ದೇವಸ್ಥಾನ ಅರ್ಚಕರು ಮದರಸ ಅಧ್ಯಾಪಕರಿಗೆ ಕಿಟ್ ವಿತರಣೆ . ಮಾನವೀಯತೆ ಮೆರೆದ ಕೊಡಗು ಚ್ಯಾರಿಟೇಬಲ್ ಗ್ರೂಪ್

No comments

ಸಿದ್ದಾಪುರ (Times Of Coorg): ಕಳೆದ ಹಲವು ತಿಂಗಳ ಹಿಂದೆ ವಿಶ್ವದಾದ್ಯಂತ ವ್ಯಾಪಕವಾಗಿ ಹರಡಿದ ಕೊರೊನಾ ವೈರಸ್ ನಿಂದ ಜನರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದು.ವ್ಯಾಪಾರ ವಹಿವಾಟು. ಕೆಲಸ ಕಾರ್ಯಗಳಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್,ಸೀಲ್ ಡೌನ್ ನಿಂದಲೂ ಜನರು ಅತ್ಯಂತ ಸಮಸ್ಯೆಯಲ್ಲಿ ಸಿಲುಕಿ ಕೊಂಡಿದ್ದು ಕೆಲಸವೂ ಇಲ್ಲದೇ ಆಹಾರಕ್ಕೂ ಪರದಾಡುವಂತಹ ಪರಿಸ್ಥಿತಿ ಹಲವೆಡೆ ಇದ್ದರೂ ಸಂಕಷ್ಟದಲ್ಲಿರುವ ನಮ್ಮೂರ ಜನರಿಗೆ ನೆರವಾಗುವ ಮೂಲಕ  ಸ್ಪಂದಿಸಬೇಕೆಂದು ಕೊಡಗು ಚ್ಯಾರಿಟೇಬಲ್ ವಾಟ್ಸಪ್ ಗ್ರೂಪ್ ಮೂಲಕ ದಾನಿಗಳ ಸಹಕಾರದಿಂದ 300ಕ್ಕೊ ಹೆಚ್ಚು ತರಕಾರಿ ಕಿಟ್ ಗಳನ್ನು  ವಿತರಿಸಿ ಮಾನವೀಯತೆ ಮೆರೆದ ಸಂಘಟನೆ.


  ಇದೀಗ ಬಕ್ರೀದ್ ಹಬ್ಬದ ಪ್ರಯುಕ್ತ ದೇವಸ್ಥಾನದ ಅರ್ಚಕರು ಹಾಗೂ ಮದರಸಾ ಅಧ್ಯಾಪಕರುಗಳಿಗೂ ಆಹಾರ ಧಾನ್ಯಗಳ ಕಿಟ್ ಗಳನ್ನು  ವಿತರಿಸಿ ಜಾತಿ ಮತ ಭೇದವಿಲ್ಲದೆ  ಮಾನವೀಯತೆಯೊಂದಿಗೆ ಸೌಹಾರ್ದತೆ ಮೆರೆದಿದ್ದಾರೆಎಂದು ಗ್ರಾಮ ಪಂಚಾಯಿತಿ ಸದಸ್ಯ ವಿಜು ಹಾಗೂ ಗ್ರಾಮದ ಪ್ರಮುಖರಾದ ರದೀಶ್.ವಿನುಕುಮಾರ್ ಸೇರಿದಂತೆ ಮತ್ತಿತರರು ಸಂಘಟನೆಯ ಯುವಕರ ಕಾರ್ಯವನ್ನು ಶ್ಲಾಘಿಸಿದ್ದಾರೆ.


ವಿರಾಜಪೇಟೆ ತಾಲ್ಲೂಕಿನ ಹೊಲಮಾಳ ಗ್ರಾಮದಲ್ಲಿ  ಕೊಡಗು ಚ್ಯಾರಿಟೇಬಲ್  ಚನ್ನಯ್ಯನಕೊಟೆ ವಾಟ್ಸಪ್ ಗ್ರೂಪ್‌ ವೊಂದನ್ನು ರಚಿಸಿ ಕಳೆದ ವರ್ಷಗಳಿಂದಲೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ವಿದೇಶದಲ್ಲಿರುವ ಗ್ರಾಮದ ಯುವಕರು ಸಂಕಷ್ಟದಲ್ಲಿ ಇರುವವರಿಗೆ ನೆರವಾಗಲು ಸಹಾಯ ಮಾಡುತ್ತಿರುವುದರಿಂದ ಅಗತ್ಯತೆಗೆ ಬೇಕಾದ ಆಹಾರ ಕಿಟ್ಗಳನ್ನು ವಿತರಿಸಲಾಗುತ್ತಿದೆ ಎಂದು  ಕೊಡಗು ಚ್ಯಾರಿಟೇಬಲ್  ಗ್ರೂಪ್‌ ನ ಪ್ರಮುಖ ಎಂ ಎ ಜಾಫರ್ ತಿಳಿಸಿದ್ದಾರೆ.


ದೇವಸ್ಥಾನವೊಂದರ ಅರ್ಚಕ ಮಂಜುನಾಥ ಭಟ್  ಮಾತನಾಡಿ  ಕಳೆದ ಮೂರು ತಿಂಗಳಿನಿಂದ ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ವಿಧಿಸಲಾಗಿದ್ದ ಲಾಕ್ ಡೌನ್  ನಿಂದ ಎಲ್ಲ ವರ್ಗದ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಕೊಡಗು ಚಾರಿಟೇಬಲ್ ಗ್ರೂಪ್ ಸಂಘಟನೆಯವರು ಜಾತಿ ಮತ ಭೇದವಿಲ್ಲದೆ ಗ್ರಾಮದ ಎಲ್ಲರಿಗೂ ಕಿಟ್  ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದರು. ಈ ಸಂದರ್ಭಕೊಡಗು ಚ್ಯಾರಿಟೇಬಲ್  ಚನ್ನಯ್ಯನಕೊಟೆ  ಗ್ರೂಪ್ಅಧ್ಯಕ್ಷ  ಎಚ್.ಎ ಮುಸ್ತಫಾ ,ಖಜಾಂಜಿ ನೌಫಲ್, ಪ್ರಮುಖರಾದ ನಜೀರ್ ,ಅಕ್ಬರ್, ಸಮೀರ್, ರಶಾದ್, ಸೈಯ್ಯದ್, ಮುಸ್ತಫಾ, ಜಲೀಲ್, ಹುಸೈನ್,ಇರ್ಶಾದ್, ಬದ್ರುದ್ದೀನ್ ಸೇರಿದಂತೆ ಮತ್ತಿತರರು ಇದ್ದರು .


No comments

Post a Comment