ಸಮಾಜ ಮತ್ತು ಪರಿಸರದಲ್ಲಿನ ಸಮ್ಮಿಳಿತ ಜ್ಞಾನಾರ್ಜನೆಗಿದು ಸಂಕ್ರಮಣ ಕಾಲದೇವಃ ಸರ್ವಂತರ್ಯಾಮಿ ಎನ್ನುವ ಮಾತಿನಂತೆ,...

No comments
ಇಂದು ಜ್ಞಾನ ವೂ ಸರ್ವಂತರ್ಯಾಮಿ ವಿದ್ಯಾರ್ಥಿ ಯು ಸರ್ವಂತರ್ಯಾಮಿ...ಕಲಿಕೆ ನಾಲ್ಕು ಗೋಡೆಯ ಒಳಗೆ ಕೀಲಿ ಕೈ ಹಾಕಿಟ್ಟ ಖಜಾನೆಯ  ಸಂಪತ್ತಷ್ಟೇ ಅಲ್ಲ.  ವ್ಯಾಪಕ ವಾದದ್ದು ಹಾಗೂ  ಸಂಕೀರ್ಣ ವಾದದ್ದು..ಕರೋನ ಸಂಕಷ್ಟದ ಈ ಸಂಕ್ರಮಣ ಕಾಲ ವಿದ್ಯಾರ್ಥಿಗಳಿಗೆ ಸಮಾಜ ಮತ್ತು ಪರಿಸರ ದಲ್ಲಿನ ಕಲಿಕೆಗೊಂದು ಸಂಕ್ರಮಣ ಕಾಲ,.ಶಿಕ್ಷಣದ ಪ್ರಮುಖ ದ್ಯೇಯ ಗಳಲ್ಲಿ ನೈತಿಕ ಮೌಲ್ಯ ಗಳನ್ನೊಳಗೊಂಡ ಸಾಮಾಜಿಕ ಮೌಲ್ಯಗಳ ಅಂತರ್ಗತ ವೂ ಅಭ್ಯುದಯವಾದದ್ದು ,ಈ ಮೂಲಕ ಪರಿಸರದಲ್ಲಿನ ಕ್ರಿಯಾಶೀಲತೆ ಕೌತುಕ ವಿದ್ಯಾರ್ಥಿಗಳಿಗೆ ರಚಾನಾತ್ಮಕ ಹಾಗೂ ಪ್ರಾಯೋಗಿಕ ಪಾಠಶಾಲೆಯನ್ನು ನಿರ್ಮಿಸಿದೆ...ಶಾಲೆಗಳಲ್ಲೆ ಹೆಚ್ಚು ಸಮಯ ಮಗ್ನರಾಗಿದ್ದ ಮಕ್ಕಳಿಗೆ ಇಂದಿನ ಪರಿಸ್ಥಿತಿ ಪರಿಸರೆದೆಡೆಗೆ " ನೋಡಿ ಕಲಿ ಮಾಡಿ ತಿಳಿ"ಎನ್ನುವ ಪ್ರಾಕೃತಿಕ ಕಲಿಕಾ ಜಗುಲಿಗೆ ಮಕ್ಕಳನ್ನು ಆಮಂತ್ರಿಸಿದೆ,..ಈ ಕೌತುಕ ವಿಸ್ಮಯ ವಿದ್ಯಾರ್ಥಿಗಳ ಕೂತೂಹಲ ಕ್ಕೆ ಕಿಚ್ಚು ಹಚ್ಚಿ ತಿಳಿದುಕೊಳ್ಳುವ ಸ್ರಜನಾತ್ಮಕ ರಚನಾತ್ಮಕ ಕ್ರಿಯಾತ್ಮಕ ಕಲಿಕಾ ಆಯಾಮದ ದೀವಿಗೆ  ಹಚ್ಚುತ್ತದೆ...