ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಮುಖ್ಯಮಂತ್ರಿಗಳ COVID - 19 ಪರಿಹಾರ ನಿಧಿಗೆ ಧನ ಸಹಾಯ

No comments
ಗೋಣಿಕೊಪ್ಪ (TIMES OF COORG):- ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಮುಖ್ಯಮಂತ್ರಿಗಳ COVUD - 19 ಪರಿಹಾರ ನಿಧಿಗೆ 25 ಲಕ್ಷ ರುಪಾಯಿಗಳ ಚೆಕ್ಕನ್ನು  ಶಾಸಕ ಕೆ ಜಿ ಬೋಪಯ್ಯ ಅವರ ಮೂಲಕ ಸರ್ಕಾರಕ್ಕೆ ನೀಡಲಾಯಿತು.

 ಆರ್. ಎಂ. ಸಿ ,ಅಧ್ಯಕ್ಷರಾದ ಸುಜಾ ಪೂಣಚ್ಚರವರು ವಿರಾಜಪೇಟೆ ಶಾಸಕರ ಕಚೇರಿಯಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆಜಿ ಬೋಪಯ್ಯ, ಹಾಗೂ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರ ಸಹಕಾರದೊಂದಿಗೆ  ಉಸ್ತುವಾರಿ ಸಚಿವರಾದ ವಿ.ಎ ಸೋಮಣ್ಣ ರವರಿಗೆ 25 ಲಕ್ಷ ರೂಪಾಯಿಗಳ ಚೆಕ್ಕನ್ನು ನೀಡಿದರು. 
ಈ ಸಂದರ್ಭ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯರುಗಳಾದ ಗುಮ್ಮಟೀರ ಕಿಲನ್ ಗಣಪತಿ, ವಿನು, ಕಟ್ಟೆರ ಈಶ್ವರ, ಬಿಜೆಪಿ ತಾಲೂಕು ಅಧ್ಯಕ್ಷ ನೇಲ್ಲಿರ ಚಲನ್, ಸೇರಿದಂತೆ ಹಲವರು ಹಾಜರಿದ್ದರು.

No comments

Post a Comment