ಸಬ್ಬಮ್ಮ ದೇವರ ಚಾವಡಿ ಕಟ್ಟೆಯಲ್ಲಿ ವಿಶೇಷ ಪೂಜೆ

No comments
     ಸೋಮವಾರಪೇಟೆ TOC :-ಸಂಕ್ರಾಂತಿ ಹಬ್ಬದಚಾರಣೆಯಂದು ಶ್ರೀ ಕುಮಾರಲಿಂಗೇಶ್ವರ ಜಾತ್ರೆ ಹಾಗೂ ರಥೋತ್ಸವ ಹಿನ್ನೆಲೆ ಸೋಮವಾರಪೇಟೆ ಸಮೀಪದ ಕೂತಿಗ್ರಾಮದ ಸಬ್ಬಮ್ಮ ದೇವರ ಚಾವಡಿ ಕಟ್ಟೆ(ಸುಗ್ಗಿ)ಯಲ್ಲಿ ವಿಶೇಷ ಪೂಜೆ ನಡೆಯಿತು.
      ಅನಾದಿಕಾಲದಿಂದಲು ನಡೆದುಕೊಂಡು ಬಂದಂತೆ ದೇವರ ಕಟ್ಟೆಯಲ್ಲಿ ಗ್ರಾಮದ ಒಕ್ಕಲಿಗ ಮನೆತನದ ಎಣಿಗೆ ( ದೇವರ ಪಟ್ಟ,ಕಳಸ,ಹಣ್ಣು ಕಾಯಿ ಇತರೆ ಪದಾರ್ಥಗಳು) ತಂದಿಟ್ಟು ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು.ನಂತರ ದೇವರ ಕಟ್ಟೆಯ ಸುತ್ತ ಎಣಿಗೆ ಹೊತ್ತ ಮಹಿಳೆಯರು ಹಾಗೂ ಗ್ರಾಮಸ್ತರಿಂದ ಪ್ರದಕ್ಷಿಣೆ ಹಾಕಿ ಸಮೀಪದ ಶಾಂತಳ್ಳಿಯ ಕುಮಾರಲಿಂಗೇಶ್ವರ ದೇವಸ್ಥಾನಕ್ಕೆ ತೆರಳಲಾಯಿತು.
ಈ ಸಂದರ್ಭ ಗ್ರಾಮಧ್ಯಕ್ಷ ಡಿ.ಎ.ಪರಮೇಶ್,ಕಮಿಟಿಸದಸ್ಯರಾದ ದಿವಾಕರ್,ಪ್ರಸನ್ನ,ಪ್ರದೀಪ್ ಕುಮಾರ್,ದಯನಂದ ಅರ್ಚಕರಾದ ಅನಂತ್ ರಾಮ್ ಗ್ರಾಮದ ಮುಖಂಡರಾದ ಕೆ.ಟಿ.ಪರಮೇಶ್,ಪ್ರಕಾಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

No comments

Post a Comment