ಸಮಾಜವೂ ಹಾಗೆ ಸಾಮಾಜಿಕ ವ್ಯವಸ್ಥೆಯ ವಿಶಿಷ್ಟತೆ ಭಾಂದವ್ಯ ,ಸಂಬಂಧ ಗಳು, ಒಗ್ಗಟ್ಟು ,ಅದರಿಂದಾಗುವ  ಪ್ರಗತಿ ಹಾಗೂ ಸಂತೋಷ ವನ್ನು ವಿದ್ಯಾರ್ಥಿಗಳಿಗೆ ದಿಗ್ದರ್ಶನ ಮಾಡಿಸುತ್ತಿದೆ.ಕೌಟುಂಬಿಕ ಸಮಸ್ಯೆ ಗಳು ವಿದ್ಯಾರ್ಥಿ ಯ ಗುರಿ ಯನ್ನು ದ್ರಡಪಡಿಸಿ ಕಲಿಕಾ ಪ್ರಾಮುಖ್ಯತೆ ಯನ್ನು ಜಾಗೃತ ಗೊಳಿಸುತ್ತಿದೆ...ಮೌಲ್ಯಗಳ ಅಂತಃ ಸತ್ವಃ ವನ್ನು ಮಕ್ಕಳಿಗೆ ಪರಿಚಯಿಸುತ್ತಿದೆ,,ಮಕ್ಕಳಿಗೆ ವಿಭಿನ್ನ ಆಸಕ್ತಿ ಕೌಶಲಾಭಿವ್ಯಕ್ತಿ ಗೊಂದು ವೇದಿಕೆ ಹಾಗೂ ಸಮಯ ವನ್ನು ದಾರೆ ಯೆರೆದಿದೆ,..ಅಜ್ಜ ಅಜ್ಜಿ ತಂದೆ ತಾಯಿ ಗಳ ಅನುಭವ ಮತ್ತು ಅನುಬಾವ ದ ಕಲಿಕೆಯು ಮೈದೊಡವಿ ನಿಂತಿದೆ,..ಏಕಾಂಗಿಯಾಗಿ ರುತ್ತಿದ್ದ ಕೆಲ ಮಕ್ಕಳಿಗೆ ಸಂವಹನ ಕುಶಲತೆ ಸಾಮಾಜಿಕರಣಕ್ಕೂಂದು ಕಿಟಕಿ ತೆರೆದಿದೆ...ಟ್ರಯಲ್ ಆಂಡ್ ಎರರ್ ಮೂಲಕ ಮಕ್ಕಳ ,ಭಯಮುಕ್ತ ಕಲಿಕೆ ,ನಿರ್ಭಯ , ಸ್ವತಂತ್ರ ಕಲಿಕೆ,ಸ್ವ ಕಲಿಕೆ ಗೊಂದು ಇದು ಅವಕಾಶದ ಸಂಕ್ರಮಣ ಕಾಲ. ಹೀಗೆ"ಸಮಾಜ ಮತ್ತು ಪರಿಸರದಲ್ಲಿನ ಸಮ್ಮಿಳಿತ ಜ್ಞಾನನಾರ್ಜನೆ ಗಿದು ಸಂಕ್ರಮಣ ಕಾಲ ವಾಗಿದ್ದು ಇದು ವಿದ್ಯಾರ್ಥಿ ಗಳ ಸರ್ವ ತೋಮುತ ಬೆಳವಣಿಗೆಗೆ ಪ್ರಕ್ರತಿಯೆ ಆಹ್ವಾನಿಸಿ ನೀಡಿದ ಅದ್ಭುತ ಅವಕಾಶವಾಗಿ ಮಕ್ಕಳ ಸರ್ವತೋಮುಖ ಪ್ರಗತಿಗೆ ಮತ್ತೊಂದು ಅಡಿಗಲ್ಲಾಗಲಿ,-----

ಬರಹ:
ಶರತ್ ಕುಮಾರ್ ,ಸರಕಾರಿ ಪ್ರೌಡಶಾಲೆ ತಿತಿಮತಿ,ವಿರಾಜಪೇಟೆ ತಾಲ್ಲೋಕು

No comments

Post a Comment