ರದಾಯದ ರೀತಿಯಲ್ಲಿ ಗೌರವಿಸುವುದು ಸಹಜವಾಗಿದ್ದರೂ ಉದ್ದೇಶಪೂರ್ವಕವಾಗಿ ಕೆಪಿಸಿಸಿ ರಾಜ್ಯಾಧ್ಯಕ್ಷ  ಡಿ.ಕೆ ಶಿವಕುಮಾರ್ ವಿರುದ್ಧ ಅಪಪ್ರಚಾರಕ್ಕೆ ಮುಂದಾಗಿರುವ ಬಿಜೆಪಿಯಿಂದ ಸಂಸ್ಕೃತ ಪಾಠ ಕಲಿಯಬೇಕಾಗಿಲ್ಲ ಎಂದು ಕೊಡಗು ಕಾಂಗ್ರೆಸ್ ವಕ್ತಾರೆ ಕೇಚಮಾಡ ಸರಿತಾ ಪೂಣಚ್ಚ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಮೇಕೆದಾಟು ಯೋಜನೆಗಾಗಿ ರಾಜ್ಯಾದ್ಯಂತ ಪಾದಯಾತ್ರೆ ಕೈಗೊಂಡಿರುವ ಡಿ.ಕೆ ಶಿವಕುಮಾರ್ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಗೌರವಪೂರ್ವಕವಾಗಿಯೇ ನಡೆದುಕೊಂಡಿದ್ದಾರೆಯೇ ಹೊರತು ಎಲ್ಲೂ ಅಗೌರವ ತೋರಿಲ್ಲ. ಡಿಕೆಶಿಯವರ ಕುಟುಂಬದ ಅಜ್ಜಿಯೊಬ್ಬರು ಇತ್ತೀಚೆಗೆ ಅಕಾಲಿಕವಾಗಿ ಮೃತಪಟ್ಟಿದ್ದು ಕುಟುಂಬದಲ್ಲಿ ಸೂತಕವಾಗಿರುವದರಿಂದ ಕ್ಷೇತ್ರಗಳಲ್ಲಿ ದೂರದಿಂದಲೇ ಭಕ್ತಿಪೂರ್ವಕವಾಗಿ ನಮಿಸಿದ್ದಾರೆ. ಇದನ್ನು ಸಹಿಸದ ಬಿಜೆಪಿಯ ಕೆಲವರು ಡಿಕೆಶಿ ವಿರುದ್ಧ ಅಪಪ್ರಚಾರ ಮಾಡಿರುವುದು ಖಂಡನೀಯ.ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಒಗ್ಗಟ್ಟು ಪ್ರದರ್ಶನದ ಮೂಲಕ ಪಕ್ಷ ಕಟ್ಟುವ ಕೆಲಸವಾಗುತ್ತಿದೆ. ಇದರಿಂದ ಹತಾಶಗೊಂಡಿರುವ ಬಿಜೆಪಿ. ರಾಜ್ಯ ನಾಯಕರ ವಿರುದ್ಧ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದ ಅವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಈ ಹಿಂದೆ ಬಿಜೆಪಿ ಮಾಡಿದ್ದುಇವರಿಂದ ಕಾಂಗ್ರೆಸ್ ಪಾಠ ಕಲಿಯಬೇಕಾಗಿಲ್ಲ. ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ರಸ್ತೆ, ನೀರು, ವಿದ್ಯುತ್, ನಿವೇಶನ, ಕಾಡುಪ್ರಾಣಿಗಳ ಹಾವಳಿ ಸೇರಿದಂತೆ ರೈತರು, ಕಾರ್ಮಿಕರು ಸಾಮಾನ್ಯ ಜನರು ಸಂಕಷ್ಟದ ಬದುಕಿನಲ್ಲಿ ಜೀವನ ನಡೆಸುವಂತಾಗಿದೆ.ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಗಂಭೀರವಾಗಿ ಚಿಂತಿಸಬೇಕಾದ ಬಿಜೆಪಿ ಭ್ರಷ್ಟಾಚಾರದೊಂದಿಗೆ ಕೋಮು ಭಾವನೆಗಳನ್ನು ಕೆರಳಿಸುವ ಮೂಲಕ  ಜನಾಂಗಗಳ  ನಡುವೆ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ಬಿಜೆಪಿಯ ದುರಾಡಳಿತದ ವಿರುದ್ಧ ಜಿಲ್ಲೆಯ ಜನತೆ ಆಕ್ರೋಶಗೊಂಡಿದ್ದು ಕಾಂಗ್ರೆಸ್ ನತ್ತ ಒಲವು ತೋರುತ್ತಿದ್ದಾರೆ. ಇನ್ನಾದರೂ ಕೀಳುಮಟ್ಟದ ರಾಜಕಾರಣ ಮಾಡುವದನ್ನ ಬಿಟ್ಟು ಗಂಭೀರ ಸಮಸ್ಯೆಗಳಿಗೆ ಸ್ಪಂದಿಸದಿದ್ದಲ್ಲಿ ಬಿಜೆಪಿಯ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.        

ದಾರಿ ತಪ್ಪುತ್ತಿರುವ ಯುವ ಸಮೂಹಕ್ಕೆ.ಒಳಿತಿನ ಮಾರ್ಗದರ್ಶನ. ಹುಂಡಿ ಎಸ್ ಎಸ್ ಎಫ್ ವಲಯ ಸಮಿತಿ ಆಯೋಜನೆ.

