ರಸ್ತೆಯ ಮೇಲೆ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ನದಿ ನೀರು : ಎಚ್ಚರಿಕೆ ವಹಿಸುವಂತೆ ಚೆರಿಯಪರಂಬು ಮುಹಿಯುದ್ದೀನ್ ಜಮಾಹತ್ ಆಡಳಿತ ಮಂಡಳಿ ಮನವಿ
ವರದಿ : ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) :ನಾಪೋಕ್ಲು ವ್ಯಾಪ್ತಿಯಲ್ಲಿ ಕಳೆದ 4 ದಿನಗಳಿಂದ ಗಾಳಿ ಸಮೇತ ಬಾರಿ ಮಳೆಯಾಗುತ್ತಿದ್ದು ಪರಿಣಾಮ ಸಮೀಪದ ಚೆರಿಯಪರಂಬು ಕಾವೇರಿ ನದಿ ಉಕ್ಕಿ ಹರಿಯುತಿದ್ದು.
ಚೆರಿಯಪರಂಬು ನಾಪೋಕ್ಲು ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಎರಡು ಕಡೆಗಳಲ್ಲಿ ನೀರು ಹರಿಯುತ್ತಿದೆ.
ಕಲ್ಲುಮೊಟ್ಟೆ ಚೆರಿಯಪರಂಬು ಕಡೆಯಿಂದ ನಾಪೋಕ್ಲುವಿಗೆ ತೆರಳುವ ಒಂದು ಮಾರ್ಗದ ರಸ್ತೆಯ ಮೇಲೆ ಸುಮಾರು 5 ಅಡಿಗಳಿಗೂ ಹೆಚ್ಚು ನೀರು ಹರಿಯುತ್ತಿದೆ... ಹಾಗೆಯೇ ಪಕ್ಕದ ಚೆರಿಯಪರಂಬು ದರ್ಗಾ ಷರೀಫ್, ಜನರಲ್ ತಿಮ್ಮಯ್ಯ ಮೈದಾನದ ರಸ್ತೆಯ ಮೂಲಕ ನಾಪೋಕ್ಲು ಕಡೆಗೆ ಹಾದು ಹೋಗುವ ರಸ್ತೆಯ ಮೇಲೆ ಸುಮಾರು ಎರಡು ಅಡಿಯಷ್ಟು ನೀರು ಹರಿಯುತ್ತಿದೆ.
ಬಾರಿ ಮಳೆಯೊಂದಿಗೆ ಗಾಳಿ ಹಬ್ಬರ ಹೆಚ್ಚಾಗುತ್ತಿದ್ದು ಇದಾಗಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ..ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ.
ಆದುದರಿಂದ ಗ್ರಾಮಸ್ಥರು ಎಚ್ಚರಿಕೆಯಿಂದಿರಲು ಚೆರಿಯಪರಂಬು ಮಹಿಯುದ್ದೀನ್ ಜುಮಾಹತ್ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ..ಯುವ ಕಾಂಗ್ರೆಸ್ ಮುಖಂಡ ಸಿರಾಜ್ ಪರವಂಡ ಮನವಿ ಮಾಡಿದ್ದಾರೆ.

No comments
Post a Comment