ನಾಪೋಕ್ಲು : ಸೀಲ್ ಡೌನ್ ನಿವಾಸಿಗಳಿಂದ ಕೊರೋನಾ ಪರೀಕ್ಷೆ ನಿರಾಕರಣೆ
ವರದಿ : ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg): ನಾಪೋಕ್ಲು ವ್ಯಾಪ್ತಿಯಲ್ಲಿ ಕೊರೋನಾ ಸೋಂಕು ದೃಢಪಟ್ಟ ವ್ಯಕ್ತಿಗಳು ವಾಸವಾಗಿದ್ದ ನಾಪೋಕ್ಲು ಬೇತು ಗ್ರಾಮದ ಮೂರು ಕಟ್ಟಡವನ್ನು ಕಳೆದ ನಾಲ್ಕು ದಿನಗಳ ಹಿಂದೆ ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದರು.
ಈ ದಿನ ಕೊರೋನಾ ಸೋಂಕಿತರು ಇದ್ದ ಕಟ್ಟಡದ ನಿವಾಸಿಗಳನ್ನು ಕೋರೋನ ಪರೀಕ್ಷೆ ನಡೆಸಲು ಮಡಿಕೇರಿಯಿಂದ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಸ್ಥಳೀಯ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಅಂಗನವಾಡಿ ಕಾರ್ಯಕರ್ತೆ ಆಗಮಿಸಿದ್ದು,ಈ ಸಂದರ್ಭ ಬೇತು ರಸ್ತೆಯ ಎರಡು ಕಟ್ಟಡಗಳ ನಿವಾಸಿಗಳು ಪರೀಕ್ಷೆ ಮಾಡಿಸಿ ಕೊಂಡಿದ್ದರು
ಆದರೆ ಒಂದು ಸೀಲ್ ಡೌನ್ ಪ್ರದೇಶದ ನಿವಾಸಿಗಳು ನಾವು ವಾಸವಾಗಿರುವ ಈ ಪ್ರದೇಶವನ್ನು ಸೀಲ್ ಡೌನ್ ಮಾಡಿ 4 ದಿನ ಕಳೆದರೂ ಯಾವೊಬ್ಬ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಇತ್ತ ತಿರುಗಿ ನೋಡಿಲ್ಲ ನಮಗೆ ಸರಕಾರ ಯಾವುದೇ ಸೌಲಭ್ಯ ಒದಗಿಸಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ,ಕೋವಿಡ್ ಪರೀಕ್ಷೆ ನಡೆಸಲು ಬಂದಂತಹ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡು ಮೇಲಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟುಹಿಡಿದು ನಾವುಗಳು ಯಾವುದೇ ಕಾರಣಕ್ಕೂ ಕೋರೋನ ಪರೀಕ್ಷೆ ನಡೆಸುವುದಿಲ್ಲ ನಮಗೇನಾದರೂ ಆದರೆ ನಾವೇ ಜವಾಬ್ದಾರಿಯೆಂದು ಹೇಳಿ ಕೋವಿಡ್ ಪರೀಕ್ಷೆ ನಡೆಸಲು ನಿರಾಕರಿಸಿದರು.
ಅಂಗನವಾಡಿ ಕಾರ್ಯಕರ್ತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಪೊಲೀಸ್ ಇಲಾಖೆ ಕೊರೋನಾ ಪರೀಕ್ಷೆ ನಡೆಸುವಂತೆ ಎಷ್ಟೇ ಮನವಿ ಮಾಡಿಕೊಂಡರು. ಪರೀಕ್ಷೆ ನಡೆಸಲು ಆ ಪ್ರದೇಶದ ನಿವಾಸಿಗಳು ಪಟ್ಟು ಸಡಿಲಿಸದ ಕಾರಣ ಸಿಬ್ಬಂದಿಗಳು ವಾಪಸ್ ತೆರಳಿದ್ದರು.

No comments
Post a Comment