ಪ್ರೀಯಾತಮನ ಹಿಂಸೆ ತಾಳಲಾರದೆ ಯುವತಿ ನೇಣಿಗೆ ಶರಣು

No comments

    ಕುಶಾಲನಗರ TOC : ಪ್ರೀಯಾತಮನ  ಹಿಂಸೆ ತಾಳಲಾರದೆ ಯುವತಿ ನೇಣಿಗೆ ಶರಣಾಗಿರುವ ಘಟನೆ ಕುಶಾಲನಗರ ಸಮೀಪದಲ್ಲಿ ನಡೆದಿದೆ.
    ಕುಶಾಲನಗರದ ಕೂಡಿಗೆ ಸಮೀಪದ ಬ್ಯಾಡಗೊಟ್ಟದ ಅಂಬೇಡ್ಕರ್ ಕಾಲೋನಿ ನಿವಾಸಿಗಳಾದ  ಪುಟ್ಟನಾಯ್ಕ ಮತ್ತು ಪೂರ್ಣಿಮಾ ದಂಪತಿಗಳ ದ್ವೀತಿಯ ಪುತ್ರಿ ಪೂಜಾ (17)    ಕಳೆದ ಎರಡು ವರ್ಷಗಳಿಂದ ಕೂಡ್ಲೂರು ಗ್ರಾಮದ ಯುವಕ ಪವನ್ ಎಂಬಾತನನ್ನು ಪ್ರೀತಿಸುತ್ತಿದ್ದರು , ಈ ವಿಷಯ ತಿಳಿದ ಪೋಷಕರು ಇವಳನ್ನು ಸುಳ್ಯದ ಕಾಲೇಜ್ ವೊಂದರಲ್ಲಿ  ಮುಂದಿನ ವಿದ್ಯಾಭ್ಯಾಸಕ್ಕೆ ಸೇರಿಸಿದ್ದರು.  ಆದರೂ ಯುವಕ ಅವಳಿಗೆ ಪದೇ ಪದೇ ಕರೆ ಮಾಡಿ ಹಿಂಸೆ ಕೊಡುತ್ತಿದುದ್ದನ್ನು ಪೂಜಾ ತನ್ನ ಪೋಷಕರಿಗೆ ತಿಳಿಸಿದ್ದು ಇದನ್ನು ಅರಿತ ಪೋಷಕರು ಅವಳ ವಿದ್ಯಾಭ್ಯಾಸ ನಿಲ್ಲಿಸಿ ಅವಳನ್ನು ಮನೆಗೆ ಕರೆದುಕೊಂಡು ಬಂದು ಮನೆಯಲ್ಲಿ ಇರಿಸಿದ್ದರು ಆ ಯುವಕನ ಹಿಂಸೆ ತಾಳಲಾರದೆ ಮನ ನೊಂದ ಯುವತಿ  ಇಂದು ಮನೆಯಲ್ಲಿ ಯಾರು ಇಲ್ಲದ ವೇಳೆ ತನ್ನ ಕೊಠಡಿಯಲ್ಲಿ ವೇಲ್ ನಿಂದ ನೇಣಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಡೆದಿದೆ  ಸಂಜೆ ವೇಳೆ ಕೆಲಸಕ್ಕೆ ಹೋಗಿದ್ದ ಪೋಷಕರು ಮನಗೆ ಬಂದ ತಕ್ಷಣ ಈ ಘಟನೆ ಕುರಿತು ಗ್ರಾಮಾಂತರ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ ತಕ್ಷಣ ವಿಷಯ ತಿಳಿದ ಗ್ರಾಮಾಂತರ ಠಾಣಾಧೀಕಾರಿ ನಂದೀಶ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಾಹಜರ್ ಮಾಡಿ ಕುಶಾಲನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗರಕ್ಕೆ ಮೃತ ದೇಹವನ್ನು ರವಾನಿಸಿ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

No comments

Post a Comment