ಸೋಮವಾರಪೇಟೆ (Times Of Coorg) : ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ತಾಲೂಕಿನ ಗಡಿಭಾಗದ ಸಕಲೇಶಪುರ ತಾಲೂಕಿಗೆ ಒಳಪಡುವ ಗ್ರಾಮಗಳಲ್ಲಿ ಭಾರಿ ಮಳೆಯಿಂದಾಗಿ ನಾಶನಷ್ಟಗಳು ಉಂಟಾಗಿದೆ. ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆಯ ಹಿತ್ತಲೇಕೇರಿಯಲ್ಲಿ ತಡರಾತ್ರಿ ಸುರಿದ ಗಾಳಿ ಮಳೆಗೆ ವಿದ್ಯುತ್ ಕಂಬ ಮನೆಮೇಲೆ ಬಿದ್ದಿದ್ದೆ.
ಸಕಲೇಶಪುರ ತಾಲೂಕು ವನಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ದಿನಗಳಿಂದ ಅಧಿಕ ಮಳೆ ಮತ್ತು ಗಾಳಿಯಿಂದ ಜನರು ತತ್ತರಿಸಿದ್ದಾರೆ. ರೈತ ಬೆಳೆದಂತಹ ಗದ್ದೆ ಸಸಿಗಳಿಗೆ ನದಿಯ ನೀರು ನುಗ್ಗಿ ಹಾನಿ ಉಂಟುಗಿದೆ. ಅಲ್ಲದೆ ಕೂಡು ರಸ್ತೆಯಿಂದ ಶನಿವಾರ ಸಂತೆ ಮಾರ್ಗ ಮಧ್ಯೆ ಹುಲಿ ಗುತ್ತೂರು ಗ್ರಾಮದಲ್ಲಿ ನದಿಯ ನೀರು ಗದ್ದೆಗೆ ನುಗ್ಗಿ ರೈತರು ಬೆಳೆದಂತಹ ಸಸಿ ಮತ್ತು ನಾಟಿ ಮಾಡಿದ ಬೆಳೆ ಸಂಪೂರ್ಣ ನೀರಿನಿಂದ ಮುಚ್ಚಿ ಹೋಗಿದೆ. ಸಕಲೇಶಪುರ ತಾಲೂಕಿನ ಕೆಸಗಾನಹಳ್ಳಿಯಲ್ಲಿ ಮನೆಯ ಮೇಲೆ ಬಿದ್ದ ತೆಂಗಿನ ಮರ. ಇನ್ನೂ ಹಲವಾರು ಭಾಗಗಳಲ್ಲಿ ಘಟನೆಗಳು ನಡೆದಿವೆ. ಸೋಮವಾರಪೇಟೆಯ ಶಾಂತಳ್ಳಿ ವ್ಯಾಪ್ತಿಯ ಹಲವು ಗ್ರಾಮಗಳಿಗೆ ವಿದ್ಯುತ್ ಕಡಿತಗೊಂಡಿದೆ.



No comments
Post a Comment