ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ ದಾಖಲಾತಿಗೆ ಆನ್ ಲೈನ್ ಅರ್ಜಿ ಆಹ್ವಾನ

No comments

 ಮಡಿಕೇರಿ ಫೆ.09 :-ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆ 2009 ಸೆಕ್ಷನ್ 12(1)(ಸಿ)ರಡಿ 2022-23 ನೇ ಸಾಲಿಗೆ ದಾಖಲಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. (ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.)ಜಿಲ್ಲೆಯ ಸೋಮವಾರಪೇಟೆ ತಾ. ಭಾರತೀಯ ವಿದ್ಯಾಭವನ ಗರುವಾಲೆ, ಕುಶಾಲನಗರದ ಜ್ಞಾನ ಭಾರತಿ ಹಿರಿಯ ಪ್ರಾಥಮಿಕ ಶಾಲೆ, ವಿರಾಜಪೇಟೆ ತಾಲ್ಲೂಕಿನ ಕಡಂಗದ ವಿಜಯ ಕಡಂಗ ಹಿರಿಯ ಪ್ರಾಥಮಿಕ ಶಾಲೆ, ವಿರಾಜಪೇಟೆ ತಾ. ಕಾವೇರಿ ಪ್ರೌಢ ಶಾಲೆ ಕುಕ್ಲೂರು, ತ್ರಿವೇಣಿ ಶಾಲೆ ಈ 05 ಶಾಲೆಗಳಿಗೆ ಶೇ.25 ರಂತೆ ಸೀಟುಗಳನ್ನು ಆರ್ಟಿಇ ಕಾಯ್ದೆ ಅಡಿ ಕಾಯ್ದಿರಿಸಲಾಗಿದೆ.

ಪೋಷಕರು ಅರ್ಜಿ ಸಲ್ಲಿಸಲು ಮಾರ್ಚ್, 03 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಡಿಡಿಪಿಐ ಕಚೇರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್ಸೈಟ್ http ://schooleducation.kar.nic.in ನಲ್ಲಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ವೇದಮೂರ್ತಿ ಅವರು ತಿಳಿಸಿದ್ದಾರೆ.

No comments

Post a Comment