ಸೋಮವಾರಪೇಟೆ (Times Of Coorg) : ನಡುರಸ್ತೆಯಲ್ಲೇ ಅಬಕಾರಿ ಉಪ ಅಧಿಕ್ಷಕ ಶಿವಪ್ಪ ಮೇಲೆ ಅಬಕಾರಿ ಇನ್ಸ್‌ಪೆಕ್ಟರ್ ನಿಂದ ಎಕಾಏಕಿ ಹಲ್ಲೆ ನಡೆಸಲಾದ ಘಟನೆ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರದಲ್ಲಿ ನಡೆದಿದೆ.
ನಡು ರಸ್ತೆಯಲ್ಲೇ ಕಿತ್ತಾಡಿದ ಅಧಿಕಾರಿಗಳು ಸಾರ್ವಜನಿಕರಿಗೆ ಮನರಂಜನೆ ನೀಡಿದ್ದಾರೆ.
ಅಕ್ರಮ ಮದ್ಯ ಮಾರಾಟ ಪರಿಶೀಲನೆಗೆ ಸ್ಥಳಕ್ಕೆ ಅಬಕಾರಿ ಉಪ ಅಧಿಕ್ಷಕ ಶಿವಪ್ಪ ತೆರೆಳಿದ್ದರು , ಬಳಿಕ ಅಬಕಾರಿ ಇನ್ಸ್‌ಪೆಕ್ಟರ್ ನಟರಾಜ್ ಸ್ಥಳಕ್ಕೆ ಬಂದಿದ್ದರು.
ಅವಾಚ್ಯ ಶಬ್ದಗಳನ್ನು ಬಳಸಿ , ನಟರಾಜ್ ಹಾಗು ಅವರ ಕಾರು ಚಾಲಕನಿಂದ ಕೃತ್ಯವೆಸಗಲಾಗಿದ್ದು , ಮಾರಾಮಾರಿಗೆ ಕಾರಣ ತಿಳಿದು ಬಂದಿಲ್ಲ. ಸದ್ಯ ಹಲ್ಲೆ ನಡೆಸುತ್ತಿರುವ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
No comments
Post a Comment