ಫೆಬ್ರವರಿ 11ರಿಂದ 15ರವರೆಗೆ ಇತಿಹಾಸ ಪ್ರಸಿದ್ಧ ಕಡಂಗ ಕೊಕ್ಕಂಡಬಾಣೆ ಉರೂಸ್

No comments

 ಕಡಂಗ : ಇತಿಹಾಸ ಪ್ರಸಿದ್ಧ ಕೊಡಗು ಜಿಲ್ಲೆಯ ಕಡಂಗ ಕೊಕ್ಕಂಡಬಾಣೆ ಮಖಾಂ ಉರೂಸ್ 2022 ಫೆಬ್ರವರಿ 11ರಿಂದ 15ರವರೆಗೆ ನಡೆಯಲಿದೆ. ಕಾರ್ಯಕ್ರಮ 11ರಂದು ಜುಮಾ ನಮಾಜಿನ ಬಳಿಕ  ಧ್ವಜಾರೋಹಣದಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. 5ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳಲ್ಲಿ ಎನ್ ಪಿಎಂ ಸಯ್ಯಿದ್ ಜಲಾಲುದ್ದೀನ್ ತಂಙಳ್ ಕುನ್ನುಂಗೈ, ಕೊಡಗು ಜಿಲ್ಲಾ ನಾಯಿಬ್ ಖಾಝಿ ಅಬ್ದುಲ್ಲಾ ಫೈಝಿ, ಪ್ರಖ್ಯಾತ ಕಥಾಪ್ರಸಂಗಿಗರಾದ ಝುಬೈರ್ ಮಾಸ್ಟರ್ & ಸಂಗಡಿಗರು, ಅಬ್ದುಲ್ ಕರೀ ಫೈಝಿ ಕುಂತೂರು, ಅನ್ವರ್ ಮುಹಿಯದ್ದಿನ್ ಹುದವಿ ಆಲುವ ಮುಂತಾದ ಪ್ರಖ್ಯಾತ ವಿದ್ವಾಂಸರುಗಳು ಭಾಗವಹಿಸಲಿದ್ದಾರೆ. ಫೆಬ್ರವರಿ 14 ಮತ್ತು 15ರಂದು ಸಾಯಂಕಾಲ 3ಗಂಟೆಗೆ ಮೌಲೂದ್ ಪಾರಾಯಣ ಮತ್ತು 4:00ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.

No comments

Post a Comment