ನಿಮ್ಮ ಮತಗಳನ್ನು ನೀವೇ ಸಂಪಾದಿಸಿಕೊಳ್ಳಿ’ : ಕೊಡಗು ಯೂತ್ ಕಮಿಟಿ ಒತ್ತಾಯ
ನಾಪೋಕ್ಲು: ಸವಾಲಾದ ಗುಂಡಿ ಬಿದ್ದ ರಸ್ತೆಗಳು :ದುರಸ್ತಿಗೆ ಒತ್ತಾಯ
ಕೋಮುಗಲಭೆಗೆ ಪ್ರಚೋದನೆ,ಸೂಕ್ತ ತನಿಖೆ ನಡೆಸಿ ಕಠಿಣ ಶಿಕ್ಷೆಯಾಗಲಿ : SSF KODAGU
ಎಸ್ ಕೆ ಎಸ್ ಎಸ್ ಎಪ್ ಮಾಪಿಳ್ಳೆತೋಡು ಶಾಖೆ ವತಿಯಿಂದ ರಂಜಾನ್ ಕಿಟ್ ವಿತರಣೆ
ಕಾಲೇಜಿನಲ್ಲಿ ಗೂಂಡಾಗಳಿಂದ ಹಲ್ಲೆಗೊಳಗಾದ ರಾಝಿಕ್ ನನ್ನು ಭೇಟಿಯಾದ ಎಸ್ಸೆಸ್ಸೆಫ್ ಜಿಲ್ಲಾ ಸಮಿತಿ ನಾಯಕರು
ಕುಶಾಲನಗರ : ಕುಶಾಲನಗರದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಗೂಂಡಾಗಳಿಂದ ಹಲ್ಲೆಗೊಳಗಾದ ಎಸ್ಸೆಸ್ಸೆಫ್ ಕಾರ್ಯಕರ್ತ ರಾಝಿಕ್ ನನ್ನು ಎಸ್ಸೆಸ್ಸೆಫ್ ಕೊಡಗು ಜಿಲ್ಲಾ ಸಮಿತಿ ನಾಯಕರು ಭೇಟಿ ಮಾಡಿ, ಘಟನೆಯ ಸಮಗ್ರ ವಿವರನ್ನು ಪಡೆದು ಆರೋಗ್ಯವನ್ನು ವಿಚಾರಿಸಿದರು.
ಕುಶಾಲನಗರ ವೃತ್ತ ನಿರೀಕ್ಷಕರನ್ನು ಭೇಟಿ ಮಾಡಿ ಪುಕಾರಿನ ಸಂಪೂರ್ಣ ವಿವರನ್ನು ಪಡೆದ ನಂತರ ತಪ್ಪಿತಸ್ಥರ ವಿರುದ್ಧ ಕಠಿಣವಾದ ಕ್ರಮವನ್ನು ಕೈಗೊಳ್ಳಲು ಆಗ್ರಹಿಸಿದರು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಕ್ಷಮಾ ಮಿಶ್ರಾ ಅವರ ಕಛೇರಿಗೆ ಭೇಟಿ ಮಾಡಿ ಇದರಲ್ಲಿ ಶಾಮೀಲಾಗಿರುವ ಪ್ರತಿಯೊಬ್ಬರನ್ನು ಸೂಕ್ತ ತನಿಖೆಗೆ ಒಳಪಡಿಸುವಂತೆ, ಅದೇ ರೀತಿ ಅಮಾಯಕನಾದ ರಾಝಿಕ್ ನ ಮೇಲೆ ಹಲ್ಲೆ ಮಾಡಿದಂತಹ ಪೋಲಿಸರ ಬಗ್ಗೆಯೂ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷರಾದ ಶಾಫಿ ಸಅದಿ, ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಜುನೈದ್ ಅಮ್ಮತಿ, ಯೂಸುಫ್ ಝೈನಿ ಇದ್ದರು.
ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದ ವಿರುದ್ಧ ಪ್ರಚೋದನಕಾರಿ ಮತ್ತು ಸಂವಿಧಾನ ವಿರೋಧಿ ಹೇಳಿಕೆ ನೀಡಿದ ಸಂಸದ ಪ್ರತಾಪ್ ಸಿಂಹನ ವಿರುದ್ಧ SDPI ದೂರು ದಾಖಲು
ಮಡಿಕೇರಿ : ಹಿಜಾಬ್-ಟೋಪಿ ಹಾಕಿಕೊಂಡು ಮದರಸಗೆ ಹೋಗಿ, ಶಾಲೆಗಲ್ಲ ಹಾಗೂ ಇಸ್ಲಾಂ,ಕ್ರೈಸ್ತ ಧರ್ಮಗಳು ಪರದೇಶದಿಂದ ಬಂದ ಧರ್ಮ,ಇದು ಬ್ರಿಟಿಷ್ ಭಾರತ ಅಲ್ಲ,ಹಿಂದೂ ಧರ್ಮದ ಭದ್ರ ಭಾರತ,ಗಣಪತಿ ಪೂಜೆ, ಹೆಣ್ಣು ಮಕ್ಕಳ ಕುಂಕುಮ ಇದನ್ನು ಯಾರು ಪ್ರಶ್ನಿಸುವಂತಿಲ್ಲ ಎಂಬಿತ್ಯಾದಿ ಸಂವಿಧಾನ ವಿರೋಧಿಯಾಗಿ ಮತ್ತು ಮುಸ್ಲಿಂ ಸಮುದಾಯದ ವಿರುದ್ಧವಾಗಿ ಸಂಸದ ಪ್ರತಾಪ್ ಸಿಂಹ ಪ್ರಚೋದನಕಾರಿ ಮಾತುಗಳನ್ನು ಆಡಿ ಕೋಮು ಗಲಭೆಗೆ ಯತ್ನಿಸಿದ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎಸ್‌ಡಿಪಿಐ ಮಡಿಕೇರಿ ವಿಧಾನ ಸಭಾ ಕ್ಷೇತ್ರ ಸಮಿತಿ ಸದಸ್ಯ ಅಶ್ರಫ್ ಕೆ.ವೈ ಯವರು ಮಡಿಕೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹಾಸ್ಟೆಲ್ ಗೆ ನುಗ್ಗಿ ಎಸ್ಸೆಸ್ಸೆಫ್ ಕಾರ್ಯಕರ್ತನ ಮೇಲೆ ಹಲ್ಲೆ : ಕೊಡಗು ಜಿಲ್ಲಾ ಸಮಿತಿ ಖಂಡನೆ
ಕುಶಾಲನಗರ : ಕುಶಾಲನಗರದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿದ್ಯಾರ್ಜನೆಗೈಯ್ಯುತ್ತಿರುವ ಎಸ್ಸೆಸ್ಸೆಫ್ ಕಾರ್ಯಕರ್ತನಾದ ರಾಝಿಕ್ ನ ಮೇಲೆ RSS ಗೂಂಡಾ ಕಾರ್ಯಕರ್ತರು ಹಾಸ್ಟೆಲ್ ಗೆ ನುಗ್ಗಿ ದಾಂಧಲೆ ನಡೆಸಿ ಹಲ್ಲೆಗೈದಿರುವ ಘಟನೆ ನಡೆದಿದ್ದು SSF ಕೊಡಗು ಜಿಲ್ಲಾಧ್ಯಕ್ಷರಾದ ಶಾಫಿ ಸಅದಿ ಸೋಮವಾರಪೇಟೆರವರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಪಾನಮತ್ತನಾಗಿ ಬಂದ ಸಹಪಾಠಿಯೊಬ್ಬನೊಂದಿಗೆ ಕ್ಷುಲ್ಲಕ ವಿಚಾರಕ್ಕಾಗಿ ವಾಗ್ವಾದಗಳು ನಡೆದಿದ್ದು, ಇದನ್ನೇ ಬಂಡವಾಳ ಮಾಡಿಕೊಂಡು ಕೆಲವು ಆರೆಸ್ಸೆಸ್ಸ್ ಗೂಂಡಾಗಳು ವಿದ್ಯಾರ್ಥಿಯ ಮೇಲೆ ಹಲ್ಲೆಗೈದಿರುವುದು ಅಕ್ಷಮ್ಯ ಅಪರಾಧವಾಗಿದೆ,ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಅಕ್ರಮವಾಗಿ ಹಾಸ್ಟೆಲ್ ಪ್ರವೇಶಿಸಿ ಅಲ್ಲಿನ ಬಾಗಿಲು ಮುರಿದು ಹಲ್ಲೆಗೈದಿರುವುದು ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ ಸೃಷ್ಟಿಸಿದೆ,ಯಾವುದೋ ವಿಚಾರಕ್ಕೆ ಉಂಟಾದ ವಾಗ್ವಾದವನ್ನು ಕೇಸರಿ ಶಾಲಿಗೆ ತಂದು ನೈತಿಕ ಪೋಲಿಸ್ ಗಿರಿ ಮಾಡಿ ಹಲ್ಲೆ ನಡೆಸಲು ಇವರಿಗೆ ಅವಕಾಶ ಕೊಟ್ಟವರಾರು..? ಇದರಲ್ಲಿ ಭಾಗಿಯಾದ ಪ್ರತಿಯೊಬ್ಬ ಅಪರಾಧಿಗಳನ್ನು ಕೂಡಲೇ ಬಂಧಿಸದಿದ್ದಲ್ಲಿ ತೀವ್ರ ಪ್ರತಿಭಟನೆ ಮೂಲಕ ಹೋರಾಟ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಹಾಸ್ಟೆಲ್ ನಲ್ಲಿ ಹಲವು ವಿದ್ಯಾರ್ಥಿಗಳು ಮದ್ಯಪಾನ ಮಾಡುವವರಿದ್ದಾರೆ ಹಾಗೂ ಇನ್ನಿತರ ಮಾದಕ ಚಟಗಳಿಗೆ ಬಲಿಯಾಗಿದ್ದಾರೆಯೇ ಎಂಬುದನ್ನು ಕೂಡ ಪರೀಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಫೆಬ್ರವರಿ 11ರಿಂದ 15ರವರೆಗೆ ಇತಿಹಾಸ ಪ್ರಸಿದ್ಧ ಕಡಂಗ ಕೊಕ್ಕಂಡಬಾಣೆ ಉರೂಸ್
ಕಡಂಗ : ಇತಿಹಾಸ ಪ್ರಸಿದ್ಧ ಕೊಡಗು ಜಿಲ್ಲೆಯ ಕಡಂಗ ಕೊಕ್ಕಂಡಬಾಣೆ ಮಖಾಂ ಉರೂಸ್ 2022 ಫೆಬ್ರವರಿ 11ರಿಂದ 15ರವರೆಗೆ ನಡೆಯಲಿದೆ. ಕಾರ್ಯಕ್ರಮ 11ರಂದು ಜುಮಾ ನಮಾಜಿನ ಬಳಿಕ ಧ್ವಜಾರೋಹಣದಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. 5ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳಲ್ಲಿ ಎನ್ ಪಿಎಂ ಸಯ್ಯಿದ್ ಜಲಾಲುದ್ದೀನ್ ತಂಙಳ್ ಕುನ್ನುಂಗೈ, ಕೊಡಗು ಜಿಲ್ಲಾ ನಾಯಿಬ್ ಖಾಝಿ ಅಬ್ದುಲ್ಲಾ ಫೈಝಿ, ಪ್ರಖ್ಯಾತ ಕಥಾಪ್ರಸಂಗಿಗರಾದ ಝುಬೈರ್ ಮಾಸ್ಟರ್ & ಸಂಗಡಿಗರು, ಅಬ್ದುಲ್ ಕರೀ ಫೈಝಿ ಕುಂತೂರು, ಅನ್ವರ್ ಮುಹಿಯದ್ದಿನ್ ಹುದವಿ ಆಲುವ ಮುಂತಾದ ಪ್ರಖ್ಯಾತ ವಿದ್ವಾಂಸರುಗಳು ಭಾಗವಹಿಸಲಿದ್ದಾರೆ. ಫೆಬ್ರವರಿ 14 ಮತ್ತು 15ರಂದು ಸಾಯಂಕಾಲ 3ಗಂಟೆಗೆ ಮೌಲೂದ್ ಪಾರಾಯಣ ಮತ್ತು 4:00ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.
ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ ದಾಖಲಾತಿಗೆ ಆನ್ ಲೈನ್ ಅರ್ಜಿ ಆಹ್ವಾನ
ಮಡಿಕೇರಿ ಫೆ.09 :-ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆ 2009 ಸೆಕ್ಷನ್ 12(1)(ಸಿ)ರಡಿ 2022-23 ನೇ ಸಾಲಿಗೆ ದಾಖಲಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. (ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.)ಜಿಲ್ಲೆಯ ಸೋಮವಾರಪೇಟೆ ತಾ. ಭಾರತೀಯ ವಿದ್ಯಾಭವನ ಗರುವಾಲೆ, ಕುಶಾಲನಗರದ ಜ್ಞಾನ ಭಾರತಿ ಹಿರಿಯ ಪ್ರಾಥಮಿಕ ಶಾಲೆ, ವಿರಾಜಪೇಟೆ ತಾಲ್ಲೂಕಿನ ಕಡಂಗದ ವಿಜಯ ಕಡಂಗ ಹಿರಿಯ ಪ್ರಾಥಮಿಕ ಶಾಲೆ, ವಿರಾಜಪೇಟೆ ತಾ. ಕಾವೇರಿ ಪ್ರೌಢ ಶಾಲೆ ಕುಕ್ಲೂರು, ತ್ರಿವೇಣಿ ಶಾಲೆ ಈ 05 ಶಾಲೆಗಳಿಗೆ ಶೇ.25 ರಂತೆ ಸೀಟುಗಳನ್ನು ಆರ್ಟಿಇ ಕಾಯ್ದೆ ಅಡಿ ಕಾಯ್ದಿರಿಸಲಾಗಿದೆ.
