ಕತ್ತಲೆಕಾಡು - ಸಿದ್ಧಾಪುರ ರಸ್ತೆಯ ಭಾಗದಲ್ಲಿ ಭೂಕುಸಿತ : ವಾಹನ ಸಂಚಾರ ನಿಷೇಧ

No comments

ಮಡಿಕೇರಿ (Times Of Coorg) :  ಮಡಿಕೇರಿ – ಚೆಟ್ಟಳ್ಳಿ ರಸ್ತೆಯಲ್ಲಿ ಕಾಂಕ್ರಿಟೀಕರಣ ಕಾಮಗಾರಿ ನಡೆಸುವ ಸಂಬಂಧ ಅಬ್ಬಿಯಾಲದಿಂದ ಚೆಟ್ಟಳ್ಳಿವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಈ ಭಾಗದ ಸ್ಥಳೀಯರು  ಕತ್ತಲೆಕಾಡು – ಸಿದ್ದಾಪುರ ಮಾರ್ಗದಲ್ಲಿ ವಾಹನಗಳ ಮೂಲಕ ಸಂಚರಿಸುತ್ತಿದ್ದು, ಹಾಲಿ ಈ ಭಾಗದಲ್ಲಿ ಭೂಕುಸಿತವಾಗಿರುವುದರಿಂದ ಸಾರ್ವಜನಿಕ ಹಿತಾಸಕ್ತಿಯಿಂದ ಈ ಭಾಗದಲ್ಲಿ ತಾತ್ಕಾಲಿಕವಾಗಿ ಎಲ್ಲಾ ರೀತಿಯ  ವಾಹನಗಳ ಸಂಚಾರವನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.

ಸಾರ್ವಜನಿಕರು ಬದಲಿ ರಸ್ತೆಯಾದ ಹಾಕತ್ತೂರು – ಮರಗೋಡು – ಸಿದ್ದಾಪುರ ಮಾರ್ಗವನ್ನು ಬಳಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

No comments

Post a Comment