ಕೊಡ್ಲಿಪೇಟೆ ರೋಟರಿ ಹೇಮಾವತಿ ಸಂಸ್ಥೆಯ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ
ವರದಿ : ಹನೀಫ್ ಕೊಡ್ಲಿಪೇಟೆ
ಕೊಡ್ಲಿಪೇಟೆ (Times Of Coorg): ಕೊಡ್ಲಿಪೇಟೆ ರೋಟರಿ ಹೇಮಾವತಿ ಸಂಸ್ಥೆಯ ಮುಂದಿನ ಅದ್ಯಕ್ಷರ ಪದಗ್ರಹಣ ಸಮಾರಂಭ ಪ್ಲಾಂಟರ‌್ಸ್ ಕ್ಲಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ವಲಯ ನಿಕಟಪೂರ್ವ ರೋಟರಿ ರಾಜ್ಯಪಾಲ ಸದಾನಂದರವರು ಪದಗ್ರಹಣ ಸಮಾರಂಭ ಆದಿಕಾರಿಯಾಗಿ ಕಾರ್ಯಕ್ರಮ ನಡೆಸಿದರು.
ನಿರ್ಗಮಿತ ಅದ್ಯಕ್ಷರಾದ ಹೆಚ್.ಜೆ. ಪ್ರವೀಣ್ ರವರು ಸ್ವಾಗತ ಬಾಷಣ ಮಾಡಿ, ನೂತನ ಅದ್ಯಕ್ಷರಾಗಿ ಪದಗ್ರಹಣ ವಾದ ಹೆಚ್.ಎಂ.ದಿವಾಕರ್ ರವರಿಗೆ ಅಧಿಕಾರ ಹಸ್ತಾಂತರಿಸಿದರು,
ರೋಟರಿ ಹೇಮಾವತಿ ನೂತನ ಸದಸ್ಯರಾಗಿ ಸೇರ್ಪಡೆಯಾದ ನಾಲ್ವರಿಗೆ ಪ್ರತಿಜ್ಞೆ ಭೋದಿಸುವ ಮೂಲಕ ಸದಸ್ಯತ್ವ ನೀಡಿದ ಸಭಾದಿಕಾರಿ ಸದಾನಂದರವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಅದ್ಯಕ್ಷರಾಗಿ ಪದಗ್ರಹಣ ಮಾಡಿದ ದಿವಾಕರ್ ರವರಿಗೆ ಸಮಾಜ ಮುಖಿ ಕೆಲಸಗಳನ್ನು ನಿರ್ವಹಿಸಲು ರೋಟರಿ ಅವಕಾಶ ನೀಡಿದೆ
ನೂತನ ಸದಸ್ಯರಾಗಿ ರೋಟರಿ ಪಿನ್ ಹಾಕಿಸಿಕೊಂಡವರಿಗೆ
ಅಂತರಾಷ್ಟ್ರೀಯ ಮಟ್ಟದಲ್ಲಿ ಎಲ್ಲಿ ಹೋದರು ಸಹ ರೋಟರಿ ಸಂಸ್ಥೆ ಗುರುತಿಸುತ್ತದೆ ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಯಾವುದಾದರೊಂದು ವಿಧದಲ್ಲಿ ಸಹಾಕಾರ ಸಿಗುವುದೆ ಪೌಲ್ ಆರೀಸ್ ರವರು ಹುಟ್ಟುಹಾಕಿದ ಅಂತಾರಾಷ್ಟ್ರೀಯ ಸಂಸ್ಥೆಯಾದ ರೋಟರಿಯ ವ್ಯೆಶಿಷ್ಟ್ಯ ವೆಂದರು.
ರೋಟರಿ ಕುಟುಂಬದಲ್ಲಿ ಸ್ನೆಹಿತರ ಸಂಪರ್ಕದಿಂದ ವ್ಯಾಪಾರ ಇನ್ನಿತರ ವಹಿವಾಟುಗಳಿಗೆ ಅನಿಯಮಿತ ಅವಕಾಶ ಲಭ್ಯವಾಗಲಿದೆ.ರಾಜಕೀಯ ರಹಿತವಾಗಿ ಎಲ್ಲಾ ಸಮಾಜ ಮುಖಿ ಕೆಲಸ ಗಳನ್ನು ಮಾಡಬೇಕೆಂದು ಸೂಚಿಸಿದರು.
ಮುಖ್ಯ ಅತಿಥಿ ಗಳಾದ ವಲಯ ಉಪ ಗೌವರ್ನರ್ ರವಿ ರವರು ಮಾತನಾಡುತ್ತಾ ,ಈ ವರ್ಷ ಹಮ್ಮಿಕೊಳ್ಳಬೇಕಾದಂಥಹ
ಆರೋಗ್ಯ ,ನೀರು ,ಶುಚಿತ್ವ ,ಪರಿಸರ ಸಂರಕ್ಷಣೆ ಯ ಕಾರ್ಯಕ್ರಮ ಹಾಗೂ ಕೊವಿಡ್ ನ್ನು ಎದುರಿಸುವ ಸಂಬದ್ದಪಟ್ಟಂಥಹ ಯೋಜನೆಗಳನ್ನು ವಿವರಿಸಿದರು,
ರಾಷ್ಟ್ರೀಯ ರೋಟರಿ ಸಂಸ್ಥೆ ಯು ಪ್ರದಾನ ಮಂತ್ರಿಗಳ ಕೊವಿಡ್ ಫಂಡ್ ಗೆ ಮೂವತ್ತು ಕೋಟಿ ದೇಣಿಗೆಯನ್ನು ನೀಡಿದ್ದು.ದೇಶಾದ್ಯಂತ ವಿವಿಧ ಭಾಗಗಳಲ್ಲಿ ವೆಂಟಿಲೇಟರ್ .ಸೇರಿದಂತೆ ಇನ್ನಿತರ ಸಲಕರಣೆಗಳನ್ನು ವಿತರಿಸುವ
ಒಟ್ಟು ಮೂನ್ನೂರು ಕೊಟಿ ಮೊತ್ತದ ಯೋಜನೆ ಹಮ್ಮಿಕೊಂಡಿದೆ ಎಂದರು.
