ಪಿಎಫ್ಐ ಬ್ಲಡ್ ಡೋನರ್ಸ್ ಫೋರಮ್ ಹಾಕತ್ತೂರಿನಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ

No comments
ಮಡಿಕೇರಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಬ್ಲಡ್ ಡೋನರ್ಸ್ ಫೋರಮ್ ವತಿಯಿಂದ ಹಾಕತ್ತೂರಿನ ಮದೀನ ಕಾಂಪ್ಲೆಕ್ಸ್ ನಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ನಡೆಯಿತು.ಪಿಎಫ್ಐ ಹಾಕತ್ತೂರು ವಲಯ ಅಧ್ಯಕ್ಷ ಅಬ್ದುಲ್ ಕಾದರ್ ಅಧ್ಯಕ್ಷತೆಯಲ್ಲಿ ನಡೆದ ಶಿಬಿರವನ್ನು ಕರ್ನಾಟಕ ಮುಸ್ಲಿಂ ಜಮಾಹತಿನ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಅಬೂಬಕ್ಕರ್ ಹಾಜಿ ಅವರು ಪ್ರಾರ್ಥನೆಯ ಮೂಲಕ ಶಿಬಿರವನ್ನು ಉದ್ಘಾಟಿಸಿದರು.ಶಿಬಿರಲ್ಲಿ 40ಕ್ಕೂ ಹೆಚ್ಚು ಮಂದಿ ರಕ್ತ ದಾನ ಮಾಡಿದರು. ವೈದ್ಯರಾದ ಕರುಂಬಯ್ಯ ಅವರು ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಪಿಎಫ್ಐ ಜಿಲ್ಲಾ ಕಾರ್ಯದರ್ಶಿ ತುಫೈಲ್ ಮಡಿಕೇರಿ, ಹಾಕತ್ತೂರು ಜಮಾಹತ್ ಅಧ್ಯಕ್ಷ ಅಬ್ದುಲ್ಲ ಹಾಜಿ, ಉಪಾಧ್ಯಕ್ಷ ಕಾಸಿಂ, ಜಮಾಹತ್ ಮಾಜಿ ಅಧ್ಯಕ್ಷ ಪಿ.ಎಂ ಅಬ್ದುಲ್ಲ, ಪಿಎಫ್ಐ ವಿರಾಜಪೇಟೆ ಏರಿಯಾ ಅಧ್ಯಕ್ಷ ಇಬ್ರಾಹಿಂ ಗೋಣಿಕೊಪ್ಪ, ಕ್ರಿಯೇಟಿವ್ ಖಲೀಲ್ ಮಡಿಕೇರಿ, ಪಿಎಫ್ಐ ಕೊಡಗು ಜಿಲ್ಲಾ ವೈದ್ಯಕೀಯ ಉಸ್ತುವಾರಿ ಉನೈಸ್ ಮಡಿಕೇರಿ ಮತ್ತು ಕೊಡಗು ಜಿಲ್ಲಾ ವೈದ್ಯಕೀಯ ಸಿಬ್ಬಂದಿಗಳು ಹಾಜರಿದ್ದರು. ಅಲ್ತಾಫ್ ಸ್ವಾಗತಿಸಿ ನಿಸಾರ್ ವಂದಿಸಿದರು.

No comments

Post a Comment