*ಸರ್ವರ್ ಡೌನ್ ನಾಳೆ ಬನ್ನಿ!*

3 comments
ವರದಿ : ನಿಯಾಝ್ ಕೊಡಗು
ಕೊಡಗು :-ರಾಜ್ಯ ಸರ್ಕಾರ ಬಹಳಷ್ಟು ಜನೋಪಯೋಗಿ ಯೋಜನೆಗಳನ್ನು ಜಾರಿಗೊಳಿಸಿದೆ ಹಾಗೂ ಆ ಯೋಜನೆಗಳ ಫಲಾನುಭವಿಗಳಾಗಲು ಅರ್ಜಿ ಸಲ್ಲಿಸಲು ಆನ್ಲೈನ್ ಆಯ್ಕೆಯನ್ನು ನೀಡಲಾಗಿದೆ.ಆಧಾರ್ ಅಪ್ಟೇಟಿನಿಂದ ಹಿಡಿದು ರೇಷನ್ ಕಾರ್ಡ್ ಅಪ್ಟೇಟ್, ಗ್ರೃಹಲಕ್ಷ್ಮಿ, ಗ್ರೃಹಜ್ಯೋತಿ ಯೋಜನೆಗೆ, ಆಧಾರ್ ಗೆ ಫೋನ್ ನಂಬರ್ ಜೋಡಿಸೋದು, ಬ್ಯಾಂಕ್ ಅಕೌಂಟಿಗೆ ಆಧಾರ್ ಜೋಡಿಸೋದು ಇಂತಹ ಬಹಳಷ್ಟು ಸರ್ಕಾರದ ಕಾರ್ಯಕ್ರಮಗಳಿಗೆ ಎಲ್ಲವೂ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕಾಗುತ್ತದೆ, ಇಂತಹ ಸಂದರ್ಭದಲ್ಲಿ ಬಹಳಷ್ಟು ಬಾರಿ ಕೇಳುವ ಶಬ್ದ *ಸರ್ವರ್ ಡೌನ್* ಆಗಿದೆ ಮತ್ತೆ ಬನ್ನಿ ಅಥವಾ ನಾಳೆ ಬನ್ನಿ.ಹಾಗಾದರೆ ಆಗಾಗ ಡೌನ್ ಆಗುವ ಈ ಸರ್ವರ್ ಎಂದರೇನು?!, ಕೋಟ್ಯಾಂತರ ಜನ ಉಪಯೋಗಿಸುವ ಫೇಸ್ಬುಕ್, ವಾಟ್ಸಾಪ್, ಯೂಟ್ಯೂಬ್ ಇನ್ನಿತರ ಅಪ್ಲಿಕೇಶನ್ಗಳ ಸರ್ವರ್ ಏನಿಕ್ಕೆ ಡೌನ್ ಆಗೋದಿಲ್ಲ?!.ಸರ್ವರ್ ಎಂದರೆ ಒಂದು ಕಂಪ್ಯೂಟರ್ ಅಥವಾ ಸಾಫ್ಟ್‌ವೇರ್ ಸಿಸ್ಟಂ ಯಾವುದೇ ನೆಟ್ವರ್ಕ್ ಮೂಲಕ ಇತರ ಕಂಪ್ಯೂಟರ್‌ಗಳಿಗೆ ಸೇವೆಗಳನ್ನು ಒದಗಿಸುವ ಕ್ಯಾಪ್ಯಾಬಿಲಿಟಿ ಹೊಂದಿರುವುದು. ಇದು ಇತರ ಕಂಪ್ಯೂಟರ್‌ಗಳಿಂದ ಬರುವ ವಿನಂತಿಗಳಿಗೆ ಉತ್ತರಗಳನ್ನು ನೀಡುತ್ತದೆ, ಅಥವಾ ಅವರ ಕೋರಿಕೆಗಳ ಡೇಟಾ ಅಥವಾ ಕ್ರಿಯೆಗಳನ್ನು ಒದಗಿಸುತ್ತದೆ. ಇದು ನೆಟ್ವರ್ಕ್‌ನಲ್ಲಿ ನೆಲೆಸಿರುವ ಹೊರಗಿನ ಕಂಪ್ಯೂಟರ್‌ಗಳ ಅನೇಕ ಆವಶ್ಯಕ ಸರ್ವಿಸ್‌ಗಳನ್ನು ನೋಡಿಕೊಳ್ಳುವ ಕೇಂದ್ರ.ಸರ್ವರ್‌ಗಳು ವೈವಿಧ್ಯಮಯ ಉದ್ದೇಶಗಳಿಗೆ ಬಳಸಲಾಗುತ್ತದೆ, ಉದಾಹರಣೆಗೆ, ವೆಬ್‌ಸರ್ವರ್‌ಗಳು ವೆಬ್‌ಪೇಜ್‌ಗಳನ್ನು ಬ್ರೌಸ್ ಮಾಡುವ ವಿನಂತಿಗೆ ವೆಬ್‌ಕಂಪ್ಯೂಟರ್‌ಗಳಿಗೆ ವಿನಂತಿಯನ್ನು ಒದಗಿಸುತ್ತದೆ. ಡೇಟಾಬೇಸ್ ಸರ್ವರ್‌ಗಳು ಡೇಟಾವನ್ನು ಸಂಗ್ರಹಿಸುವ ಮತ್ತು ಅದನ್ನು ಮೇಲಿನ ಕೇಂದ್ರಗಳಿಗೆ ಹಂಚಿಕೊಡುವ ಗುಣಮಟ್ಟ ಸರ್ವರ್‌ಗಳಾಗಿರುತ್ತವೆ. ಉದಾಹರಣೆಗೆ, ವೆಬ್‌ಆಪ್‌ಲಿಕೇಶನ್‌ಗಳು ಬೇಕಾದಾಗ ಡೇಟಾಬೇಸ್ ಸರ್ವರ್‌ಗಳನ್ನು ಬಳಸಿ ಡೇಟಾವನ್ನು ಸಂಗ್ರಹಿಸುವುದರ ಮೂಲಕ ಸಾವಿರಾರು ಬಳಕೆದಾರರಿಗೆ ಸಮಾನ ಸೇವೆಯನ್ನು ಒದಗಿಸುತ್ತವೆ. ಸರ್ವರ್‌ಗಳ ಪ್ರದರ್ಶನಕ್ಕೆ ಸ್ವತಂತ್ರವಾಗಿ ನೀಡಿದ ಸೇವೆಗಳು ವೆಬ್‌ಹೋಸ್ಟಿಂಗ್‌, ಡೇಟಾಬೇಸ್ ಹಾಗೂ ಆಪ್‌ಸರ್ವರ್‌ಗಳು ಆಗಬಹುದು.ಈ ಸರ್ವರ್ ಸರಿಯಾಗಿ ಕಾರ್ಯನಿರ್ವಹಿಸಬೇಕೆಂದರೆ ಅದಕ್ಕೆ ತಕ್ಕುದಾದ ಹಾರ್ಡ್ವೇರ್ ಕಾನ್ಫೀಗರೇಷನ್ ಅವಶ್ಯಕತೆ ಇದೆ.ಉದಾಹರಣೆಗೆ ಸರ್ಕಾರದ ಅಧೀನದಲ್ಲಿರುವ ಬಹಳಷ್ಟು ಅಪ್ಲಿಕೇಶನ್ಗಳ ಹಾರ್ಡ್ವೇರ್ ಕಾನ್ಫೀಗರೇಷನ್ಗಳು ಒಂದು ಹತ್ತು ಸಾವಿರ ಯೂಸರ್ ಗಳು ಒಂದೇ ಸಮಯದಲ್ಲಿ ಉಪಯೋಗಿಸಬಹುದಂತಹ ಹಾರ್ಡ್ವೇರ್ ಅಳವಡಿಸಿಬರಹುದು.ಆದರೆ ಇವತ್ತಿನ ತಂತ್ರಜ್ಞಾನ ಯುಗದಲ್ಲಿ ಎಲ್ಲವೂ ಆನ್ಲೈನ್ ಮೂಲಕ ಮಾಡುವ ವ್ಯವಸ್ಥೆ ಬಂದಿರುವುದರಿಂದ ಸರ್ಕಾರ ಈ ಎಲ್ಲಾ ಸಿಸ್ಟಂಗಳ ಹಾರ್ಡ್ವೇರ್ಗಳನ್ನು ಅಪ್ರೇಡ್ ಮಾಡಬೇಕಾಗುತ್ತದೆ, ರಾಜ್ಯದಲ್ಲಿ ಸರ್ಕಾರಿ ಅಪ್ಲಿಕೇಶನ್ಗಳ ಯೂಸರ್ ಗಳು ಸಂಖ್ಯೆ ಸಾವಿರದಿಂದ ದಾಟಿ ಲಕ್ಷ ದಾಟಿ ಕೋಟಿ ಸಮೀಪ ಬಂದಿರಬಹುದು.ಸರ್ಕಾರ ಬಜೆಟ್ ನಲ್ಲಿ ಈ ಹಾರ್ಡ್ವೇರ್ ಅಪ್ಗ್ರೇಡ್ಗೆ ಬೇಕಾದ ಬಜೆಟ್ ಅನ್ನು ಮೀಸಲಿಡಬೇಕು, ಹಾಗೂ ಹೊರಗುತ್ತಿಗೆ ಕೊಡುವುದಾದರೆ ಗ್ರಾಹಕರಿಗೆ ಸರಿಯಾಗಿ ಸೇವೆ ನೀಡುವ ಕಂಪೆನಿಗಳಿಗೆ ನೀಡಬೇಕು.ಇಡೀ ವಿಶ್ವಕ್ಕೆ ಸಾಫ್ಟ್ವೇರ್ ರಫ್ತು ಮಾಡುವ ನಮ್ಮ ರಾಜ್ಯದಿಂದ ರಾಜ್ಯದ ಜನತೆ ಇನ್ನೂ ಉತ್ತಮ ಸೇವೆಯನ್ನು ನಿರೀಕ್ಷಿಸುತ್ತದೆ.ಲಕ್ಷಾಂತರ ಕೋಟಿ ರೂಪಾಯಿ ಬಜೆಟ್ನಲ್ಲಿ ಕಾಲಕಾಲಕ್ಕೆ ಟೆಕ್ನಾಲಜಿ ಅಪ್ಗ್ರೇಡ್ಗೆ ಒಂದು ಮೊತ್ತವನ್ನು ಮೀಸಲಿಡಬೇಕಾಗುತ್ತದೆ, ಇದರಿಂದ ಸರ್ಕಾರ ಹಾಗೂ ಜನರ ಮದ್ಯದ ಬಾಂಧವ್ಯ ಇನ್ನೂ ಉತ್ತಮವಾಗುತ್ತದೆ.ಅತೀ ಶೀಘ್ರದಲ್ಲಿ ಸರ್ವರ್ ಡೌನ್ ಮುಕ್ತ, ನಾಳೆ ಬನ್ನಿ ಮುಕ್ತ ರಾಜ್ಯವಾಗಲಿ.✍🏻 

3 comments