ಮಡಿಕೇರಿ TOC :-ಪ್ರಸಕ್ತ(2019) ಸಾಲಿನಲ್ಲಿ ವಿಕಲಚೇತನರಿಗೆ ವಿತರಿಸುವ ರಿಯಾಯಿತಿ ದರದ ಬಸ್‍ಪಾಸ್‍ಗಳ ಅವಧಿ ಡಿಸೆಂಬರ್, 31 ಕ್ಕೆ ಮುಕ್ತಾಯಗೊಂಡಿದ್ದು, ಈ ಪಾಸ್‍ಗಳನ್ನು 2020ನೇ ಸಾಲಿಗೆ ನವೀಕರಿಸಿಕೊಳ್ಳಬಹುದಾಗಿದೆ. ಸದರಿ ಪಾಸ್‍ಗಳ ಆಧಾರದಲ್ಲಿ ಫೆಬ್ರವರಿ 29 ರವರೆಗೆ ಪ್ರಯಾಣಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಹಾಗೂ ಫೆಬ್ರವರಿ 29 ರೊಳಗೆ ನವೀಕರಣ/ ಹೊಸ ಪಾಸುಗಳನ್ನು ಪಡೆದುಕೊಳ್ಳುವಂತೆ ಕೋರಿದೆ.
ಜನವರಿ, 28 ರಂದು ವಿರಾಜಪೇಟೆಯ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಜನವರಿ, 29 ರಂದು ಮಡಿಕೇರಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಜನವರಿ, 30 ರಂದು ಕುಶಾಲನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಹಾಗೂ ಜನವರಿ, 31 ರಂದು ಸೋಮವಾರಪೇಟೆಯ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಆಯಾಯ ದಿನಗಳಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ರಿಯಾಯಿತಿ ದರದ ಬಸ್ ಪಾಸುಗಳನ್ನು ವಿತರಿಸಲಾಗುತ್ತದೆ.
ಪ್ರಸ್ತುತ ಸಾಲಿನಲ್ಲಿ ವಿಕಲಚೇತನರ ಪಾಸುದಾರರ ನವೀಕರಣ/ಹೊಸ ಪಾಸು ಪಡೆಯುವ ಸಮಯದಲ್ಲಿ ವಾಸ್ತವ್ಯದ ದೃಢೀಕರಣ, ಆಧಾರ್ ಕಾರ್ಡ್ ಪ್ರತಿ, ಪಾಸ್‍ಪೋರ್ಟ್ ಸೈಜಿನ 02 ಫೋಟೋ, ಅಂಚೆ ಚೀಟಿ ಗಾತ್ರದ 01 ಫೋಟೋ ಹಾಗೂ ಯು.ಡಿ.ಐ.ಡಿ/ಗುರುತಿನ ಚೀಟಿಯ ಮಾನ್ಯತಾ ಅವಧಿಯನ್ನು ಪರಿಶೀಲನೆ ಮಾಡುವ ಸಲುವಾಗಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವಿತರಿಸುವ ಗುರುತಿನ ಚೀಟಿಯ ದೃಡೀಕರಣ ಪತ್ರದ ಮೂಲ ಪ್ರತಿಯನ್ನು /ಯುಡಿಐಡಿಯ ಮೂಲ ಪ್ರತಿಯನ್ನು (ಯಾವುದಾದರೊಂದು) ಪರಿಶೀಲನೆಗಾಗಿ ತೋರಿಸತಕ್ಕದ್ದು.
ಪಾಸು ನವೀಕರಣಕ್ಕೆ ಸಂಬಂಧಿಸಿದಂತೆ ಹಳೆಯ ಪಾಸನ್ನು ಕಡ್ಡಾಯವಾಗಿ ಹಿಂತಿರುಗಿಸುವುದು ಹಾಗೂ ಅಂಗವಿಕಲರ ಕಲ್ಯಾಣಾಧಿಕಾರಿಯವರಿಂದ ದೃಡೀಕರಣ ಪಡೆದ ಗುರುತಿನ ಚೀಟಿ ಪುಸ್ತಕದ ಯಥಾಪ್ರತಿ ಹಾಗೂ ರೂ.660/-ನ್ನು ನಗದಾಗಿ ಪಾವತಿಸಿ ಪಾಸುಗಳನ್ನು ಪಡೆದುಕೊಳ್ಳಬಹುದು. ಹಾಗೂ ಹೊಸದಾಗಿ ಪಾಸು ಪಡೆಯುವವರು ವಿಭಾಗೀಯ ಕಚೇರಿ ಕ.ರಾ.ರ.ಸಾ.ನಿಗಮ, ಮುಕ್ರಂಪಾಡಿ, ಪುತ್ತೂರು ಇಲ್ಲಿಗೆ ಅರ್ಜಿಯನ್ನು ಸಲ್ಲಿಸಿ ಪಾಸು ಪಡೆಯಬಹುದಾಗಿರುತ್ತದೆ.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮಡಿಕೇರಿ, ದೂ.ಸಂ 08272-295829 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವರು ತಿಳಿಸಿದ್ದಾರೆ.

No comments
Post a Comment