ಕೋವಿಡ್ -19 ಸಂಭವನೀಯ ಮರಣದ ಮೃತದೇಹಗಳನ್ನು ನಿರ್ವಹಿಸುವ ಮತ್ತು ವಿಲೇವಾರಿ ಮಾಡುವ ಬಗ್ಗೆ ಕಾರ್ಯಾಗಾರ



ಮಡಿಕೇರಿ (TIMES OF COORG):-  ಸರ್ಕಾರದ ಮಾರ್ಗಸೂಚಿಯನುಸಾರ ಜಿಲ್ಲಾ ಪೊಲೀಸ್ ವತಿಯಿಂದ ಕೊಡಗು ಜಿಲ್ಲಾ ಕೋವಿಡ್ -19 ಡೆತ್ ಡಿಸ್ ಪೋಸಲ್ ತಂಡ ರಚನೆ ಮಾಡಲಾಗಿದ್ದು ದೇಶದಲ್ಲಿ ಸಾಂಕ್ರಾಮಿಕವಾಗಿ ಹರಡುತ್ತಿರುವ ಕೋವಿಡ್ -19 ಕಾಯಿಲೆಗೆ ತುತ್ತಾಗಿ ವೈದ್ಯಕೀಯ ಚಿಕಿತ್ಸೆ ಫಲಿಸದೆ ಯಾರಾದರೂ ಸೋಂಕಿತ ರೋಗಿಗಳು ಮೃತರಾದಲ್ಲಿ ಅಂತಹ ಮೃತರ ಪಾರ್ಥಿವ ಶರೀರವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಬಗ್ಗೆ ದಿನಾಂಕ 16-04-2020 ರಂದು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಡೆತ್ ಡಿಪೋಸಲ್ ತಂಡದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಫೋರೆನ್ಸಿಕ್ ವಿಭಾಗದ ತಜ್ಞ ವೈದ್ಯಾಧಿಕಾರಿಗಳಿಂದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. 
               ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಉಪನ್ಯಾಸಕರಾದ ಡಾ. ಉಮೇಶ್ ಮತ್ತು ಡಾ. ಶ್ಯಾಮಲಾ ರವರು ಕೋವಿಡ್-19 ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮೃತ ದೇಹದ ವಿಲೇವಾರಿ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಹಾಗೂ ಮೃತ ಶರೀರದ ವಿಲೇವಾರಿ ಕುರಿತಂತೆ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ  ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತರಬೇತಿ ನೀಡಿದರು.
            ಕಾರ್ಯಾಗಾರದಲ್ಲಿ ಜಿಲ್ಲಾ ಸಶಸ್ತ್ರ ದಳದ ಪೊಲೀಸ್ ನಿರೀಕ್ಷಕರಾದ ಶ್ರೀ ರಾಚಯ್ಯ, ಆರ್.ಎಸ್.ಐ ಶ್ರೀ ಭಾನುಪ್ರಕಾಶ್, ಪ್ರೋ. ಆರ್.ಎಸ್.ಐ ಮತ್ತು ಕೊಡಗು ಜಿಲ್ಲಾ ಕೋವಿಡ್-19 ಡೆತ್ ಡಿಸ್ ಪೋಸಲ್ ತಂಡದ ಪೊಲೀಸ್ ಸಿಬ್ಬಂದಿಗಳು ಪಾಲ್ಗೊಂಡು ತರಬೇತಿ ಪಡೆದಿರುತ್ತಾರೆ.