ಗುಯ್ಯ ಗ್ರಾಮದಲ್ಲಿ ಭಾರಿ ಗಾತ್ರದ ಹೆಬ್ಬಾವು ಸೆರೆ.ಸ್ನೇಕ್ ಸುರೇಶ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳ ಕಾರ್ಯಾಚರಣೆ.

No comments
ಸಿದ್ದಾಪುರ :ಗುಯ್ಯ ಗ್ರಾಮದ ಕಾಫಿ ತೋಟದ ಲೈನ್ ಮನೆಯ ಸಮೀಪವೇ ಕಾಣಿಸಿಕೊಂಡಿದ್ದ ಭಾರೀ ಗಾತ್ರದ ಹೆಬ್ಬಾವನ್ನು ಸ್ನೇಕ್ ಸುರೇಶ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಸೆರೆ ಹಿಡಿದು ಮಾಲ್ದಾರೆ ಅರಣ್ಯಕ್ಕೆ ಬಿಡಲಾಗಿದೆ.ಕಾರ್ಯಪ್ಪ ಎಂಬವರ ಕಾಫಿ ತೋಟದ ಲೈನ್ ಮನೆಯ ಸಮೀಪದ ಗುಂಡಿಯಲ್ಲಿ ಕಾಣಿಸಿಕೊಂಡಿದ್ದ  ಹತ್ತು ಅಡಿ ಉದ್ದದ ಹೆಬ್ಬಾವು ಸ್ಥಳೀಯ  ಕಾರ್ಮಿಕರಿಗೆ ಆತಂಕ ಸೃಷ್ಟಿ ಮಾಡಿತ್ತು .ಹಾವನ್ನು ಕಂಡು ಭಯಭೀತರಾದ ಸ್ಥಳೀಯರು ತಕ್ಷಣ ಸ್ನೇಕ್ ಸುರೇಶ್ ಹಾಗೂ ಅರಣ್ಯ ಇಲಾಖೆ  ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.ತಕ್ಷಣ ಸ್ಥಳಕ್ಕೆ ಬಂದು ಜಂಟಿ ಕಾರ್ಯಾಚರಣೆ ಮೂಲಕ ಹಾವನ್ನು ಸೆರೆಹಿಡಿದು ಮಾಲ್ದಾರೆ ಅರಣ್ಯಕ್ಕೆ ಬಿಡಲಾಗಿದೆ.ಕಳೆದ ಹಲವು ವರ್ಷಗಳಿಂದ ಸಿದ್ದಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಣಿಸಿಕೊಂಡಿದ್ದ ಸಾವಿರಕ್ಕೂ ಹೆಚ್ಚು ವಿವಿಧ ಹಾವುಗಳನ್ನು ಸೆರೆ ಹಿಡಿದು ಅರಣ್ಯಕ್ಕೆ ಬಿಡಲಾಗಿದೆ ಎಂದು ಸ್ನೇಕ್ ಸುರೇಶ್ ಪತ್ರಿಕೆಗೆ ತಿಳಿಸಿದ್ದಾರೆ.ವಲಯ ಅರಣ್ಯಾಧಿಕಾರಿ ದೇವಯ್ಯ ಅವರ ಮಾರ್ಗದರ್ಶನದಲ್ಲಿ  ಉಪವಲಯ ಅರಣ್ಯಾಧಿಕಾರಿ ಸಂಜೀತ್ ಸೋಮಯ್ಯ,ಅರಣ್ಯ ರಕ್ಷಕ ಚಂದ್ರಶ್,ಅಮ್ಮತ್ತಿ ಆರ್.ಆರ್.ಟಿ ಸಿಬ್ಬಂದಿಗಳಾದ ವಿನೋದ್, ಆದರ್ಶ್ , ಮಂಜು, ವಿನೋತ್ , ಮುರುಗನ್ ,ರಾಜ, ದಿಲೀಪ್ , ಅಚ್ಚಯ್ಯ ಸೇರಿದಂತೆ ಮತ್ತಿತರರು ಇದ್ದರು .

No comments

Post a Comment