ಎಸ್ ವೈ ಎಸ್ ಕೊಡಗು ಜಿಲ್ಲಾ ಸಮಿತಿಯಿಂದ ತುರ್ತುಸೇವಾ ನಿರ್ವಹಣ ತಂಡ ರಚನೆ.

No comments
ಸಿದ್ದಾಪುರ :ಕಳೆದ ಹಲವಾರು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಸಕ್ರಿಯವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಎಸ್ ವೈಎಸ್ ಜಿಲ್ಲಾ ಸಮಿತಿಯ ತುರ್ತು ಸೇವಾ ಸಮಿತಿಯನ್ನು ರಚಿಸಲಾಗಿದೆ ಎಂದು ಎಸ್ ವೈಎಸ್ ಜಿಲ್ಲಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಸಿ.ಎಂ ಹಮೀದ್ ಮುಸ್ಲಿಯಾರ್ ಪತ್ರಿಕೆ ಗೆ ತಿಳಿಸಿದ್ದಾರೆ.ಸಾಮಾಜಿಕ ಜಾಲತಾಣದ ಮೂಲಕ ಗೂಗಲ್ ಮೀಟ್ ನಲ್ಲಿ ಜಿಲ್ಲಾ ಸಮಿತಿಯ ಸಭೆಯನ್ನು ನಡೆಸಲಾಗಿದ್ದು.ಪ್ರಕೃತಿ ವಿಕೋಪ, ಪ್ರವಾಹ, ಕೋವಿಡ್  ಸಂಕಷ್ಟದ ಸಮಯದಲ್ಲಿ ಜನಸಾಮಾನ್ಯರ ತುರ್ತು ಸೇವೆಗೆ ನೆರವಾಗುವ ಮೂಲಕ  ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಜಿಲ್ಲೆಯ ನಾನಾ ಭಾಗಗಳಲ್ಲಿ ಸಮಿತಿಯ  ಪದಾಧಿಕಾರಿಗಳನ್ನೊಳಗೊಂಡ  ವಿವಿಧ ತಂಡಗಳನ್ನು ರಚಿಸಲಾಗಿದ್ದು  ಜನರ ಸೇವೆಗೆ  ಸಜ್ಜಾಗಬೇಕೆಂದು ಸಲಹೆ ನೀಡಲಾಗಿದೆ. ಕಳೆದ ಬಾರಿ ಪ್ರವಾಹ, ಪ್ರಕೃತಿ ವಿಕೋಪ,ಜನರು ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಎಸ್ ವೈಎಸ್ ರಕ್ಷಣಾ ಕಾರ್ಯ ತಂಡ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ಜಾತಿಮತ ಭೇದವಿಲ್ಲದೆ ಜನ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.ಆರೋಗ್ಯ, ಶಿಕ್ಷಣ,ಸಂಕಷ್ಟಕ್ಕೊಳಗಾಗಿರುವ ವರಿಗೆ ನೆರವು ಸೇರಿದಂತೆ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು ರಕ್ಷಣಾ ಕಾರ್ಯ ತಂಡದಲ್ಲಿ ಓರ್ವ  ನಾಯಕನೊಂದಿಗೆ 50 ಮಂದಿ 5ತಂಡಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.  ತುರ್ತು ಸೇವಯಲ್ಲಿ ಕುಶಾಲನಗರ ವಲಯ ಸಿಎಂ ಹಮೀದ್ ಮುಸ್ಲಿಯಾರ್ ಸುಂಟಿಕೊಪ್ಪ 7899891494, ಸಿದ್ದಾಪುರ ವಲಯ ಉಮ್ಮರ್ ಫೈಜಿ 9449267177, ವಿರಾಜಪೇಟೆ ವಲಯ  ಅಬ್ದುಲ್ಲಾ ಮೌಲವಿ 9480021316, ಗೋಣಿಕೊಪ್ಪ  ವಲಯ ಮೊಹಮ್ಮದ್ ಆಲಿ 9945617020, ನಾಪೋಕ್ಲು ವಲಯ  ಮಾಯಿನ್ ಹಾಜಿ  9900348862  ಇವರಿಗೆ ಉಸ್ತುವಾರಿಯನ್ನು ನೀಡಲಾಗಿದೆ ಸಹಾಯ ಅವಶ್ಯಕತೆ ಇರುವವರು  ಇವರನ್ನು  ಸಂಪರ್ಕಿಸಬಹುದಾಗಿದೆ. ಜೂನ್ 26ರಂದು ಸಮಸ್ತ ಸ್ಥಾಪನ ದಿನವಾಗಿದ್ದು ಜಿಲ್ಲೆಯ ಎಲ್ಲಾ ಶಾಖಾ ಗಳಲ್ಲಿಯೂ ಕೋವಿಡ್  ನಿಯಮ ಪಾಲಿಸುವ ಮೂಲಕ ಸರಳವಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು.ಸಾಮಾಜಿಕ ಜಾಲತಾಣದ ಗೂಗಲ್ ಮೀಟ್ ಸಭೆಯಲ್ಲಿ    ಎಸ್ ವೈಎಸ್ ಜಿಲ್ಲಾಧ್ಯಕ್ಷ ಬಶೀರ್ ಹಾಜಿ ಅಧ್ಯಕ್ಷತೆ ವಹಿಸಿದ್ದರು, ಎಸ್ ವೈ ಎಸ್ ಕೇಂದ್ರ ಸಮಿತಿ ಕಾರ್ಯದರ್ಶಿ  ಅಬ್ದುರ್ರಹ್ಮಾನ್ ಮುಸ್ಲಿಯಾರ್ ಪ್ರಾರ್ಥನೆ ಮೂಲಕ ಸಭೆ ಉದ್ಘಾಟಿಸಿದರು, ಸಮಿತಿಯ ಪ್ರಮುಖರಾದ ಉಮ್ಮರ್ ಫೈ ಜಿ, ಉಸ್ಮಾನ್ ಫೈಜಿ, ಕಾರ್ಯದರ್ಶಿ ಅಶ್ರಫ್ ಫೈಜಿ ಸೇರಿದಂತೆ ಮತ್ತಿತರರು ಇದ್ದರು.ಇತ್ತೀಚೆಗೆ  ನಿಧನರಾದ ಎಸ್ ವೈ ಎಸ್ ಕೂಡಿಗೆ ಶಾಖೆ ಅಧ್ಯಕ್ಷರಾಗಿದ್ದ ಬಾಪೂಜಿಯವರ ಅನುಸ್ಮರಣಾ ಪ್ರಾರ್ಥನೆ ನಡೆಯಿತು.

No comments

Post a Comment