ಕೊಡ್ಲಿಪೇಟೆ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಮುಖ್ಯಾಧಿಕಾರಿಗೆ ಸನ್ಮಾನ
ವರದಿ : ಹನೀಪ್ ಕೊಡ್ಲಿಪೇಟೆ
ಕೊಡ್ಲಿಪೇಟೆ (Times Of Coorg): ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಕ್ರಷಿ ಯಂತ್ರ ಧಾರೆ (C.H.S.C )
ಹೋಬಳಿ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಂತಹ ಸದಾಶಿವ ನಾಯರ್ ರವರು ವರ್ಗಾವಣೆಯಾಗುತ್ತಿರುವ ಹಿನ್ನಲೆಯಲ್ಲಿ ಸಂಘದ ಸಿಬ್ಬಂದಿ ಗಳು ಹಾಗೂ
ಜನ ಜಾಗ್ರತಿ ವೇದಿಕೆ ವತಿಯಿಂದ ಬಿಳ್ಕೋಡುಗೆ ಸಮಾರಂಭ ನಡೆಸಿ ಸದಾಶಿವಾ ದಂಪತಿಗಳನ್ನು ಸನ್ಮಾನ ಮಾಡಿದರು.
ಇವರು ಸರಳ ಸಜ್ಜನಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದರು ಕೊಡ್ಲಿಪೇಟೆ ಯಲ್ಲಿ 5 ವರ್ಷ ಸೇವೆ ಸಲ್ಲಿಸಿ ರ‌್ಯೆತ ಮಿತ್ರರಾಗಿ .
ಜನ ಮೆಚ್ಚುಗೆ ಗೆ ಪಾತ್ರವಾಗಿದ್ದಾರೆಂದು ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಜನಜಾಗ್ರತಿ ವೇದಿಕೆಯ ಭಗವಾನ್ ಗೌಡ ಮತ್ತು ಇಂದ್ರೇಶ್, ಧರ್ಮಸ್ಥಳ ಸಂಘದ ಮದ್ಯವರ್ಜನ ಶಿಭಿರದ ವ್ಯವಸ್ಥಾಪನ ಸಮಿತಿ ಅದ್ಯಕ್ಷರಾದ ಎಸ್.ಎಸ್.ವರಪ್ರಸಾದ್ ರವರು ಮಾತನಾಡಿದರು.
ವಲಯದ ಮೆಲ್ವಿಚಾರಕಾರಾದ ರಮೇಶ್ ರವರು ಸ್ವಾಗತಿಸಿ ನಿರೂಪಿಸಿದರು. ಕ್ರಷಿ ಯಂತ್ರದಾರೆ ಸೇವಾ ಕೆಂದ್ರದ ಸಿಬ್ಬಂದಿ ವರ್ಗದವರು ಮತ್ತು ಸೇವಾ ಪ್ರತಿನಿಧಿಗಳು
ರ‌್ಯೆತರು ಹಾಜರಿದ್ದರು.




No comments
Post a Comment