ಮಡಿಕೇರಿ ನಗರ ಸಭೆಯ ವ್ಯಾಪ್ತಿಯ ಪರವಾನಿಗೆ ಪಡೆಯದ /ನವೀಕರಿಸದ ವ್ಯಾಪಾರಸ್ಥರು ಇನ್ನೂ 15ದಿನಗೊಳಗೆ ನಗರಸಭೆಗೆ ಅರ್ಜಿ ಸಲ್ಲಿಸದಿದ್ದರೆ ಕಾನೂನು ಕ್ರಮ
ಮಡಿಕೇರಿ :-ನಗರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಉದ್ದಿಮೆಗಳು ಪರವಾನಿಗೆ/ ನವೀಕರಣ ಮಾಡಿಸದೆ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವುದು ಕಂಡು ಬಂದಿದೆ. ನಗರಸಭೆ ವತಿಯಿಂದ ನಗರ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಿಗೆ ಪಡೆಯದೆ/ ನವೀಕರಿಸದೆ ವ್ಯಾಪಾರ ಮಾಡುತ್ತಿರುವವರ ಬಗ್ಗೆ ಸಮೀಕ್ಷೆ ನಡೆಸಿದ್ದು, ಈ ಸಂದರ್ಭದಲ್ಲಿ ನೋಟೀಸ್ ಜಾರಿ ಮಾಡಲಾಗಿದ್ದು, ಪರವಾನಿಗೆ ಇಲ್ಲದೆ ವ್ಯಾಪಾರ ನಡೆಸುತ್ತಿರುವವರ ವಿವರ ನಗರಸಭೆಗೆ ಲಭ್ಯವಿರುತ್ತದೆ.
ಮಡಿಕೇರಿ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ವಿಶ್ವ ಕ್ಯಾನ್ಸರ್ ಜಾಗೃತಿ ದಿನ ಹಾಗೂ ಸಪ್ತಾಹ ಕಾರ್ಯಕ್ರಮ
ಕೊಡಗು ಜಿಲ್ಲೆಯಲ್ಲಿರುವ ಮೊರಾರ್ಜಿ ದೇಸಾಯಿ ಹಾಗೂ ಇತರೆ ವಸತಿ ಶಾಲೆಯ ಪ್ರವೇಶಕ್ಕೆ ಅರ್ಜಿ ಆಹ್ವಾನ
ಮಡಿಕೇರಿ ಫೆ.09 :-ಕೊಡಗು ಜಿಲ್ಲೆಯಲ್ಲಿರುವ ಮೊರಾರ್ಜಿ ದೇಸಾಯಿ, ಡಾ.ಬಿ.ಆರ್.ಅಂಬೇಡ್ಕರ್, ಏಕಲವ್ಯ, ಅಟಲ್ ಬಿಹಾರಿ ವಸತಿ ಶಾಲೆಗಳಲ್ಲಿ 6 ನೇ ತರಗತಿಗೆ (ಆಂಗ್ಲ ಮಾಧ್ಯಮ) 2022-23 ನೇ ಸಾಲಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
SKSSF ಕೊಡಗು ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾಗಿ ತಮ್ಲೀಕ್ ದಾರಿಮಿ - ಪ್ರಧಾನ ಕಾರ್ಯದರ್ಶಿಯಾಗಿ ಜಂಶೀರ್ ವಾಫಿ ಆಯ್ಕೆ
ನೆಲ್ಲಿಯಹುದಿಕೇರಿ KSSF ಕೊಡಗು ಜಿಲ್ಲಾ ಸಮಿತಿಯ ವಾರ್ಷಿಕ ಸಭೆ ನೆಲ್ಲಿಯಹುದಿಕೇರಿ ಕೋಫಿಯ ರೆಸ್ಟೋರೆಂಟ್ ನಲ್ಲಿ ದಿನಾಂಕ 09/02/2022 ರ ಬುಧವಾರ ನಡೆಯಿತು. ಕೌನ್ಸಿಲ್ ಕ್ಯಾಂಪ್ ಕಾರ್ಯಕ್ರಮವನ್ನು ಸಮಸ್ತ ಕೇಂದ್ರ ಮುಷಾವರ ಸದಸ್ಯರಾದ ಶೈಖುನಾ ಎಂ ಎಂ ಅಬ್ದುಲ್ಲಾ ಮುಸ್ಲಿಯಾರ್ ಉದ್ಘಾಟಿಸಿದರು. SKSSF ಕರ್ನಾಟಕ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಆರಿಫ್ ಫೈಝಿ ಹಿತನುಡಿಗಳನ್ನಾಡುತ್ತಾ ಗತಕಾಲದಲ್ಲಿ ಕೊಡಗು ಜಿಲ್ಲಾ ಸಮಿತಿಯು ನಡೆದು ಬಂದ ಹಾದಿಯನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ವಾರ್ಷಿಕ ಲೆಕ್ಕ ಪತ್ರಗಳನ್ನು ಮಂಡಿಸಿದ ನಂತರ 2022-24 ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ತಮ್ಲೀಕ್ ದಾರಿಮಿ, ಪ್ರಧಾನ ಕಾರ್ಯದರ್ಶಿಯಾಗಿ ಜಂಶೀರ್ ವಾಫಿ, ಕೋಶಾಧಿಕಾರಿಯಾಗಿ ಸಿದ್ದೀಕ್ ಹಾಜಿ ಕೊಡ್ಲಿಪೇಟೆ ಹಾಗೂ ಕಾರ್ಯಕಾರಿ ಕಾರ್ಯದರ್ಶಿಯಾಗಿ ಸಜೀರ್ ಪೊನ್ನಂಪೇಟೆ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಸುಹೈಬ್ ಫೈಝಿ, ನಾಸರ್ ದಾರಿಮಿ, ಸಿದ್ದೀಕ್ ವಾಫಿ, ಉಮ್ಮರ್ ಮುಸ್ಲಿಯಾರ್, ಮೋಹಿನುದ್ದೀನ್, ಜೊತೆ ಕಾರ್ಯದರ್ಶಿಯಾಗಿ ಹನೀಫ್ ಫೈಝಿ ಗುಂಡಿಗೆರೆ, ರಫೀಕ್ ಬಾಖವಿ ಕೊಡಗರಹಳ್ಳಿ, ಶಮೀರ್ ಕೆ.ಪಿ ಸಂಘಟನಾ ಕಾರ್ಯದರ್ಶಿಯಾಗಿ ಹನೀಫ್ ಫೈಝಿ ಎಡಪ್ಪಲ, ಶಾಹುದ್ ಅಲಿ ಕಲ್ಲುಬಾಣೆ, ಹಸ್ಸನ್ ಮಾಪಿಳತ್ತೊಡ್ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಕೇಂದ್ರ ಸಮಿತಿ ಪ್ರತಿನಿಧಿ ಬಶೀರ್ ಫೈಝಿ ಮಾಣಿಯೂರ್ ನೂತನ ಸಮಿತಿಯನ್ನು ಘೋಷಿಸಿ ಮಾತನಾಡುತ್ತಾ, ಸಂಘಟನೆಯ ಮಹತ್ವದ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಉಮ್ಮರ್ ಫೈಝಿ, ಇಕ್ಬಾಲ್ ಮುಸ್ಲಿಯಾರ್ ಹಾಗೂ ಶಾಖಾ ಪ್ರತಿನಿಧಿಗಳು, ವಲಯ ಮಟ್ಟದ ನಾಯಕರುಗಳು, ಜಿಲ್ಲಾ ಸಮಿತಿಯ ನೇತಾರರು ಭಾಗವಹಿಸಿದ್ದರು. ಸುಹೈಬ್ ಫೈಝಿ ಸ್ವಾಗತಿಸಿ, ಜಂಶೀರ್ ವಾಫಿ ವಂದಿಸಿದರು.
ಗೋಣಿಕೊಪ್ಪ : ಹಾಡುಗಲೇ ಮನೆಯಲ್ಲಿದ್ದ ನಗದು ಮತ್ತು ಚಿನ್ನಾಭರಣ ಕಳವು - ಆರೋಪಿಗಳ ಬಂಧನ
ಗೋಣಿಕೊಪ್ಪ( web@timesofcoorg( : ದಿನಾಂಕ:05/08/2021 ರಂದು ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಅತ್ತೂರು ಗ್ರಾಮದ ಕೆ.ಎಸ್.ಮಾಚಯ್ಯರವರ ಮನೆಯಲ್ಲಿ ಹಾಡುಹಗಲೇ ಕಳ್ಳತನ ಮಾಡಿದ್ದ ಆರೋಪಿತರನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಗೋಣಿಕೊಪ್ಪ ಪೊಲೀಸ್ ವೃತ್ತ ನಿರೀಕ್ಷಕರು ಮತ್ತು ಸಿಬ್ಬಂದಿಯವರು ಯಶಸ್ವಿಯಾಗಿದ್ದಾರೆ.
ಅತ್ತೂರು ಗ್ರಾಮದ ನಿವಾಸಿ ಕೆ.ಎಸ್.ಮಾಚಯ್ಯ ರವರು ದಿನಾಂಕ:05/08/2021 ರಂದು ಬೆಳಿಗ್ಗೆ 09.00 ಗಂಟೆಗೆ ಮನೆಗೆ ಬೀಗಹಾಕಿಕೊಂಡು ಅಮ್ಮತ್ತಿಯಲ್ಲಿರುವ ತಮ್ಮ ಕಾಫಿ ತೋಟಕ್ಕೆ ಹೋಗಿದ್ದು, ಸಂಜೆ ಮನೆಗೆ ವಾಪಾಸ್ಸು ಬಂದು ನೋಡುವಾಗ್ಗೆ ಮನೆಯ ಹೆಂಚನ್ನು ತೆಗೆದು ಯಾರೋ ಕಳ್ಳರು ಒಳನುಗ್ಗಿ ಗಾಡ್ರೇಜ್ನಲ್ಲಿಟ್ಟಿದ್ದ 50 ಸಾವಿರ ನಗದು ಹಣ ಮತ್ತು ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಸಂಬಂಧ ನೀಡಿದ ಪುಕಾರಿಗೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊ.ಸಂ.98/2021 ಕಲಂ:454, 380 ಐಪಿಸಿ ರೀತ್ಯ ಪ್ರಕರಣ ದಾಖಲಾಗಿ ತನಿಖೆಯನ್ನು ಕೈಗೊಳ್ಳಲಾಗಿತ್ತು.
