ಮಧ್ಯಪ್ರದೇಶದಲ್ಲಿ ಜಿಲ್ಲೆಯ 21 ವಿದ್ಯಾರ್ಥಿಗಳು ಲಾಕ್ ಡೌನ್

No comments
ಮಡಿಕೇರಿ (Times Of Coorg) :  ಮೈಗ್ರೇಶನ್ ಕೋರ್ಸ್ ಗಾಗಿ ಮಧ್ಯಪ್ರದೇಶಕ್ಕೆ ತೆರಳಿದ್ದ ಕೊಡಗು ಜಿಲ್ಲೆಯ 21 ವಿದ್ಯಾರ್ಥಿಗಳು ದೇಶದ್ಯಾಂತ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಹುಟ್ಟೂರಿಗೆ ಹಿಂತಿರುಗಲಾರದೇ ಸಂಕಷ್ಟಕ್ಕೊಳಗಾಗಿರುವ ಘಟನೆ ವರದಿಯಾಗಿದೆ. ಅತ್ತ ಮಕ್ಕಳು ಊರಿನಲ್ಲಿರುವ ಪೋಷಕರನ್ನು ಸೇರಲಾಗದೇ ರೋಧಿಸುತ್ತಿದ್ದರೆ ಇತ್ತ ಪೋಷಕರು ಮಕ್ಕಳನ್ನು ನೋಡಲಾಗದೇ ಕಂಗಾಲಾಗಿದ್ದರೆ. ಕಳೆದ ಜುಲೈ ತಿಂಗಳಿನಲ್ಲಿ ಮಡಿಕೇರಿ ಸಮೀಪದ ಗಾಳಿಬೀಡು ನವೋದಯ ಶಾಲೆಯ 9ನೇ ತರಗತಿಯ 10 ವಿದ್ಯಾರ್ಥಿಗಳು ಮತ್ತು 11 ವಿದ್ಯಾರ್ಥಿನಿಯರು ಒಟ್ಟು 21 ಮಂದಿ ಮಧ್ಯಪ್ರದೇಶದಲ್ಲಿರುವ ಇಂಧೋರ್ ಮಾನ್ಪುರ್ ನವೋದಯ ಶಾಲೆಗೆ ಮೈಗ್ರೇಷನ್ ಕೋರ್ಸ್ ಗಾಗಿ ಹೋಗಿದ್ದಾರೆ. ಪೂರ್ವ ನಿಗಧಿಯಂತೆ ಅಲ್ಲಿನ ಕೋರ್ಸ್ ಮುಗಿದ ನಂತರ ಮಾರ್ಚ್ 21ಕ್ಕೆ ಕೊಡಗು ಜಿಲ್ಲೆಗೆ ಹಿಂತಿರುಗಿ ಅವರವರ ಊರನ್ನು ಸೇರಬೇಕಾಗಿತ್ತು. ಆದರೆ ಈ ನಡುವೆ ದೇಶಾದ್ಯಂತ ಲಾಕ್ ಡೌನ್ ಜಾರಿಗೊಂಡು ಪುನಃ ಮೇ 3ರ ವರೆಗೆ ವಿಸ್ತರಣೆಯಾಗಿರುವುದರಿಂದ ಮಧ್ಯಪ್ರದೇಶದ ನವೋದಯ ಶಾಲೆಯಲ್ಲಿ ಸಿಲುಕಿಕೊಂಡಿರುವ ಕೊಡಗಿನ 21 ಮಂದಿ ವಿದ್ಯಾರ್ಥಿಗಳು ಜಿಲ್ಲೆಗೆ ಹಿಂತಿರುಗಿ ಬಂದು ಪೋಷಕರನ್ನು ಸೇರಿಕೊಳ್ಳಲಾಗದೇ ಅತಂತ್ರಸ್ಥಿತಿಯಲ್ಲಿದ್ದಾರೆ ಎಂಬ ಮಾಹಿತಿ ದೊರೆತಿದೆ. ಹೇಗಾದರೂ ಮಾಡಿ ಮಕ್ಕಳನ್ನು ಮಧ್ಯಪ್ರದೇಶದಿಂದ ಕರೆಸಿಕೊಳ್ಳುವಂತೆ ಪೋಷಕರು ಮಾಡಿದ ಮನವಿಗೆ ಗಾಳಿಬೀಡು ನವೋದಯ ಶಾಲೆಯ ಪ್ರಾಂಶುಪಾಲರು “ಈಗ ಏನು ಮಾಡಲಾಗದು” ಎಂದು ಕೈ ಚೆಲ್ಲಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ಊರಿಗೆ ಹಿಂತಿರುಗಲಾಗದೇ ಅಲ್ಲಿ ಸಿಲುಕಿರುವ ಮಕ್ಕಳ ರೋಧನೆ ಮುಗಿಲು ಮುಟ್ಟಿದ್ದರೆ ಇಲ್ಲಿ ಪೋಷಕರು ಮಕ್ಕಳನ್ನು ನೋಡಲಾಗದೇ ದೃತೀಗೆಟ್ಟಿದ್ದಾರೆ.

No comments

Post a Comment