ಸಿದ್ದಾಪುರ :ಸಾಮಾಜಿಕ ಜಾಲತಾಣ ಹಾಗೂ ದುಶ್ಚಟಗಳಿಗೆ ಬಲಿಯಾಗುತ್ತಿರುವ ಯುವ ಸಮೂಹಕ್ಕೆ ಒಳಿತಿನ ಮಾರ್ಗದರ್ಶನ ಅತ್ಯಗತ್ಯ ವಾಗಿದ್ದು ಪೋಷಕರು ತಮ್ಮ ಮಕ್ಕಳ ಮುಂದಿನ ಭವಿಷ್ಯ ರೂಪಿಸಲು ಮುಂದಾಗಬೇಕೆಂದು ಗ್ಲೋಬಲ್ ಪಲ್ಸ್  ಫೌಂಡೇಶನ್ ನಿರ್ದೇಶಕ ಸಲೀಂ ಪಯ್ಯೋಳಿ ಸಲಹೆ ನೀಡಿದರು. ಕರ್ನಾಟಕ ಸುನ್ನೀ ಸ್ಟೂಡೆಂಟ್ ಫೆಡರೇಶನ್ ನ ಹುಂಡಿ ಎಸ್ ಎಸ್ ಎಫ್ ವಲಯ ಸಮಿತಿ ವತಿಯಿಂದ ಜುಮಾ ಮಸೀದಿ ಆವರಣದಲ್ಲಿ  ಆಯೋಜಿಸಲಾಗಿದ್ದ ವಾಟ್ ಈಸ್  ರಿಯಲ್ ಹ್ಯಾಪಿನೆಸ್  ಎಂಬ  ಭವಿಷ್ಯದ ಚಿಂತನ ಮಂಥನ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಉನ್ನತ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕಾದ ಯುವ ಸಮೂಹ ಸಾಮಾಜಿಕ ಜಾಲತಾಣ ಹಾಗೂ ಮಾದಕ ವ್ಯಸನಿಗಳೊಂದಿಗೆ ದುಶ್ಚಟಗಳಿಗೆ ಹೆಚ್ಚು ಬಲಿಯಾಗುತ್ತಿದ್ದು ಯುವ ಸಮೂಹವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಒಳಿತಿನ ಮಾರ್ಗದರ್ಶನ ಅಗತ್ಯವಾಗಿದ್ದು ಪೋಷಕರು ಹಾಗೂ ವಿದ್ಯಾರ್ಥಿಗಳು ಹೊಂದಾಣಿಕೆಯೊಂದಿಗೆ  ಪ್ರೀತಿ ವಾತ್ಸಲ್ಯದಿಂದ ಒಳಿತಿನ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟ ಅವರು  ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆದಲ್ಲಿ ಸುಂದರ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದರು.ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಮೀರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ದಾರಿ ತಪ್ಪುತ್ತಿದ್ದು ದುಶ್ಚಟಗಳಿಂದ ದೂರ ಮಾಡಿ ಸಮಾಜದ ಮುಖ್ಯವಾಹಿನಿಗೆ ತರಲು ಹುಂಡಿ ಎಸ್ಸೆಸ್ಸೆಫ್ ವಲಯ ಸಮಿತಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ.ಪ್ರತಿ ಗ್ರಾಮದಲ್ಲೂ ಇಂಥ ಭವಿಷ್ಯದ ಚಿಂತನ ಕಾರ್ಯಕ್ರಮಗಳು ಅದೆಷ್ಟೋ ದಾರಿ ತಪ್ಪುತ್ತಿರುವ ಯುವ ಸಮೂಹವನ್ನು ಮುಖ್ಯವಾಹಿನಿಗೆ ತರಲು ಸಾಧ್ಯವಾಗುತ್ತದೆ ಎಂದರು.ಮಹಲ್ ಅಧ್ಯಕ್ಷ ಮಹಮ್ಮದ್  ಹಾಜಿ, ಮಸೀದಿ ಖತಿಬ್ ನೌಶಾದ್'ಸಮಿತಿ ಯ ಅಧ್ಯಕ್ಷ  ಸೈಫುದ್ದೀನ್, ಕಾರ್ಯದರ್ಶಿ ಉನೈಸ್, ಸಹ ಕಾರ್ಯದರ್ಶಿ  ಸಫೀಕ್,ಎಸ್ಸೆಸ್ಸೆಫ್ ವಲಯ ಅಧ್ಯಕ್ಷ ಹ್ಯಾರಿಸ್, ಎಸ್ ವೈ ಎಸ್ ಅಧ್ಯಕ್ಷ  ಮುಸ್ತಫಾ ಸಖಾಫಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಹುಂಡಿ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು      

ಜಿಲ್ಲೆಯ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿ: ಹನೀಫ್ ಪಾಲಿಬೆಟ್ಟದಲ್ಲಿ ಎಸ್ ಡಿ ಪಿ ಐ ಕಚೇರಿ ಉದ್ಘಾಟನೆ

ಸಿದ್ದಾಪುರ, : ಪ್ರವಾಹ, ಪ್ರಕೃತಿ ವಿಕೋಪ, ಬೆಳೆಹಾನಿ,ಕಾಡು ಪ್ರಾಣಿಗಳ ಹಾವಳಿ,ರಸ್ತೆ ಅವ್ಯವಸ್ಥೆ,ಶಾಶ್ವತ ಸೂರು, ಸಂತ್ರಸ್ತರ ಗೋಳು ಸೇರಿದಂತೆ ಹಲವಾರು ಸಮಸ್ಯೆಗಳು ಕೊಡಗು ಜಿಲ್ಲೆಯಲ್ಲಿ ಇದ್ದರು ಜಿಲ್ಲೆಯ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸದೆ ಅಸಹಾಯಕತೆ ತೋರುತ್ತಿರುವುದು ಸರಿಯಲ್ಲ ಜಿಲ್ಲೆಯ ಜನಪ್ರತಿನಿಧಿಗಳು  ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನಹರಿಸುವ ಮೂಲಕ ಕೇಂದ್ರ ರಾಜ್ಯ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಜಿಲ್ಲೆಗೆ ತರಲು ಮುಂದಾಗಬೇಕೆಂದು ಎಸ್ ಡಿ ಪಿ ಐ ಪಕ್ಷದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ  ಅಧ್ಯಕ್ಷ ಹನೀಫ್ ಕೊಂಡಂಗೇರಿ ಒತ್ತಾಯಿಸಿದ್ದಾರೆ.ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷದ ಪಾಲಿಬೆಟ್ಟ ವಲಯದ  ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ಬೆಳೆಗಾರರು ಕೂಲಿಯನ್ನೇ ನಂಬಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ಸೇರಿದಂತೆ ಜಿಲ್ಲೆಯ ಜನ ಸಾಮಾನ್ಯರು ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದು ಸಮಸ್ಯೆಗಳನ್ನು ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಬಿಜೆಪಿಯ ಜನಪ್ರತಿನಿಧಿಗಳು ಮಲತಾಯಿ ಧೋರಣೆ ಮಾಡುತ್ತಿರುವುದು ಸರಿಯಲ್ಲ  ಕಳೆದ 4ವರ್ಷಗಳಿಂದಲೂ ಅತಿ ಹೆಚ್ಚು ಸಮಸ್ಯೆಗಳಲ್ಲಿ ಕೊಡಗು ಜಿಲ್ಲೆ ರೈತರು, ಕಾರ್ಮಿಕರು, ಸಂತ್ರಸ್ತರು ಸಂಕಷ್ಟದ ಜೀವನ ನಡೆಸುವಂತಾಗಿದೆ.ವರ್ಷವಿಡಿ ಕಷ್ಟಪಟ್ಟು ಬೆಳೆದ ಫಸಲುಗಳು ಕೈಗೆ ಸಿಗದೆ ಕಾಡು ಪ್ರಾಣಿಗಳ ಪಾಲಾಗುತ್ತಿದ್ದು  ಪ್ರಾಣಿಗಳ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮುಂದಾಗಿಲ್ಲ.ಪ್ರವಾಹ ಸಂದರ್ಭದಲ್ಲಿ ಮನೆ ಆಸ್ತಿಪಾಸ್ತಿ ಕಳೆದುಕೊಂಡು ಸಂಕಷ್ಟದಲ್ಲಿರುವವರಿಗೆ ಇಂದಿಗೂ ಶಾಶ್ವತ ಸೂರು ಪರಿಹಾರ ಸಿಕ್ಕಿಲ್ಲ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸರ್ಕಾರಗಳು ರಾಜಕೀಯ ಕಾಲಹರಣ ಮಾಡುತ್ತಿದೆ ಹೊರತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಚಿಂತಿಸುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. ಜಿಲ್ಲೆಯಿಂದ ಗೆದ್ದ ಜನಪ್ರತಿನಿಧಿಗಳು ಕೇಂದ್ರ ಹಾಗೂ ರಾಜ್ಯ ಸರಕಾರದ ಗಮನ ಸೆಳೆದು ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸಲಿ ಎಂದರು. 
ಎಸ್ ಡಿಪಿಐ ಪಕ್ಷದ  ನೂತನ ಕಚೇರಿಯನ್ನು ಬೆಳೆಗಾರ ಸಿ.ಕೆ ಮೊಯ್ದು ಉದ್ಘಾಟಿಸಿ ಶುಭ ಹಾರೈಸಿದರು.  
ಈ ಸಂದರ್ಭ ಪಾಲಿಬೆಟ್ಟ ವಲಯದ ಅಧ್ಯಕ್ಷ ಪೈಸಲ್, ಜಿಲ್ಲಾ ಸಮಿತಿ ಸದಸ್ಯರಾದ ಕಲೀಲ್, ಮುಸ್ತಫ, ಸಂಶೀರ್ ಪ್ರಮುಖರಾದ ರೋಶನ್, ಇಬ್ರಾಹಿಂ, ರವೂಫ್, ಹಂಸ ಮತ್ತಿತರರು ಇದ್ದರು.

ಬಿಜೆಪಿ ದುರಾಡಳಿತದ ವಿರುದ್ಧ ಆಕ್ರೋಶ. ದೇಶವನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಮೋದಿ ಸರಕಾರ : ಗುಣಶೇಖರ್.

ಸಿದ್ದಾಪುರ : ದೇಶವನ್ನು ಸಂಕಷ್ಟಕ್ಕೆ ಸಿಲುಕಿಸಿ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಹೊರೆಯನ್ನು ಹಾಕಿ ಜಾತಿ ರಾಜಕೀಯ ಕಾಲಹರಣ ಮಾಡುತ್ತಿರುವ ಬಿಜೆಪಿಯ ದುರಾಡಳಿತದ ವಿರುದ್ಧ  ನಿರಂತರ ಹೋರಾಟ ಮಾಡಲಾಗುವುದು ಎಂದು ಸಿಪಿಐ ಪಕ್ಷದ ರಾಜ್ಯ ಮಂಡಳಿ ಸದಸ್ಯ ಗುಣಶೇಖರ್ ಎಚ್ಚರಿಸಿದ್ದಾರೆ. ಸಿದ್ದಾಪುರದಲ್ಲಿ ನಡೆದ ಸಿಪಿಐ ಪಕ್ಷದ  ರಾಷ್ಟ್ರೀಯ ಸಮ್ಮೇಳನ ನಡೆಸಲು ಪೂರ್ವಭಾವಿ ಸಿದ್ಧತೆ ಸಭೆಯಲ್ಲಿ ಗುಣಶೇಖರ್  ಮ‍ಾತನಾಡಿ  ಈ ದೇಶಕ್ಕೆ ಅಚ್ಚೇದಿನ್ ಬರುತ್ತದೆ ಎಂದು ನಂಬಿ ಜನಸಾಮಾನ್ಯರು ಬಿಜೆಪಿಗೆ ಮತ ಹಾಕಿದ್ದಾರೆ.ಜನಮತದಿಂದ ಗೆದ್ದ ಬಿಜೆಪಿ ಜನಸಾಮಾನ್ಯರ ವಿರುದ್ಧವಾಗಿಯೇ ನಡೆಯುತ್ತಿದೆ.ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ  ನೋಟು ಅಮಾನೀಕರಣ, ಜಿಎಸ್ ಟಿ, ರೈತ, ಕಾರ್ಮಿಕ ವಿರೋಧಿ ನೀತಿ,ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ,ನಿರುದ್ಯೋಗ ಸಮಸ್ಯೆ ಸೇರಿದಂತೆ ಹಲವಾರು  ಸಂಕಷ್ಟವನ್ನು ಎದುರಿಸುತ್ತಿರುವ ದೇಶದ ಜನರು ಬಿಜೆಪಿ ದುರಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಕಪ್ಪು ಹಣ ತಂದು ಕೊಡುವುದಾಗಿ ಸುಳ್ಳು ಹೇಳಿದ ಬಿಜೆಪಿ ಇದೀಗ ಭ್ರಷ್ಟಾಚಾರ ಆರೋಪದಲ್ಲಿ ನಿಂತಿದೆ.ಕಾರ್ಪೊರೇಟ್ ಕಂಪನಿಗಳ ಪರವಾಗಿ ಕೆಲಸ ನಿರ್ವಹಿಸುತ್ತಿರುವ ಬಿಜೆಪಿ ಬಹುತೇಕ ಇಲಾಖೆಗಳನ್ನು ಖಾಸಗೀಕರಣ ಮಾಡಲು ಮುಂದಾಗಿದೆ.ಜನ ಸಾಮಾನ್ಯರಿಗೆ ನೆರವಾಗಬೇಕಾಗಿದ್ದ ಸರಕಾರಗಳು  ಅಭಿವೃದ್ಧಿ ಕಾಳಜಿ ಬಗ್ಗೆ ಚಿಂತಿಸದೆ ಕೋಮು ಜಾತಿ ರಾಜಕೀಯ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು. ಸಿಪಿಐ ಪಕ್ಷದ ರಾಜ್ಯ ಮಂಡಳಿ ಸದಸ್ಯ ಅಮ್ಜದ್   ಮಾತನಾಡಿ ಜನಪರ ಚಳವಳಿ ಮೂಲಕ  97 ವರ್ಷ ಪೂರೈಸಿರುವ ಸಿಪಿಐ ಪಕ್ಷದ ಸಂಸ್ಥಾಪನಾ ದಿನ ಅಂಗವಾಗಿ ಜಿಲ್ಲೆ, ರಾಜ್ಯ, ರಾಷ್ಟ್ರೀಯ ಸಮ್ಮೇಳನಗಳನ್ನು ನಡೆಸಲು ಪೂರ್ವಭಾವಿ  ಸಭೆಗಳನ್ನು  ನಡೆಸಲಾಗುತ್ತಿದ್ದು ವಿಜಯವಾಡದಲ್ಲಿ ನಡೆಯುವ ರಾಷ್ಟ್ರೀಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ಮುಂದಾಗಬೇಕೆಂದು ಮನವಿ ಮಾಡಿದ ಅವರು ಕಾಂಗ್ರೆಸ್ ಆಡಳಿತದಿಂದ ಬೇಸತ್ತ ಜನ ಪರ್ಯಾಯವಾಗಿ ಬಿಜೆಪಿಗೆ ಅಧಿಕಾರ ಕೊಟ್ಟರು.ಬಿಜೆಪಿ 7ವರ್ಷಗಳ ಆಡಳಿತದ ಅವಧಿಯಲ್ಲಿ ಜನರಿಗೆ ದ್ರೋಹ ಮಾಡಿ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಜನ ವಿರೋಧಿ ನೀತಿಗಳನ್ನು ತರುವ ಮೂಲಕ ಜನಸಾಮಾನ್ಯರನ್ನು ಸಂಕಷ್ಟದಲ್ಲಿ ಸಿಲುಕಿಸಿದ್ದಾರೆ ಎಂದು ಆರೋಪಿಸಿದರು.ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಸೋಮಪ್ಪ ಮಾತನಾಡಿ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ನಾಯಕರುಗಳು ಸಲಹೆ ನೀಡಿದ್ದು ಪಕ್ಷ ಸಂಘಟನೆಗೆ ಮುಂದಾಗುವುದಾಗಿ ಹೇಳಿದ ಅವರು  ಸಿಪಿಐ ರಾಷ್ಟ್ರೀಯ ಸಮ್ಮೇಳನದ ಭಾಗವಾಗಿ  ಕೊಡಗು ಜಿಲ್ಲೆಯಲ್ಲೂ ಸಮ್ಮೇಳನ ನಡೆಸಲು ಚರ್ಚಿಸಲಾಗಿದೆ ಎಂದರು.ಸಿಪಿಐ ಪಕ್ಷದ ರಾಜ್ಯ ಕಾರ್ಯಕಾರಿ  ಸಮಿತಿ ಸದಸ್ಯಕೆ .ವಿ ಸುನೀಲ್ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಹಲವಾರು ಸಮಸ್ಯೆಗಳಿದ್ದು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದ ಬಿಜೆಪಿಯ ಜನಪ್ರತಿನಿಧಿಗಳು ರಾಜಕೀಯ ಕಾಲಹರಣ ಮಾಡುತ್ತಿದ್ದಾರೆ.ಬೆಳೆಗಾರರು ಕಾರ್ಮಿಕರ ಗಂಭೀರ ಸಮಸ್ಯೆಗಳಿದ್ದರೂ ಜನರ ಪರವಾಗಿ ಸ್ಪಂದಿಸಬೇಕಾದ  ಸರ್ಕಾರಗಳು ಮಲತಾಯಿ ಧೋರಣೆ ಮಾಡುತ್ತಿರುವುದು ಸರಿಯಲ್ಲ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ  ಸ್ಪಂದಿಸಲಿ  ಎಂದು ಹೇಳಿದರು.ಈ ಸಂದರ್ಭ ಎಐಟಿಯುಸಿ ಉಪಾಧ್ಯಕ್ಷ ಮಣಿ,ಪ್ರಮುಖರಾದ ಕೃಷ್ಣ ಕರಡಿಗೋಡು,ಸೀತಾರಾಂ, ರಮೇಶ್ ,ಕುಮಾರ್, ಪ್ರಕಾಶ್,ಆನಂದ್ ಸೇರಿದಂತೆ ಮತ್ತಿತರರು ಇದ್ದರು.

