ನಾಪೋಕ್ಲು : ಅಬ್ಬರದ ಗಾಳಿಯೊಂದಿಗೆ ಅಬ್ಬರಿಸಿ ಬೊಬ್ಬಿರಿಯುತ್ತಿರುವ ವರುಣ
ವರದಿ :ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) : ನಾಪೋಕ್ಲು ವ್ಯಾಪ್ತಿಯಲ್ಲಿಕಳೆದ 5 ದಿನಗಳಿಂದ ಎಡೆ ಬಿಡದೆ ಅಬ್ಬರಿಸುತ್ತಿರುವ ಮಳೆಯಿಂದ
ಹಲವು ಕಡೆಗಳಲ್ಲೂ ವಿದ್ಯುತ್ ಕಂಬಗಳು ಮರಗಳು ಧರೆಗುರುಳಿದ್ದು,ಇದರಿಂದ ನಾಪೋಕ್ಲು ವ್ಯಾಪ್ತಿ ಗ್ರಾಮಗಳು ಕತ್ತಲೆಯಲ್ಲಿ ಮುಳುಗಿದೆ. ಈ ದಿನ ಬೆಳಗ್ಗೆ ನಾಪೋಕ್ಲು ನೆಲಜಿ ಸಂಪರ್ಕ ರಸ್ತೆಯ ಚೊನೇಕೆರೆ ಎಂಬಲ್ಲಿ ರಸ್ತೆಗೆ ಅಡ್ಡಲಾಗಿ ಬೃಹತ್ ಮರ ಉರುಳಿ ಬಿದ್ದಿದ್ದು ಇದರಿಂದ ಕೆಲವು ವಾಹನ ಸಂಚಾರಕ್ಕೆ ತೊಡಕು ಉಂಟಾಗಿತ್ತು.
ಅದಲ್ಲದೆ ನಾಪೋಕ್ಲು ಬೆಟ್ಟಗೇರಿ ಸಂಪರ್ಕ ರಸ್ತೆ ಕೇಮಾಡ್ ಎಂಬಲ್ಲಿ ಈ ದಿನ ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಬೃಹತಾಕಾರದ ಮರವು ವಿದ್ಯುತ್ ಕಂಬ ದೊಂದಿಗೆ ರಸ್ತೆಗೆ ಅಡ್ಡಲಾಗಿ ಧರೆಗುರುಳಿದ್ದು, ಇದನ್ನು ತೆರವುಗೊಳಿಸಲು ಸುಮಾರು ಬೆಳಗಿನ ಜಾವ ಒಂಬತ್ತು ಗಂಟೆ ಆದ ಕಾರಣ ವಾಹನ ಸವಾರರು ಸಂಚರಿಸಲೂ ಆಗದೇ ಐದು ಗಂಟೆಗಳ ಕಾಲ ಅಲ್ಲೇ ಕಾಯಬೇಕಾಗಿತ್ತು
ಮತ್ತ್ತೊಂದು ಕಡೆ ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದು ಪ್ರವಾಹದಿಂದಾಗಿ ನಿನ್ನೆ ಸಂಜೆಯಿಂದ ನಾಪೋಕ್ಲು ಮೂರ್ನಾಡು ಸಂಪರ್ಕ ಮುಖ್ಯರಸ್ತೆ ಬೊಳಿಬಾಣೆ ಎಂಬಲ್ಲಿ ಕಡಿತವಾಗಿದೆ, ಚೆರಿಯ ಪರಂಬು ಕಲ್ಲು ಮೊಟ್ಟೆ ಸಂಪರ್ಕರಸ್ತೆ ಕೂಡ ಕಡಿತವಾಗಿದೆ.
ಅದಲ್ಲದೆ ನಾಪೋಕ್ಲು ಮಡಿಕೇರಿ ಸಂಪರ್ಕ ರಸ್ತೆ ಕಾರೆಕ್ಕಾಡು ಎಂಬಲ್ಲಿ ರಸ್ತೆಯ ಬದಿಯ ಮರ ಉರುಳಿ ಬಿದ್ದು ಮಣ್ಣು ಜಾರಿ ಪೂರ್ತಿ ರಸ್ತೆ ಕುಸಿದು ಬೀಳುವ ಸಾಧ್ಯತೆ ಇದೆ ಕುಸಿದು ಬಿದ್ದರೆ ನಾಪೋಕ್ಲು ಮಡಿಕೇರಿ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ.
ಅದಲ್ಲದೇ ಇದೇ ರೀತಿ ವರುಣನ ಅಬ್ಬರ ಮುಂದುವರೆದರೆ ನಾಳೆಯಿಂದ ನಾಪೋಕ್ಲು ಬೆಟ್ಟಗೇರಿ ಮುಖ್ಯರಸ್ತೆ ಕೂಡ ಪ್ರವಾಹದಿಂದ ಮುಳುಗಡೆಯಾಗುವ ಸಾಧ್ಯತೆ ಇದೆ.
ಸ್ಥಳಕ್ಕೆ ನಾಪೋಕ್ಲು ಪೊಲೀಸರು ಭೇಟಿ ನೀಡಿ ಬ್ಯಾರಿಕೇಡ್ ಇಟ್ಟು ಅಪಾಯಕಾರಿ ಬದಿಯಲ್ಲಿ ವಾಹನ ಸಂಚರಿಸದಂತೆ ಕ್ರಮ ಕೈಗೊಳ್ಳಲಾಯಿತು.
ಏನೇ ಆದರೂ ವರುಣ ತಡವಾಗಿ ಶುರುವಾದರೂ ನಿರಂತರವಾಗಿ ಎಡೆಬಿಡದೆ ಸುರಿಯುತ್ತಿದ್ದು ಜೊತೆಜೊತೆಗೆ ಜೋರಾಗಿ ಬೀಸುತ್ತಿರುವ ಗಾಳಿ ಅಪಾಯಕಾರಿಯಾಗಿ ಮಾರ್ಪಟ್ಟಿದೆ.
ಚೆರಿಯಯಪರಂಬ್ ದಿವಂಗತ ಪರವಂದ ಮಮ್ಮದ್ (ಉಮ್ಮೆನಿ) ಎಂಬವರ ಮನೆಯ ಕಾಂಪೌಂಡಿನ ಮೇಲೆ






No comments
Post a Comment