ಕೊಡ್ಲಿಪೇಟೆ ಯ ಐದು ಜನ ರೋಟರಿ ಸದಸ್ಯರುಗಳು ತಲಾ ಐನೂರು ಡಾಲರ್ ದೇಣಿಗೆಯನ್ನು ರೋಟರಿಗೆ ನೀಡಿರಿವುದು ಹೆಮ್ಮೆಯಾಗುತ್ತದೆ
ಇವರಿಗೆ ಅಂತರಾಷ್ಟ್ರೀಯ ಅದ್ಯಕ್ಷರ ಸಹಿಯಿರುವ ಸರ್ಟಿಫಿಕೇಟ್ ನೊಂದಿಗೆ ಪಿ.ಹೆಚ್.ಎಫ್.
ಎಂಬ ಬಿರುದು ಸಿಗಲಿದೆ ,
ತಮ್ನ ಊರಿನಲ್ಲಿ ಸ್ಥಳೀಯ ರೋಟರಿ ಕ್ಲಬ್ ಏನಾದರೂ ಜನೋಪಯೋಗಿ ಕಾರ್ಯಕ್ರಮ ಹಮ್ಮಿಕೊಂಡರೆ
ಈ ಹಣದಲ್ಲಿ ಐವತ್ತು ಪ್ರತಿಶತಃ ಫಂಡ್ ಸಿಗಲಿದೆ ಎಂದರು
ದೇಣಿಗೆ ನೀಡಿರುವ ಪ್ರವೀಣ್ ಹೆಚ್.ಜೆ,
ಲೋಕೇಶ್ ಯು.ಹೆಚ್ ,ಯತೀಶ್ ಡಿ.ಎಸ್ ,
ಬಾನುಪ್ರಕಾಶ್ ,ಮಾದವಲಾಲ್ .ರವರಿಗೆ ಪಿ.ಹೆಚ್.ಎಪ್. ಸರ್ಟಿಫಿಕೇಟ್ ನೀಡಿ ಆಭಿನಂದಿಸಿದರು.
ಮುಖ್ಯ ಅಥಿತಿಗಳಾದ ವಲಯ ಲೆಪ್ಟಿನೆಂಟ್ ರಾದ ಜೇಕಬ್ ರವರು ನೂತನ ಅದ್ಯಕ್ಷರು ಹಾಗೂ ನೂತನವಾಗಿ ಸೆರ್ಫಡೆಯಾದ ಸದಸ್ಯರುಗಳಿಗೆ ಹಾಗೂ ಪಿ.ಹೆಚ್.ಎಪ್ .ಗಳಿಗೆ ಶುಭ ಹಾರ‌್ಯೆಸಿದರು,
ರೋಟರಿ ಕೊಡ್ಲಿಪೇಟೆ ಯ ನಿರ್ಗಮಿತ ಅದ್ಯಕ್ಷರಾದ ಪ್ರವಿಣ್ .ಹೆಚ್.ಜೆ ರವರು ಯಶಸ್ವಿಯಾಗಿ ಕಾರ್ಯನಿರ್ವಹಿಸಿದರಿಂದ ಜಿಲ್ಲಾ ಉಪ ಚೆಯರ್ ಮ‌್ಯಾನ್ ಆಗಿ ಸಭಾದಿಕಾರಿಯವರು ನೇಮಕ ಮಾಡಿದರು ,
ಮನುಕುಮಾರ್ ,ರಮೇಶ್ ,ಮೋಹನ್ ಕುಮಾರ್, ಸಿದ್ದೇಶ್ ರವರು ನೂತನ ಸದಸ್ಯರುಗಳಾಗಿ ಸೇರ್ಪಡೆಯಾದರು,
ಅಥಿತಿಗಳ ಹಾಗೂ ನೂತನ ಅದ್ಯಕ್ಷರ ಪರಿಚಯವನ್ನು
ಸುಬ್ರಹ್ಮಣ್ಯಾಚಾರ್ ,ಸಾಗರ್ ,ಸಂಜಯ್ ,ಭಾನುಪ್ರಕಾಶ್ ,
ಸಿದ್ದೇಶ್ ,ಮಾಡಿದರು,
ನೂತನ ಅದ್ಯಕ್ಷರಾದ ದಿವಾಕರ್ ರವರು ಮಾತನಾಡಿ ಎಲ್ಲಾ ಸದಸ್ಯರುಗಳ ಸಹಕಾರ ಕೋರಿ ಮುಂದಿನ ಕಾರ್ಯಯೋಜನೆಗಳ ಉಸ್ತುವಾರಿ ಗಳಾನ್ನಾಗಿ ಸದಸ್ಯರುಗಳನ್ನು ನೇಮಕ ಮಾಡಿ ಸಭೆಯಲ್ಲಿ ಘೊಷಿಸಿದರು.
ನೂತನ ಪ್ರಧಾನ ಕಾರ್ಯದರ್ಶಿ ಯಾಗಿ ಆದಿಕಾರ ಸ್ವಿಕರಿಸಿದ ಅಮ್ರತ್ ಕುಮಾರ್ ರವರು ವಂದನಾರ್ಪಣೆ ಮಾಡಿದರು,
ರೋಟರಿ ಹೇಮವಾತಿ ಕ್ಲಬ್ ನ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದರು,







No comments
Post a Comment