ಗದಗ ಜಿಲ್ಲೆಯಲ್ಲಿ ಕ್ವೆಸ್ಟ್ ಫೌಂಡೇಷನ್ ನಿರ್ಮಿಸಿದ "ಕ್ವೆಸ್ಟ್ ಕನಸಿನ ಮನೆ" ಕೀಲಿಕೈ ಹಸ್ತಾಂತರ

ಗದಗ (web@timesofcoorg): ಉತ್ತರ ಕರ್ನಾಟಕದ ಗದಗಿನ ಜಿಲ್ಲೆಯ ಸೀತಾಲಹರಿ ಎಂಬ ಸಣ್ಣ ಗ್ರಾಮದ ಒಂದು ಬಡ ನಿರ್ಗತಿಕ ಕುಟುಂಬಕ್ಕೆ ಕ್ವೆಸ್ಟ್ ಫೌಂಡೇಶನ್ ಮನೆ ನಿರ್ಮಿಸಿ ಕೊಟ್ಟಿದೆ. ಕ್ವೆಸ್ಟ್ ಸಂಸ್ಥಾಪಕರಾದ ಜಾಫರ್ ನೂರಾನಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗದಗ ಪ್ರಮೋಶನ್ ಕೌನ್ಸಿಲ್ ಸಲಹೆಗಾರ ಬಶೀರ್ ಹಾಜಿ ಕುಂಬ್ರ ಮನೆಯ ಕೀಲಿಕೈ ಕುಟುಂಬಕ್ಕೆ ಹಸ್ತಾಂತರಿಸಿದರು. ಕಳೆದ ಹಲವಾರು ವರ್ಷಗಳಿಂದ ಪಾಳುಬಿದ್ದ ಮನೆಯಲ್ಲಿ ಈ ಬಡ ಕುಟುಂಬ ತಂಗುವ ಶೋಚನೀಯ ಸ್ಥಿತಿ ತಿಳಿದು ಕ್ವೆಸ್ಟ್ ಗದಗ ಕಾರ್ಯಕರ್ತರು ಅಲ್ಲಿ ಆಗಮಿಸಿ ಕನಸಿನ ಮನೆ ನಿರ್ಮಿಸಿಕೊಟ್ಟರು.

ನೂತನ ಮನೆ ಉದ್ಘಾಟನಾ ಸಮಾರಂಭದಲ್ಲಿ ಕ್ವೆಸ್ಟ್ ಫೌಂಡೇಶನ್ ಸಹ-ಸಂಸ್ಥಾಪಕ ಹಬೀಬುಲ್ಲಾ ಸಖಾಫಿ, ಕ್ವೆಸ್ಟ್ ಡಿ.ಜಿ ಸಯ್ಯಿದ್ ಮಿದ್ಲಾಜ್ ಬಾ-ಅಲವಿ, ಮೌಲಾ ಸಾಬ್ ಸಿದ್ಧಾಪುರ, ವಾಣಿಜ್ಯ ಸಂಘಟನೆಯ ಅಧ್ಯಕ್ಷ ವಿ.ಎ.ಮುಹಮ್ಮದ್ ಹಾಜಿ ಗಂಗಾವತಿ, ಪಂಚಾಯತ್ ಅಧ್ಯಕ್ಷ ಹೊನ್ನಪ್ಪ, ಹಾಜಿ ಗುಲಾಂ ಹುಸೇನ್ ಬನ್ನೂರು, ಸಯ್ಯಿದ್ ಎಸ್.ಬಿ. ಖಾದಿರಿ ಫಕ್ರುದ್ದೀನ್ ಸಾಬ್ ಗಂಗಾವತಿ, ಸಲೀಂ ಮುಲ್ಲಾ ಮುಂತಾದವರು ಭಾಗಿಯಾಗಿದ್ದರು.