ಸಿಪಿಐ ಗೋಣಿಕೊಪ್ಪ ಮತ್ತು ಸಿಬ್ಬಂದಿಯವರ ತಂಡ ದಿನಾಂಕ:07/02/2022 ರಂದು 1). ಆನಂದ @ ಅಮ್ಮಿ @ ಮಮ್ಮಿ ತಂದೆ:ಪೌತಿ ಹನುಮಂತ, ಪ್ರಾಯ 37 ವರ್ಷ, ಗುಜರಿ ಆಯುವ ಕೆಲಸ, ಸ್ವಂತ ಊರು:ಗುಡ್ಡೇನಹಳ್ಳಿ, ಕೊಪ್ಪ, ಪಿರಿಯಾಪಟ್ಣ, ಹಾಲಿ ವಾಸ:ವಾಡಿಕ್ಕಲ್, ತಾಮರಶೇರಿ, ಕೇರಳ ರಾಜ್ಯ. 2). ಶಿವಕುಮಾರ್ @ ಚಂದ್ರಕುಮಾರ್ @ ಕುಮಾರ್ ತಂದೆ:ಚಿನ್ನಪ್ಪ ಗೌಡರ್, ಪ್ರಾಯ 38 ವರ್ಷ, ಕೂಲಿ ಕೆಲಸ, ಸ್ವಂತ ಊರು:ಪುಟಾಣಿನಗರ, ಮಡಿಕೇರಿ. ಹಾಲಿವಾಸ: ಪನಮರಂ, ವಯನಾಡು ಜಿಲ್ಲೆ, ಕೇರಳ ರಾಜ್ಯ. 3). ಗೋಪಾಲ ತಂದೆ:ಲೇಟ್ ಕೃಷ್ಣ, ಪ್ರಾಯ 48 ವರ್ಷ, ಗುಜರಿ ಕೆಲಸ, ಹುಣಸೆವಳ್ಳಿ, ಬಾರೆ,ಆಲೂರು ಗ್ರಾಮ, ಹಾಸನ ಜಿಲ್ಲೆ. ಈ ಮೂವರು ಆರೋಪಿತರನ್ನು ಪತ್ತೆ ಹಚ್ಚಿ ಕಳುವಾದ 3 ಚಿನ್ನದ ನಾಣ್ಯಗಳು, ಒಂದು ಚಿನ್ನದ ಸರ, 6 ಬೆಳ್ಳಿಯ ನಾಣ್ಯಗಳು ಸೇರಿ ಒಟ್ಟು 16 ಗ್ರಾಂ ಚಿನ್ನಾಭರಣ, 30 ಗ್ರಾಂ ಬೆಳ್ಳಿ ಹಾಗೂ ರೂ.1600/- ರೂ ನಗದು ಹಣ ಸೇರಿ ಒಟ್ಟು ರೂ.76600/- ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ.
ಈ ಪ್ರಕರಣವನ್ನು ವಿರಾಜಪೇಟೆ ಉಪವಿಭಾಗ ಡಿವೈ.ಎಸ್.ಪಿ ಸಿ.ಟಿ.ಜಯಕುಮಾರ್ ರವರ ಮಾರ್ಗದರ್ಶನದಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಎಸ್.ಎನ್.ಜಯರಾಮ್, ಎಎಸ್ಐ ಸುಬ್ರಮಣಿ, ಎಎಸ್ಐ ದೇವರಾಜು ಹಾಗೂ ಸಿಬ್ಬಂದಿಯವರಾದ ಹೆಚ್.ಕೆ.ಕೃಷ್ಣ, ಪಿ.ಎ.ಮಹಮದ್ ಅಲಿ, ಎಂ.ಡಿ.ಮನು, ಅಬ್ದುಲ್ ಮಜೀದ್, ಹರೀಶ, ಹೇಮಲತಾ ರೈ ಮತ್ತು ಚಾಲಕರಾದ ಬಷೀರ್ರವರು ಪತ್ತೆ ಮಾಡಿದ್ದು, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.
ಪ್ರಧಾನಮಂತ್ರಿ ಉದ್ಯೋಗ ಸೃಜನ (ಪಿಎಂಇಜಿಪಿ) ಕಾರ್ಯಕ್ರಮದಡಿ ಕೈಗಾರಿಕೆ, ಸೇವಾ ಘಟಕಗಳಿಗೆ ಸಾಲ ಸೌಲಭ್ಯ ಅರ್ಜಿ ಆಹ್ವಾನ
ಇನಾಂ ಜಮೀನು ರೀ-ಗ್ರಾಂಟ್ಗಾಗಿ ಅರ್ಜಿ ಸಲ್ಲಿಸಲು ಕಾಲಾವಕಾಶ
ಫೆ.9 ರಂದು ಜಿಲ್ಲಾ ಯುವ ವಿಜ್ಞಾನಿ ಪ್ರಶಸ್ತಿಗೆ ಆಯ್ಕೆ
ಕೊಡಗು ಜಿಲ್ಲಾದ್ಯಾಂತ ಗ್ರಾಮ ಒನ್ : ಪ್ರಾಂಚೈಸಿಗಳಿಂದ ಅರ್ಜಿ ಆಹ್ವಾನ
ಮಡಿಕೇರಿ ಫೆ.08-ಗ್ರಾಮ ಒನ್ ಯೋಜನೆಯನ್ನು ಸರ್ಕಾರ ಈಗಾಗಲೇ ಲೋಕಾರ್ಪಣೆ ಮಾಡಿದೆ. ನಗರ ಪ್ರದೇಶಗಳಲ್ಲಿ ಜನರಿಗೆ ಸೇವೆ ನೀಡುತ್ತಿರುವ ಕರ್ನಾಟಕ ಒನ್, ಬೆಂಗಳೂರು ಒನ್ ಮಾದರಿಯಲ್ಲಿ ‘ಗ್ರಾಮ ಒನ್’ ಮೂಲಕ ಹಳ್ಳಿಗರಿಗೂ ಸೇವೆ ನೀಡಬೇಕೆಂಬ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ.
ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಸೇವಾಸಿಂಧು ಯೋಜನೆಯಡಿಯಲ್ಲಿ ಸುಮಾರು 750 ಕ್ಕೂ ಹೆಚ್ಚು ನಾಗರಿಕ ಸೇವೆ ಪಡೆಯಲು ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸ್ವೀಕರಿಸಲಾಗುತ್ತದೆ. ವಾರದ ಎಲ್ಲಾ ದಿನಗಳಲ್ಲಿ(ಮಂಗಳವಾರ ಹೊರತುಪಡಿಸಿ) ಬೆಳಗ್ಗೆ 8 ರಿಂದ ಸಂಜೆ 8 ಗಂಟೆಯವರೆಗೆ ಕೇಂದ್ರಗಳು ಕಾರ್ಯನಿರ್ವಹಿಸಲಿವೆ.
ಕೊಡಗು ಜಿಲ್ಲೆಯಲ್ಲಿ ಈಗಾಗಲೇ 68 ಗ್ರಾಮ ಪಂಚಾಯತ್‍ಗಳಲ್ಲಿ ‘ಗ್ರಾಮ ಒನ್’ ಯೋಜನೆಯನ್ನು ಯಶಸ್ವಿಯಾಗಿ ಪ್ರಾರಂಭಿಸಲಾಗಿದೆ. ಉಳಿದಂತೆ 36 ಗ್ರಾಮ ಪಂಚಾಯತ್‍ಗಳಲ್ಲಿ ಸಮಗ್ರ ನಾಗರಿಕ ಸೇವಾ ಕೇಂದ್ರ ಗ್ರಾಮ ಒನ್ ಆರಂಭಿಸಲು ಆಸಕ್ತ ಪ್ರಾಂಚೈಸಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಮಡಿಕೇರಿ ತಾಲ್ಲೂಕಿನ ಮಡಿಕೇರಿ ಹೋಬಳಿಯ ಹೊಸ್ಕೇರಿ, ನಾಪೋಕ್ಲು ಹೋಬಳಿಯ ಎಮ್ಮೆಮಾಡು, ಭಾಗಮಂಡಲ ಹೋಬಳಿಯ ಕರಿಕೆ, ಸಂಪಾಜೆ ಹೋಬಳಿಯ ಪೆರಾಜೆ.
ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಹೋಬಳಿಯ ಶಾಂತಳ್ಳಿ, ಬೆಟ್ಟದಳ್ಳಿ, ತೋಳೂರು ಶೆಟ್ಟಳ್ಳಿ, ಸೋಮವಾರಪೇಟೆ ಹೋಬಳಿಯ ಗಣಗೂರು, ನೇರುಗಳಲೆ, ಮಾದಾಪುರ, ಚೌಡ್ಲು, ಶನಿವಾರಸಂತೆಯ ನಿಡ್ತ,
ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಹೋಬಳಿಯ ಗರ್ವಾಲೆ, ಕಂಬಿಬಾಣೆ, ಕೆದಕಲ್, ಹರದೂರು, ನಾಕೂರು ಶಿರಂಗಾಲ, 7ನೇ ಹೊಸಕೋಟೆ, ಕುಶಾಲನಗರ ಹೋಬಳಿಯ ಗುಡ್ಡೆಹೊಸೂರು, ವಾಲ್ನೂರು ತ್ಯಾಗತ್ತೂರು.
ವಿರಾಜಪೇಟೆ ತಾಲ್ಲೂಕಿನ ವಿರಾಜಪೇಟೆ ಹೋಬಳಿಯ ಕದನೂರು, ಕೆದಮುಳ್ಳೂರು, ಅಮ್ಮತ್ತಿ ಹೋಬಳಿಯ ಹೊಸೂರು, ಅಮ್ಮತ್ತಿ, ಮಾಲ್ದಾರೆ, ಬಿಳುಗುಂದ.
