ವಿಶ್ವವೇ ಇಂದು ಕರೋನಾ ಮಹಾಮಾರಿ ಯಿಂದ ನಲುಗಿ ಹೋಗಿದ್ದು ಭಾರತ ದೇಶವು ಇದಕ್ಕೆ ಹೊರತಾಗಿಲ್ಲ. ಕಂಡುಕೇಳರಿಯದ ಭಯ, ಕಾತುರ, ನಿರಾಸೆ, ಅಸಹನೆ ಜನರಲ್ಲಿ ತಾಂಡವವಾಡುತ್ತಿದೆ. ಕರೋನ ಜನರ ಜೀವದ ಜೊತೆಗೆ ಜೀವನವನ್ನು ಕೂಡ ತಲ್ಲಣಿಸುವಂತೆ ಮಾಡಿದೆ. ಶಿಕ್ಷಣ ಕ್ಷೇತ್ರವಂತೂ ಕರೋನಾ ಮಹಾಮಾರಿ ಇಂದ ಇನ್ನಿಲ್ಲದಂತೆ ಹೊಡೆತ ತಿಂದು ಜರ್ಝರಿತವಾಗಿದೆ. ಸಾಕಷ್ಟು ಮಕ್ಕಳು ಶಾಲೆಯೆಂದರೆ ಏನು ಎಂಬುದರ ಪರಿಕಲ್ಪನೆ ಯಿಂದಲೇ ವಂಚಿತರಾಗಿದ್ದಾರೆ. ಶಾಲೆ-ಕಾಲೇಜುಗಳಿಗೆ ಹೋಗುತ್ತಿದ್ದ ಮಕ್ಕಳು ಮನೆಯಲ್ಲೇ ಕುಳಿತು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಆನ್ಲೈನ್ ಶಿಕ್ಷಣ ಪಡೆಯುತ್ತಿದ್ದರು ಪರಿಣಾಮಕಾರಿ ಶಿಕ್ಷಣ ವಾಗದೆ ಮಕ್ಕಳು ಮೊಬೈಲ್ ಗೀಳಿಗೆ ಒಳಗಾಗುತ್ತಿರುವುದು ವಿಪರ್ಯಾಸವೇ ಸರಿ. ಮುಳುಗುತ್ತಿರುವ ಹಡಗಿನಂತೆ ಆಗಿರುವ ಶಿಕ್ಷಣ ಕ್ಷೇತ್ರವನ್ನು ಸುಸ್ಥಿತಿಗೆ ತರಲು ಮೊದಲು 'ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು' ಎಂಬ ದೇಯವಾಕ್ಯ ದಂತೆ ಶಾಲೆಯ ಮುಖವನ್ನೇ ನೋಡದ ಮಕ್ಕಳಿಗೆ ಶಾಲೆಗಳ ಪರಿಕಲ್ಪನೆ ಹಾಗೂ ಆದರ್ಶ ವ್ಯಕ್ತಿಗಳ ಕಥೆಗಳನ್ನು ಹೇಳುವುದರ ಮೂಲಕ ಅವರಲ್ಲಿ ಶಿಕ್ಷಣದತ್ತ ಆಕರ್ಷಿತರನ್ನಾಗಿ ಸಬಹುದು. ಇನ್ನು ಶಾಲಾ ಕಾಲೇಜು ಗಳಿಲ್ಲದೆ ಬಹುದಿನಗಳಿಂದ ಮನೆಯಲ್ಲಿ ಕುಳಿತಿರುವ ವಿದ್ಯಾರ್ಥಿಗಳಿಗೆ ''ತಲೆ ತಗ್ಗಿಸಿ ಪುಸ್ತಕ ಓದಿದರೆ ಓದಿದರೆ ,ತಲೆ ಎತ್ತುವಂತೆ ಮಾಡುತ್ತದೆ ''ಎನ್ನುವಂತೆ ಆದಷ್ಟು ಪುಸ್ತಕಗಳನ್ನು ಮತ್ತು ವೃತ್ತಪತ್ರಿಕೆಗಳನ್ನು ಓದಿಸುವ ಹವ್ಯಾಸವನ್ನು ಬೆಳೆಸಿಕೊಳ್ಳುವಂತೆ ಪ್ರೇರೇಪಿಸುವುದರ ಮೂಲಕ ಕಲಿಕಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳ ಬಹುದಾಗಿದೆ .ಮನೆಯಲ್ಲಿ ರುವ ಮಕ್ಕಳಲ್ಲಿ ಪೋಷಕರಿಂದ, ನೆರೆಹೊರೆಯವರಿಂದ ಕರೋನಾ ಮಾರಿಯನ್ನು ಹತೋಟಿಯಲ್ಲಿಡುವ ಬಗ್ಗೆ ಜಾಗೃತಿಯನ್ನು ಮೂಡಿಸುವುದರ ಮೂಲಕ ಭವಿಷ್ಯದಲ್ಲಿ ವಿದ್ಯಾರ್ಥಿಗಳ ಕಲರವ ದಿಂದ ತುಂಬಿರುವ ಶಾಲಾ-ಕಾಲೇಜುಗಳ ಹಿಂದಿನ ಸುದಿನವನ್ನು ಮರು ಕಳಿಸ ಬಹುದಾಗಿದೆ.
ಬರಹ:
ಕೆ.ಸಿ .ಗೀತಾಂಜಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವಿರಾಜಪೇಟೆ ತಾಲ್ಲೂಕು
No comments
Post a Comment