*ವಾರ್ಷಿಕ ಸಾಧಕ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾದ ನೌಶಾದ್ ಜನ್ನತ್*.

ಕುಶಾಲನಗರ : ಸಮಾಜ ಸೇವೆಯ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ನಮ್ಮ ಕೊಡಗು ತಂಡದ ಸಂಸ್ಥಾಪಕ ಹಾಗೂ ಸಾಹಿತಿ  ಕುಶಾಲನಗರದ ನೌಷಾದ್ ಜನ್ನತ್ ಗೆ ತನುಶ್ರೀ ವಾರ್ಷಿಕ ಸಾಧಕ ರಾಜ್ಯ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.ಚಿತ್ರದುರ್ಗದ ತನುಶ್ರೀ  ಪ್ರಕಾಶನ ಸಂಸ್ಥೆ ಇದೇ ಪ್ರಥಮ ಬಾರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕಾರವನ್ನು ಸೇವಾ ಸಾಧಕರಿಗೆ ಗೌರವಿಸಲು ಪ್ರಶಸ್ತಿ ಪ್ರದಾನ  ಸಮಾರಂಭವನ್ನ ಸೂಲೇನಹಳ್ಳಿಯಲ್ಲಿ ಆಯೋಜಿಸಲಾಗಿದೆ.ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸೇವಾ ಸಾಧಕರಾಗಿರುವ 5ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.ನೌಶಾದ್ ಜನ್ನತ್ ಬಗ್ಗೆ  ಹಲವು ವರ್ಷಗಳಿಂದ ನಮ್ಮ ಕೊಡಗು ತಂಡವನ್ನ ಕಟ್ಟಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಜೀವದ ಹಂಗು ತೊರೆದು ಜನರ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದಲ್ಲದೆ.ನದಿ ದಡ ಪ್ರವಾಹ ಸಂತ್ರಸ್ತರಿಗೆ ತುರ್ತು ಸಂದರ್ಭಕ್ಕೆ ಬೇಕಾದ ಅಗತ್ಯ ವಸ್ತುಗಳ ಕಿಟ್ ಗಳನ್ನು ವಿತರಿಸಲಾಗಿದೆ.ಕೋವಿಡ್ ಸಂದರ್ಭದಲ್ಲಿ ಆದಿವಾಸಿಗಳು ಸೇರಿದಂತೆ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಅರ್ಹರಿಗೆ ಕಿಟ್ ಗಳನ್ನು ವಿತರಿಸಲಾಗಿದೆ.ಆರೋಗ್ಯ, ಶಿಕ್ಷಣ, ಸಂಕಷ್ಟದಲ್ಲಿರುವವರಿಗೆ ನೆರವು ಸೇರಿದಂತೆ ಹಲವಾರು ಸಮಾಜ ಸೇವೆಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ.ಕಳೆದ ಹಲವು ವರ್ಷಗಳ ಸಾಮಾಜಿಕ ಕಳಕಳಿಯ ಸೇವೆಯನ್ನು ಪರಿಗಣಿಸಿ ಈಗಾಗಲೇ ಹಲವಾರು ಪ್ರಶಸ್ತಿಗಳಾದ
 1)ಉತ್ತರ ಕರ್ನಾಟಕದ ಪ್ರತಿಷ್ಠಿತ ಮತ್ತು ಪಂಡಿತ್ ಪುಟ್ಟರಾಜು ಗವಾಯಿಯವರು  ಪ್ರಥಮವಾಗಿ ಪಡೆದ ಪ್ರಸಿದ್ದ *2019ನೇ ಸಾಲಿನ ನವರತ್ನ ರಾಜ್ಯ ಪ್ರಶಸ್ತಿ*
2)ರಾಜ್ಯ ಕಾರ್ಮಿಕರ ಒಕ್ಕೂಟ ನೀಡುವ *2018ನೇ ಸಾಲಿನ ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿ*
3)ಕನ್ನಡ ಮನಸುಗಳ ಪ್ರತಿಷ್ಠಾನದ *2018ನೇ ಸಾಲಿನ ಕನ್ನಡ ಸೇವಾ ರತ್ನ ಪ್ರಶಸ್ತಿ*
4)ಕರ್ನಾಟಕ ಸರಕಾರ ಚೊಚ್ಚಲ ಕೃತಿಗೆ ನೀಡುವ *2019ನೇ ಸಾಲಿನ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿ*
5)ಬನವಾಸಿ ಕನ್ನಡಿಗರು ನೀಡುವ *2020 ನೇ ಸಾಲಿನ ಬನವಾಸಿ ಕನ್ನಡಿಗ ಪ್ರಶಸ್ತಿ*
6)ಕರ್ನಾಟಕ ಮಹಿಳಾ ಮತ್ತು ಮಕ್ಕಳ ಸಾಧನ ಅಭಿವೃದ್ಧಿ ಚಾರಿಟೇಬಲ್ ಸಂಸ್ಥೆ, ದಾವಣಗೆರೆ, ನೀಡುವ *2021ನೇ ಸಾಲಿನ ರಾಜ್ಯಮಟ್ಟದ "ಜನ ಸೇವಾ ರತ್ನ ಪ್ರಶಸ್ತಿ"*
7)ಜಯಕರ್ನಾಟಕ ಸಂಘಟನೆ ನೀಡುವ *2021ನೇ ಸಾಲಿನ ಜಯಕರ್ನಾಟಕ ಪ್ರಶಸ್ತಿ ಲಭಿಸಿದ್ದು  ರಾಜ್ಯದ ಹಲವಾರು ಸಂಘ ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದೆ ಸಾಹಿತ್ಯ ಕ್ಷೇತ್ರದಲ್ಲೂ ಸಾಧನೆ ಮಾಡಿರುವ ಉತ್ತಮ ಬರಹಗಾರರಾಗಿರುವ ನೌಷಾದ್. ಕಡಮಕಲ್ಲು ಹಾಗೂ ಜಲಪ್ರಳಯ  ಪುಸ್ತಕಗಳನ್ನು ಬಿಡುಗಡೆ ಮಾಡಿದ್ದಾರೆ

