ಮಡಿಕೇರಿ ನಗರ ಸಭೆಯ ವ್ಯಾಪ್ತಿಯ ಪರವಾನಿಗೆ ಪಡೆಯದ /ನವೀಕರಿಸದ ವ್ಯಾಪಾರಸ್ಥರು ಇನ್ನೂ 15ದಿನಗೊಳಗೆ ನಗರಸಭೆಗೆ ಅರ್ಜಿ ಸಲ್ಲಿಸದಿದ್ದರೆ ಕಾನೂನು ಕ್ರಮ

No comments

 

ಮಡಿಕೇರಿ :-ನಗರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಉದ್ದಿಮೆಗಳು ಪರವಾನಿಗೆ/ ನವೀಕರಣ ಮಾಡಿಸದೆ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವುದು ಕಂಡು ಬಂದಿದೆ. ನಗರಸಭೆ ವತಿಯಿಂದ ನಗರ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಿಗೆ ಪಡೆಯದೆ/ ನವೀಕರಿಸದೆ ವ್ಯಾಪಾರ ಮಾಡುತ್ತಿರುವವರ ಬಗ್ಗೆ ಸಮೀಕ್ಷೆ ನಡೆಸಿದ್ದು, ಈ ಸಂದರ್ಭದಲ್ಲಿ ನೋಟೀಸ್ ಜಾರಿ ಮಾಡಲಾಗಿದ್ದು, ಪರವಾನಿಗೆ ಇಲ್ಲದೆ ವ್ಯಾಪಾರ ನಡೆಸುತ್ತಿರುವವರ ವಿವರ ನಗರಸಭೆಗೆ ಲಭ್ಯವಿರುತ್ತದೆ.

ಈ ಕುರಿತು 2 ತಿಂಗಳ ಹಿಂದೆ ಅಭಿಯಾನವನ್ನು ಸಹ ಹಮ್ಮಿಕೊಳ್ಳಲಾಗಿ, ಕೆಲವರು ಇದರ ಲಾಭ ಪಡೆದಿರುತ್ತಾರೆ. ನಗರಸಭೆಯಿಂದ ಇμÉ್ಟಲ್ಲ ಕ್ರಮವಹಿಸಿದ್ದರು, ಸಾಕಷ್ಟು ವ್ಯಾಪಾರಸ್ಥರು ಪರವಾನಿಗೆ ಪಡೆಯದೆ ರಾಜಾರೋಷವಾಗಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವುದು ನಗರಸಭೆಯ ಗಮನಕ್ಕೆ ಬಂದಿರುತ್ತದೆ. ಎಲ್ಲಾ ವ್ಯಾಪಾರಸ್ಥರಿಗೂ ನಗರಸಭೆ ವತಿಯಿಂದ ಅಂತಿಮವಾಗಿ ಎಚ್ಚರಿಕೆ ನೀಡಲಾಗಿದ್ದು, ಇನ್ನೂ 15 ದಿನಗಳ ಒಳಗೆ ಪರವಾನಿಗೆ/ ನವೀಕರಣಕ್ಕಾಗಿ ನಗರಸಭೆಗೆ ಅರ್ಜಿ ಸಲ್ಲಿಸುವುದು ಮತ್ತು ಪರವಾನಿಗೆ ಪಡೆದುಕೊಳ್ಳತಕ್ಕದ್ದು ಇಲ್ಲವಾದಲ್ಲಿ ಯಾವುದೇ ಮುನ್ನೂಚನೆ ನೀಡದೆ ತಮ್ಮ ವಿರುದ್ಧ ಪುರಸಭೆ ಕಾಯ್ದೆ 1964 ಪ್ರಕಾರ ಕಾನೂನು ಕ್ರಮವಹಿಸಲಾಗುವುದು ಎಂದು ಪೌರಾಯುಕ್ತರಾದ ಎಸ್.ವಿ.ರಾಮದಾಸ್ ಅವರು ತಿಳಿಸಿದ್ದಾರೆ.

No comments

Post a Comment