ಪೊನ್ನಂಪೇಟೆ ತಾಲ್ಲೂಕಿನ ಪೊನ್ನಂಪೇಟೆ ಹೋಬಳಿಯ ಹಾತೂರು, ಬಿ.ಶೆಟ್ಟಿಗೇರಿ, ಕಿರಗಂದೂರು, ಮಾಯಾಮುಡಿ, ಬಾಳೆಲೆ ಹೋಬಳಿಯ ನಿಟ್ಟೂರು, ಪೊನ್ನಪ್ಪಸಂತೆ, ಹುದಿಕೇರಿಯ ಬಲ್ಯಮಂಡೂರು, ಬಿರುನಾಣಿ, ಶ್ರೀಮಂಗಲ ಹೋಬಳಿಯ ಕೆ.ಬಾಡಗ ಮತ್ತು ನಾಲ್ಕೇರಿ.
ಆಸಕ್ತ ಪ್ರಾಂಚೈಸೀಸ್‍ಗಳು https://www.karnatakaone.gov.in/.../GramOneFranchiseeTerms ಈ ಲಿಂಕ್‍ನ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಪ್ರಾಜೆಕ್ಟ್ ಮ್ಯಾನೇಜರ್, ಜಿಲ್ಲಾಧಿಕಾರಿ ಕಚೇರಿ, ಮೊ.ಸಂ. 8861682120 ಇವರಿಂದ ಪಡೆಯಬಹುದಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರು ತಿಳಿಸಿದ್ದಾರೆ.
ಸೋಮವಾರಪೇಟೆ ಸಮೀಪ ಯಡೂರು ಬಿಟಿಸಿಜಿ ಕಾಲೇಜಿನಲ್ಲಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು ಹಾಗೂ ಇತರ ವಿದ್ಯಾರ್ಥಿಗಳ ನಡುವೆ ವಾಗ್ವಾದ
ಸೋಮವಾರಪೇಟೆ (TOC/ಪ್ರತಿನಿಧಿ): ಉಡುಪಿಯ ಹಿಜಾಬ್ ವಿವಾದ ರಾಜ್ಯದ್ಯಾಂತ ವ್ಯಾಪಿಸಿ ಹಿಂಸಾಚಾರದ ತನಕ ತಲುಪಿ ನಿಂತ ಸಂದರ್ಭ ಶಾಂತವಾಗಿದ್ದ ಕೊಡಗು ಜಿಲ್ಲೆಯು ಹಿಜಾಬ್ ವಿವಾದದ ಬೀಡಾಗಿ ಮಾರ್ಪಾಡುಗೊಳ್ಳುತಿದೆ. ಸೋಮವಾರಪೇಟೆ ಪಟ್ಟಣ ಸಮೀಪದ ಯಡೂರು ಬಿಟಿಸಿಜಿ ಕಾಲೇಜಿಗೆ ಇಂದು ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದು, ಇತರ ವಿದ್ಯಾರ್ಥಿಗಳೊಂದಿಗಿ ವಾಗ್ವಾದ ನಡೆದಿದೆ. ಕಾಲೇಜ್ ಕ್ಯಾಂಪಸ್ ಒಳಗಡೆ ಜೈಶ್ರೀರಾಮ್ ಘೋಷಣೆ ಕೂಗುತ್ತಾ ಬಂದ ತಂಡವನ್ನು ಪ್ರಾಧ್ಯಾಪಕರು ಹೊರಾಂಗಣದಲ್ಲಿ ತಡೆದಿದ್ದಾರೆ. ಈ ಸಂದರ್ಭ ಇತರೆ ವಿದ್ಯಾರ್ಥಿಗಳೊಂದಿಗೆ ವಾಗ್ವಾದ ನಡೆದಿದೆ.
ಈ ಕುರಿತು TOCಯೊಂದಿಗೆ ಮಾತನಾಡಿದ ಕಾಲೇಜು ವಿದ್ಯಾರ್ಥಿ ಅಸ್ಪಾದ್ " ಹಿಜಾಬ್ ಮುಸ್ಲಿಂ ವಿದ್ಯಾರ್ಥಿನಿಯರ ಹಕ್ಕು ಆಗಿದ್ದು, ಈ ದೇಶದ ಸಂವಿಧಾನ ಕಲ್ಪಿಸಿರುವ ಧಾರ್ಮಪಾಲನಾ ಸ್ವಾತಂತ್ರ್ಯದಂತೆ ಮುಸ್ಲಿಂ ಹೆಣ್ಣುಮಕ್ಕಳ್ಳು ಹಿಜಾಬ್ ಧರಿಸುತ್ತಾರೆ. ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ, ಬಿಡೋದು ಇಲ್ಲ, ಇವರಿಗೆ ಇದ್ದ ನಿಯಮವನ್ನು ಮುಂದುವರಿಸಬೇಕು. ಕೇಸರಿ ಶಾಲು ಧರಿಸಿ ಬಂದು ರಾದ್ಧಾಂತ ಮಾಡುವುದು ರಾಜಕೀಯ ಲಾಭಕ್ಕಾಗಿ ಎಂದರು.



.jpg)