ಪೊನ್ನಪ್ಪಸಂತೆ ಮದರಸದಲ್ಲಿ ಮೌಲೂದ್ ಪಾರಾಯಣ ,

ಪೊನ್ನಂಪೇಟೆ : ಸಮಸ್ತ ಕರ್ನಾಟಕ ಸುನ್ನಿ ಬಾಲವೇದಿ ಸಂಘಟನೆ ವತಿಯಿಂದ ನಾಲ್ಕನೇ ವರ್ಷದ  ಮೌಲೂದ್ ಪಾರಾಯಣ ಹಾಗೂ  ಧಾರ್ಮಿಕ ಕಾರ್ಯಕ್ರಮ ಪೊನ್ನಪ್ಪಸಂತೆ  ಇಝ್ಝತುಲ್ ಇಸ್ಲಾಂ ಮದರಸ  ಸಭಾಂಗಣದಲ್ಲಿ ನಡೆಯಿತು.  ಜುಮಾ ಮಸೀದಿಯ ಖತೀಬ್ ಮುನೀರ್ ಬಾಖವಿ ದುವಾ ನೇತೃತ್ವ ವಹಿಸಿದರು ಮುಸ್ಲಿಂ  ಜಮಾಅತ್ ಕಮಿಟಿ ಅಧ್ಯಕ್ಷ  ಮೊಹಮ್ಮದ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಕಮಿಟಿಯ ಪ್ರಮುಖರಾದ ಸಿ.ಕೆ ಮುಸ್ತಫಾ , ಇಲಿಯಾಸ್ ,  ನೌಷಾದ್ ಮಿಸ್ಬಾಯಿ,ಮುಸ್ತಫಾ,ಬಾಪು,ಅಲಿ, ಉಮ್ಮರ್  ಸೇರಿದಂತೆ ಮತ್ತಿತರರು ಇದ್ದರು

ಜಲಜೀವನ್ ಯೋಜನೆ ಅಡಿಯಲ್ಲಿ 2024ಕ್ಕೆ ಗ್ರಾಮೀಣ ಪ್ರದೇಶದ ಎಲ್ಲಾ ಮನೆಗಳಿಗೂ ಕುಡಿಯುವ ನೀರಿನ ವ್ಯವಸ್ಥೆ -ಕೆ ಜಿ ಬೋಪಯ್ಯ

 


ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು : ಪ್ರಧಾನಮಂತ್ರಿಗಳ ಜಲಜೀವನ್ ಯೋಜನೆ ಅಡಿಯಲ್ಲಿ ಗ್ರಾಮೀಣ ಪ್ರದೇಶದ ಎಲ್ಲಾ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲು ಕೇಂದ್ರ ಸರ್ಕಾರದಿಂದ 1.30ಕೋಟಿ ಹಣ ಬಿಡುಗಡೆಯಾಗಿದ್ದು 2024 ಕ್ಕೆ ಗ್ರಾಮೀಣ ಪ್ರದೇಶದ ಎಲ್ಲಾ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆಜಿ ಬೋಪಯ್ಯನವರು ಹೇಳಿದರು.


 ನಾಪೋಕ್ಲು ಸಮೀಪದ ಕಕ್ಕಬ್ಬೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಹೋಗುವ ರಸ್ತೆ ನಿರ್ಮಿಸಲು ಮತ್ತು ಇಂಟರ್ ಲಾಕ್ ಅಳವಡಿಸಲು ಸುಮಾರು 17 ಲಕ್ಷ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.


 ಈ ಕಾಮಗಾರಿಗೆ ಸಂಸದರಿಂದ 3ಲಕ್ಷ ವಿಧಾನಪರಿಷತ್ ಅನುದಾನದಿಂದ 5ಲಕ್ಷ, ವಿಧಾನಸಭಾ ಅನುದಾನದಿಂದ 5ಲಕ್ಷ ಮತ್ತು ರಸ್ತೆಕಾಮಗಾರಿಗೆ 4ಲಕ್ಷಗಳ ಅನುದಾನ ಇದೆ ಎಂದರು.


 ಪ್ರಧಾನ ಮಂತ್ರಿಗಳ ಜಲಜೀವನ್ ಮಿಷನ್ ಯೋಜನೆ ಅನ್ವಯ ಕೇಂದ್ರ ಸರ್ಕಾರವು ಶೇ 60%ರಷ್ಟು ಹಣವನ್ನು ಮತ್ತು ರಾಜ್ಯ ಸರ್ಕಾರವು ಶೇ 40% ಹಾಗೂ ಗ್ರಾಮ ಪಂಚಾಯಿತಿ ಶೇ 15%ರಷ್ಟು ಹಣವನ್ನು ವಹಿ ಸಬೇಕಿದ್ದು ಈ ಯೋಜನೆಯ ಫಲಾನುಭಾವಿಗಳು ಉಪಯೋಗಿಸುವ ನೀರಿಗೆ ವಾರ್ಷಿಕವಾಗಿ ಸ್ವಲ್ಪ ರೀತಿಯಲ್ಲಿ ಹಣವನ್ನು ಪಾವತಿ ಮಾಡಬೇಕಿದೆ ಎಂದರು.


ಅದರಂತೆ ಈಗಾಗಲೇ ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳ ದುರಸ್ತಿಗೆ ಹಣ ಬಿಡುಗಡೆ ಮಾಡಿದೆ ಎಂದ ಅವರು ನಿರಂತರ ಮಳೆಯಿಂದಾಗಿ ಕಾಮಗಾರಿಯನ್ನು ಪ್ರಾರಂಭಿಸಲು ಸಾಧ್ಯವಾಗದೆ ರಸ್ತೆಗಳು ತೀರಾ ಹದಗೆಟ್ಟಿದ್ದು ತಿಳಿದುಬಂದಿದೆ ಮಳೆ ನಿಂತ ಕೂಡಲೇ ಕಾಮಗಾರಿ ಪ್ರಾರಂಭಿಸಲಾಗುವುದು ಇದಕ್ಕೆ ಜನರ ಸಹಕಾರ ಮುಖ್ಯವಾಗಿ ಬೇಕು ಎಂದರು. ಈಗಾಗಲೇ ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದ ಹಿಂಬದಿಯಲ್ಲಿ ತಡೆಗೋಡೆಯನ್ನು 50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಸಿದ ಅವರು ಅದರಂತೆ ಇಗ್ಗುತ್ತಪ್ಪ ದೇವಾಲಯದ ರಸ್ತೆಯನ್ನು ಮುಂದಿನ ದಿನಗಳಲ್ಲಿ ಅಗಲೀಕರಣ ಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದರು.


 ಈ ಸಂದರ್ಭ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಲಿಯಾಟಂಡ ರಘು ತಮ್ಮಯ್ಯ ಮಾತನಾಡಿ ಮಾನ್ಯ ಶಾಸಕರು ನಮ್ಮ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದ ಹಿಂಬದಿಯಲ ತಡೆಗೋಡೆ ನಿರ್ಮಿಸಲು 50 ಲಕ್ಷ ಅನುದಾನವನ್ನು ನೀಡಿದ್ದಾರೆ. ಅದರಂತೆ ಈಗಲು 17ಲಕ್ಷ  ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ಯನ್ನು ನಿರ್ಮಿಸಲು ಹಣವನ್ನು ಮಂಜೂರು ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸಿ ಮುಂದೆ ಈ ಕಾಮಗಾರಿ ಪೂರ್ಣಗೊಂಡ ಕೂಡಲೇ ಇದರ ಉದ್ಘಾಟನೆಯನ್ನುಮಾಡಲಾಗುವುದು ಎಂದು ತಿಳಿಸಿದರು.


