ವಿರಾಜಪೇಟೆ (TIMES OF COORG) :- ವಿರಾಜಪೇಟೆಯಲ್ಲಿ ಕೇರಳಭಾಗದಿಂದ ಸಮುದ್ರದ ಹಸಿ ಮೀನು ತಂದು ಮಾರಲು ಕೆಲವು ವತ೯ಕರ ಆಗ್ರಹಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಸೋಮಣ್ಣ ಅಸಮತಿ ವ್ಯಕ್ತ ಪಡಿಸಿದರು.
ಇಂದು ಅವರು ವಿ. ಪೇ ಗೆ ಬೇಟಿ ನೀಡಿದ ಸಂದರ್ಭದಲ್ಲಿ ಪ್ರವಾಸಿ ಮಂದಿರದ ಲ್ಲಿ ಕೆಲವು ವತ೯ಕರು ಈ ರೀತಿ ಆಗ್ರಹ ಮಾಡಿದರು.
ಇದಕ್ಕೆ ಶಾಸಕ ಬೋಪಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸದ್ಯಕ್ಕೆ ಕೇರಳ ರಾಜ್ಯದ ಯಾವ ಸಂಪರ್ಕ ಬೇಡ. ಈಗಾಗಲೇ ಸ್ಥಳೀಯವಾಗಿ ಮೀನು ಮಾಂಸ. ಮಾರಟ ಇದೆ ಇದೆ ಸಾಕು ಎಂದರು. ಕೆಲವರು ಈಗ ಮಾರಾಟಕ್ಕೆ ಅವಕಾಶ ನೀಡಿರುವ ಮಾಂಸ ಮೀನುಗಳ ಮಾರಾಟ ಬೇಕಾದರೆನಿಲ್ಲಿಸಿ ಜನರ ಆರೋಗ್ಯ ಮುಖ್ಯ ಎಂದು ಆಗ್ರಹಿಸಿದರು.
ಆಗ ಉಸ್ತುವಾರಿಸಚಿವರು ಸಹ ದೇಶ ಮುಖ್ಯ, ನಂತರ ಅದರ ಜನರ ಆರೋಗ್ಯ ಮುಖ್ಯ ಆದರಿಂದ ಸಮುದ್ರ ಮೀನು ಮಾರಾಟಕ್ಕೆ ಸದ್ಯಕ್ಕೆ ಅವಕಾಶ ನೀಡಲು ಸಾಧ್ಯ ಇಲ್ಲ ಎಂದು ಹೇಳಿದರು.
ನಂತರ ಅವರು ಮುರಾಜಿ ಬಾಲಕರ ವಸತಿ ಶಾಲೆಗೆ ಬೇಟಿ ನೀಡಿ ಅಲ್ಲಿ ಕ್ವಾರನೆಂಟ್ ನಲ್ಲಿಇರುವ ಉತ್ತರ ಕರ್ನಾಟಕದ ಭಾಗದ 58ಜನರ ಬೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಹಲವರು ತಿಂಗಳಿಂದ ಇಲ್ಲಿ ಉಳಿದಿದ್ದು ಊರಿಗೆ ಮರಳಿ ಕಳಿಸುವಂತೆ ಕಣ್ಣೀರು ಸುರಿಸುತ್ತ ಬಂಧ ಮುಕ್ತ ಗೊಳಿಸಲುವಿನಂತಿಯನ್ನು ಮಾಡಿದರು. ಆಗ ಸಚಿವರು ಎರಡು ಮೂರು ದಿನದಲ್ಲಿ ನಿಧಾ೯ರ ತೆಗೆದುಕೊಳ್ಳುವ ಭರವಸೆ ನೀಡಿ ದರು. ಈ ಸಂದರ್ಭಜೊತೆಯಲ್ಲೇ ಸಂಸದ ಪ್ರತಾಪ ಸಿಂಹ ಶಾಸಕ ಬೋಪಯ್ಯ, ಜಿಲ್ಲಾ ಅಧಿಕಾರಿ ಅನೀಸ್ ಕಣ್ಮಣಿ ಜಾಯಿ, ಪೊಲೀಸ್ ವರಿಷ್ಠಾಧಿಕಾರಿ ಸಮನ ಪನ್ನೇಕರ್ ಉಪ ವಿಭಾಗ ಅಧಿಕಾರಿ ಜವರೆ ಗೌಡ, ತಹಶೀಲ್ದಾರ್ ನಂದೀಶ್, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
No comments
Post a Comment