ಕೊಡಗು ಜಿಲ್ಲೆಯಲ್ಲಿ ಇಂದು 11 ಕೋವಿಡ್-19 ಪ್ರಕರಣಗಳು ಧೃಢ : ಇದುವರೆಗೆ 8 ಜನ ಕೋವಿಡ್ ಗೆ ಬಲಿ
ಮಡಿಕೇರಿ (Times Of Coorg):-ಜಿಲ್ಲೆಯಲ್ಲಿ ಇಂದು ಬೆಳಗ್ಗೆ ವೇಳೆಗೆ 11 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಸೋಮವಾರಪೇಟೆ ತಾಲೂಕಿನ ಹೆಬ್ಬಾಲೆ ಹುಲುಸೆಯ 45 ವರ್ಷದ ಮಹಿಳೆ, 52 ವರ್ಷದ ಪುರುಷ, 33 ವರ್ಷದ ಪುರುಷ, 23 ವರ್ಷದ ಮಹಿಳೆ, 2 ವರ್ಷದ ಬಾಲಕಿ, 27 ವರ್ಷದ ಪುರುಷ ಮತ್ತು 40 ವರ್ಷದ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ. ಮಡಿಕೇರಿಯ ನಾಪೋಕ್ಲುವಿನ ಎಮ್ಮೆಮಾಡುವಿನಲ್ಲಿ 52 ವರ್ಷದ ಪುರುಷ. ವಿರಾಜಪೇಟೆಯ ಸಿದ್ಧಾಪುರದ 64 ವರ್ಷದ ಮಹಿಳೆ.
ಸೋಮವಾರಪೇಟೆ ತಾಲೂಕಿನ ನೆಲ್ಲಿಹುದಿಕೇರಿಯ 33 ವರ್ಷದ ಪುರುಷ ಮತ್ತು ಮಡಿಕೇರಿ ಮಹದೇವಪೇಟೆಯ ಎ.ಬಿ ಸ್ಕೂಲ್ ಬಳಿಯ 54 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳು 385 ಆಗಿದ್ದು, 272 ಜನ ಗುಣಮುಖರಾಗಿದ್ದಾರೆ. 105 ಸಕ್ರಿಯ ಪ್ರಕರಣಗಳಿದ್ದು, 8 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 88 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

No comments
Post a Comment