 ಕಾರ್ಯಕ್ರಮದಲ್ಲಿ ಕಕ್ಕಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ಉಪಾಧ್ಯಕ್ಷೆ ರಸೀನಾ,ಸದಸ್ಯರಾದ ಶೈಲಾ ಕುಟ್ಟಪ್ಪ, ಇಂದಿರಾ,ಹರೀಶ್, ಶಫಿಯಾ,ಪಿ ಡಿ ಓ ಅಶೋಕ, ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಬಡಕಡ ಬೆಳ್ಯಪ್ಪ, ನಿರ್ದೇಶಕರಾದ ಅಲ್ಲಾರಂಡ ಸನ್ನು ಅಯ್ಯಪ್ಪ, ನೀಡುಮಂಡ ಹರೀಶ್ ಪೂವಯ್ಯ, ಕಲಿಯಂಡ ಬೋಪಣ್ಣ,ಎ.ಎನ್ ಲಕ್ಷ್ಮಣ, ಪರದಂಡ ಪ್ರಮೀಳಾ, ನಂಬಡಮಂಡ ಸುನಿತಾ,ಪಾಲೆ ಕಾರ್ಯಪ್ಪ, ಕೋಲೆಯಂಡ ಅಶೋಕ, ಕುಡಿಯರ ಗಿರೀಶ್,ಬಡಕಡ ದೀನಾ ಪೂವಯ್ಯ, ಚಂಡೀರ ಜಗದೀಶ್, ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಮಂಜುಳಾ,ಹಾಗೂ ಸಿಬ್ಬಂದಿ ವರ್ಗದವರು ಮತ್ತು ಪಾಂಡಂಡ ನರೇಶ್, ಕಲಿಯಂಡ ಸುನಂದ ಮತ್ತು ಅರ್ಚಕರಾದ ಶ್ರೀಕಾಂತ್, ಶ್ರೀನಿವಾಸ್, ಮತ್ತಿತರರು ಇದ್ದರು.

ಕೊಡಗಿನಲ್ಲಿ ಶಾಲೆ ಆರಂಭ: ಜಿಲ್ಲಾಧಿಕಾರಿ ಅವರಿಂದ ಆದೇಶ

ಮಡಿಕೇರಿ ಅ.22:-ಕೋವಿಡ್-19 ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಶಾಲೆ ಆರಂಭ ಸಂಬಂಧ  ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ 1 ರಿಂದ 5 ನೇ ತರಗತಿಗಳನ್ನು ‘ಪ್ರಮಾಣಿತ ಕಾರ್ಯಾಚರಣಾ ವಿಧಾನ’ ಪಾಲಿಸಿ ಪ್ರಾರಂಭಿಸುವ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಆದೇಶ ಹೊರಡಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿನ ಕೋವಿಡ್-19 ಪಾಸಿಟಿವಿಟಿ ದರ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಕರ್ನಾಟಕ ಸಾಂಕ್ರಾಮಿಕ ರೋಗಗಳು, ಕೋವಿಡ್-19 ರೆಗ್ಯೂಲೇಷನ್ 2020, ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಆಕ್ಟ್-2005 ರ ಕಲಂ 34 ಮತ್ತು ದಂಡಪ್ರಕ್ರಿಯಾ ಸಂಹಿತೆ 1973 ರ ಕಲಂ 144(3) ರಡಿಯಲ್ಲಿ ದತ್ತವಾದ ಅಧಿಕಾರದಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಆದೇಶ ಹೊರಡಿಸಿದ್ದಾರೆ. 

ಕೊಡಗು ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿನ 1 ರಿಂದ 5 ನೇ ತರಗತಿಗಳನ್ನು ಸಂಬಂಧಪಟ್ಟ ಶಾಲೆಯ ಸುತ್ತೋಲೆಯಂತೆ ಪ್ರಮಾಣಿತ ಕಾರ್ಯಾಚರಣಾ ವಿಧಾನ(ಕೋವಿಡ್-19 ಎಸ್‍ಒಪಿ) ಪಾಲಿಸಿ ಅಕ್ಟೋಬರ್, 25 ರಿಂದ ಪ್ರಾರಂಭಿಸುವುದು.  

ಹಿಂದುಳಿದ, ಅಲ್ಪಸಂಖ್ಯಾತರ, ಸಮಾಜ ಕಲ್ಯಾಣ ಇತ್ಯಾದಿ ಇಲಾಖೆಗಳ ಹಾಸ್ಟೆಲ್‍ಗಳ ಅಧಿಕಾರಿ, ಸಿಬ್ಬಂದಿಗಳು ಕನಿಷ್ಟ 1 ಕೋವಿಡ್ 19 ಲಸಿಕೆ ಪಡೆದಿರಬೇಕು.  ಶಾಲೆ, ವಿದ್ಯಾಸಂಸ್ಥೆ ಮತ್ತು ಹಾಸ್ಟೆಲ್‍ಗಳನ್ನು ನಿಯಮಾನುಸಾರ ಸ್ಯಾನಿಟೈಸ್ ಮಾಡುವುದು. ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಕಡ್ಡಾಯವಾಗಿ ಕನಿಷ್ಟ 1 ಕೋವಿಡ್-19 ಲಸಿಕೆ ಪಡೆದಿರಬೇಕು. 

ವಿದ್ಯಾರ್ಥಿಗಳ ಪಾಲಕರು ಕೋವಿಡ್-19 ಲಸಿಕೆ ಪಡೆದಿರುವುದನ್ನು ಖಚಿತಪಡಿಸಿಕೊಳ್ಳುವುದು. ಪ್ರತಿ ಶಿಕ್ಷಣ ಸಂಸ್ಥೆಯಲ್ಲಿ, ಹಾಸ್ಟೆಲ್‍ಗಳಲ್ಲಿ ಒಂದು ಕೊಠಡಿಯನ್ನು ಐಸೋಲೇಷನ್ ಕೊಠಡಿ ಆಗಿ ಕಾಯ್ದಿರಿಸುವುದು. 

ಶಾಲಾ ಕಾಲೇಜು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಮಾಣಿತ ಕಾರ್ಯಾಚರಣಾ ವಿಧಾನದಂತೆ ನಿಯಮಾನುಸಾರ ಸೂಕ್ತ ಕೆಎಸ್‍ಆರ್‍ಟಿಸಿ, ಖಾಸಗಿ ಸಾರಿಗೆ ವ್ಯವಸ್ಥೆ ಬಗ್ಗೆ ಕ್ರಮವಹಿಸುವುದು. 

