ಮೂತ್ರಪಿಂಡದಿಂದ 800 ಗ್ರಾಂ ಕಲ್ಲು ಹೊರತೆಗೆದ ವೈದ್ಯರ ತಂಡ

No comments
ಮಡಿಕೇರಿ (TOC  ನ್ಯೂಸ್): ಯುವಕನೊಬ್ಬನ ಮೂತ್ರಪಿಂಡದಿಂದ ಬೃಹತ್ ಗಾತ್ರದ ಕಲ್ಲನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆಯುವಲ್ಲಿ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ. ವಿರಾಜಪೇಟೆ ತಾಲ್ಲೂಕು ಕಡಂಗ ಗ್ರಾಮದ ನಿವಾಸಿ ಇಬ್ರಾಹಿಂ ಅವರ ಪುತ್ರ ರಫೀಕ್ 37 ಅವರು ಹೊಟ್ಟೆನೂವು ಎಂದು ದಿನಾಂಕ 15-10-2019 ರಂದು ವಿರಾಜಪೇಟೆ ಸರ್ಕಾರಿ ಅಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದರು. ಒಳ ರೋಗಿಯಾಗಿ ದಾಖಲಾದ, ರೋಗಿಯನ್ನು ಪರೀಕ್ಷೆಗೆ ಒಳಪಡಿಸಿದ ವೈದ್ಯರು ಮೂತ್ರಪಿಂಡದಲ್ಲಿ ಕಲ್ಲು ಇರುವುದನ್ನು ದೃಢಪಡಿಸಿದರು ‌. ಸರ್ಕಾರಿ ಆಸ್ಪತ್ರೆಯ ಮುಖ್ಯ ಶಸ್ತ್ರ ಚಿಕಿತ್ಸಕರಾದ ಡಾ. ವಿಶ್ವನಾಥ್ ಸಿಂಪಿ ಮತ್ತು ಅರವಳಿಕೆಯ ವೈದ್ಯರಾದ ಡಾ.ಸುರೇಶ್ ಅವರು ಮತ್ತು ಸಿಬ್ಬಂದಿಗಳ ಸತತ ಒಂದು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿ ಚಿಕಿತ್ಸೆಯ ಮೂಲಕ 800 ಗ್ರಾಂ ತೂಕವಿರುವ ಕಲ್ಲು ಹೊರತೆಗೆಯಲಾಯಿತು. ಚಿಕಿತ್ಸೆ ಮಾಡಿದ ಮುಖ್ಯ ವೈದ್ಯರು ಪತ್ರಿಕೆಯೊಂದಿಗೆ ಇತಂಹ ಘಟನೆಗಳು ತುಂಬಾ ವಿರಳವಾಗಿರುತ್ತದೆ ಇಂತಿಷ್ಟು ಗ್ರಾತ್ರದ ಕಲ್ಲು ಹೊಂದಿಕೊಂಡು ರೋಗಿಯು ಅತೀವ ವೇದನೆಯನ್ನು ಹೊಂದುತ್ತಾನೆ. ಶಸ್ತ್ರ ಚಿಕಿತ್ಸೆಯಿಂದ ಕಲ್ಲು ಹೊರ ತೆಗೆಯಲಾಗಿದ್ದು ರೋಗಿಯು ಚೀಕಿತ್ಸೆಗೆ ಸ್ಪಂದನೆ ನೀಡಿದ್ದರಿಂದ ಕಲ್ಲುಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದೇವೆ. ಇದೀಗಾ ರೋಗಿಯು ಗುಣಮುಖನಾಗಿದ್ದಾನೆ ಎಂದು ತಿಳಿಸಿದರು.

No comments

Post a Comment