ಈ ಆದೇಶವು ಕರ್ನಾಟಕ ಸರ್ಕಾರವು ಕಾಲಕಾಲಕ್ಕೆ ನೀಡುವ ನಿರ್ದೇಶನಗಳಿಗೆ ಒಳಪಟ್ಟಿರುತ್ತದೆ. ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಬದಲಾವಣೆಗಳನ್ನು ಜಿಲ್ಲಾಡಳಿತವು ಮುಂದಿನ ದಿನಗಳಲ್ಲಿ ನೀಡಲಿದೆ. ಈ ಆದೇಶದ ದುರುಪಯೋಗ ಅಥವಾ ಉಲ್ಲಂಘನೆಯು ಭಾರತ ದಂಡ ಸಂಹಿತೆ ಕಲಂ 1860, ದಿ ಕರ್ನಾಟಕ ಎಪಿಡೆಮಿಕ್ ಡಿಸೀಸಸ್ ಆಕ್ಟ್ 2020, ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಆಕ್ಟ್ 2005 ರಡಿ ಮತ್ತು ಸಂಬಂಧಪಟ್ಟ ವಿವಿಧ ಕಾಯ್ದೆಗಳಡಿ ದಂಡನೀಯವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಆದೇಶದಲ್ಲಿ ತಿಳಿಸಿದ್ದಾರೆ.

SDPI ಸುಂಟಿಕೊಪ್ಪ ಗ್ರಾಮ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ಅಬ್ದುಲ್ ಬಾಸಿತ್ ಸುಂಟಿಕೊಪ್ಪ ಆಯ್ಕೆ

ಸುಂಟಿಕೊಪ್ಪ ಅ 22 : SDPI ಸುಂಟಿಕೊಪ್ಪ  ಗ್ರಾಮ ಸಮಿತಿಯ 2021- 2024 ರ  ನೂತನ ಪದಾಧಿಕಾರಿಗಳನ್ನು  ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಅಬ್ದುಲ್ ಬಾಸಿತ್,ಉಪಾಧ್ಯಕ್ಷರಾಗಿ ರೇಷ್ಮ,ಕಾರ್ಯದರ್ಶಿ ಯಾಗಿ ಲತೀಫ್, ಜೊತೆ ಕಾರ್ಯದರ್ಶಿಯಾಗಿ ಝುಬೈರ್,ಕೋಶಾಧಿಕಾರಿ ಯಾಗಿ ಅಬ್ಬಾಸ್ ಹಾಗೂ ಸಮಿತಿ ಸದಸ್ಯರಾಗಿ ಆಯಿಶಾ ಮತ್ತು  ಸಿಕಂದರ್ ಆಯ್ಕೆ ಯಾದರು

 ಚುನಾವಣಾ ಪ್ರಕ್ರಿಯೆಯನ್ನು SDPI ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಫೀ ಕುಶಾಲನಗರ ಹಾಗೂ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ಉಸ್ಮಾನ್ ಸುಂಟಿಕೊಪ್ಪ ನಡೆಸಿಕೊಟ್ಟು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.


ಸಭೆಯಲ್ಲಿ ಮಡಿಕೇರಿ ವಿಧಾನಸಭಾ  ಕ್ಷೇತ್ರ ಸಮಿತಿಯ  ಕಾರ್ಯದರ್ಶಿ ತ್ವಾಹಾ ಯಾಸಿನ್ ಹಾಗೂ ಜೊತೆ ಕಾರ್ಯದರ್ಶಿ ಶಾಹಜಾನ್  ಉಪಸ್ಥಿತರಿದ್ದರು.

ಕೊಡ್ಲಿಪೇಟೆ : ಸಾಲ ಬಾಧೆಯಿಂದ ರೈತ್ಯ ಆತ್ಮಹತ್ಯೆ

ಕೊಡ್ಲಿಪೇಟೆ : ಸಮೀಪದ ಬೆಸೂರು ಗ್ರಾಮದ ಕ್ರಷಿಕ ರೇವಣ್ಣ (60 ) ವಿಪರೀತ ಸಾಲಬಾದೆಯಿಂದ ಮನದೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಕಾಫಿ.ಕಾಳು ಮೆಣಸು. ಶುಂಠಿ . ವ್ಯವಸಾಯದ ಜೋತೆ ಹ್ಯೆನುಗಾರಿಕೆಯನ್ನು ಮಾಡಿಕೊಂಡು ಪತ್ನಿ ಇಬ್ಬರು ಮಕ್ಕಳೊಂದಿಗೆ  ಜೀವನ ಸಾಗಿಸುತ್ತಿದ್ದರು. 

ಬ್ಯಾಂಕ್ ಹಾಗೂ ಸಂಘಗಳಿಂದ ಮತ್ತು ಕೆಲವಾರು ಕಡೆ ಕ್ಯೆ ಸಾಲ ಮಾಡಿಕೊಂಡಿದ್ದು ಮಗಳ ಮದುವೇ ಮತ್ತು ಮನೆ ಕಟ್ಟಲು ಮಾಡಿದ್ದ ಸಾಲವು ಬಾಕಿಯಿತ್ತು ಕಳೆದ ಬಾರಿ ಬೆಳೆದ ಶುಂಠಿ ಬೆಳೆಗೂ ಸೂಕ್ತ ಧರ ಸಿಗದೆ ನಷ್ಟ ಅನುಭವಿಸಿದ್ದರು .ಇದರಿಂದ ಜೀವನದಲ್ಲಿ ಏಳಿಗೆ ಕಾಣದ ಬಗ್ಗೆ ಪುತ್ರ ಹರ್ಷಿತ್ ನೊಂದಿಗೆ ಹೇಳಿಕೊಂಡು ದುಖಿಃಸುತ್ತಿದ್ದರು ಎನ್ನಲಾಗಿದೆ,

ಶುಕ್ರವಾರ ರಾತ್ರಿ ಮನೆಯ ತಾರಸಿಯ ಮೇಲೆ ಕುಳಿತು ವಿಷ ಸೇವನೆ ಮಾಡಿದ್ದು ಊಟಕ್ಕೆ ಕರೆಯಲೆಂದು ಮೇಲೆ ನೋಡಿದಾಗ ತಂದೆ ರೇವಣ್ಣ ಅಸ್ವಸ್ಥರಾಗಿದ್ದು ಕಂಡು ಬಂತು ಸಂಬಧಿಕರಿಗೆ ತಿಳಿಸಿ ಅವರೊಂದಿಗೆ ಶನಿವಾರಸಂತೆ ಸರಕಾರಿ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು ಪರಿಕ್ಷಿಸಿದ ವ್ಯೆದ್ಯರು ಮ್ರತಪಟ್ಟಿರುವುದಾಗಿ ತಿಳಿಸಿದರೆಂದು ಮಗ ಹರ್ಷಿತ್ ಶನಿವಾರಸಂತೆ ಠಾಣೆಯಲ್ಲಿ ನೀಡಿದ ಪುಕಾರಿನಲ್ಲಿ ತಿಳಿಸಿದ್ದಾರೆ,

ದೂರಿನನ್ವಯ ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಪರಶಿವಮೂರ್ತಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದರು,

ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದ ಶವಗಾರದಲ್ಲಿ ಮರಣೋತ್ತರ ಪರಿಕ್ಷೆ ನಡೆಸಿ ಮ್ರತರ ಜಮೀನಿನಲ್ಲಿ ಅಂತ್ಯಕ್ರಿಯೇ ನಡೆಸಲಾಯಿತು,