ಕೊಡಗು ಜಿಲ್ಲಾದ್ಯಾಂತ ಗ್ರಾಮ ಒನ್ : ಪ್ರಾಂಚೈಸಿಗಳಿಂದ ಅರ್ಜಿ ಆಹ್ವಾನ

No comments

ಮಡಿಕೇರಿ ಫೆ.08-ಗ್ರಾಮ ಒನ್ ಯೋಜನೆಯನ್ನು ಸರ್ಕಾರ ಈಗಾಗಲೇ ಲೋಕಾರ್ಪಣೆ ಮಾಡಿದೆ. ನಗರ ಪ್ರದೇಶಗಳಲ್ಲಿ ಜನರಿಗೆ ಸೇವೆ ನೀಡುತ್ತಿರುವ ಕರ್ನಾಟಕ ಒನ್, ಬೆಂಗಳೂರು ಒನ್ ಮಾದರಿಯಲ್ಲಿ ‘ಗ್ರಾಮ ಒನ್’ ಮೂಲಕ ಹಳ್ಳಿಗರಿಗೂ ಸೇವೆ ನೀಡಬೇಕೆಂಬ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. 

ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಸೇವಾಸಿಂಧು ಯೋಜನೆಯಡಿಯಲ್ಲಿ ಸುಮಾರು 750 ಕ್ಕೂ ಹೆಚ್ಚು ನಾಗರಿಕ ಸೇವೆ ಪಡೆಯಲು ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸ್ವೀಕರಿಸಲಾಗುತ್ತದೆ. ವಾರದ ಎಲ್ಲಾ ದಿನಗಳಲ್ಲಿ(ಮಂಗಳವಾರ ಹೊರತುಪಡಿಸಿ) ಬೆಳಗ್ಗೆ 8 ರಿಂದ ಸಂಜೆ 8 ಗಂಟೆಯವರೆಗೆ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. 

ಕೊಡಗು ಜಿಲ್ಲೆಯಲ್ಲಿ ಈಗಾಗಲೇ 68 ಗ್ರಾಮ ಪಂಚಾಯತ್‍ಗಳಲ್ಲಿ ‘ಗ್ರಾಮ ಒನ್’ ಯೋಜನೆಯನ್ನು ಯಶಸ್ವಿಯಾಗಿ ಪ್ರಾರಂಭಿಸಲಾಗಿದೆ. ಉಳಿದಂತೆ 36 ಗ್ರಾಮ ಪಂಚಾಯತ್‍ಗಳಲ್ಲಿ ಸಮಗ್ರ ನಾಗರಿಕ ಸೇವಾ ಕೇಂದ್ರ ಗ್ರಾಮ ಒನ್ ಆರಂಭಿಸಲು ಆಸಕ್ತ ಪ್ರಾಂಚೈಸಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 

ಮಡಿಕೇರಿ ತಾಲ್ಲೂಕಿನ ಮಡಿಕೇರಿ ಹೋಬಳಿಯ ಹೊಸ್ಕೇರಿ, ನಾಪೋಕ್ಲು ಹೋಬಳಿಯ ಎಮ್ಮೆಮಾಡು, ಭಾಗಮಂಡಲ  ಹೋಬಳಿಯ ಕರಿಕೆ, ಸಂಪಾಜೆ ಹೋಬಳಿಯ ಪೆರಾಜೆ. 

ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಹೋಬಳಿಯ ಶಾಂತಳ್ಳಿ, ಬೆಟ್ಟದಳ್ಳಿ, ತೋಳೂರು ಶೆಟ್ಟಳ್ಳಿ, ಸೋಮವಾರಪೇಟೆ ಹೋಬಳಿಯ ಗಣಗೂರು, ನೇರುಗಳಲೆ, ಮಾದಾಪುರ, ಚೌಡ್ಲು, ಶನಿವಾರಸಂತೆಯ ನಿಡ್ತ, 

ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಹೋಬಳಿಯ ಗರ್ವಾಲೆ, ಕಂಬಿಬಾಣೆ, ಕೆದಕಲ್, ಹರದೂರು, ನಾಕೂರು ಶಿರಂಗಾಲ, 7ನೇ ಹೊಸಕೋಟೆ, ಕುಶಾಲನಗರ ಹೋಬಳಿಯ ಗುಡ್ಡೆಹೊಸೂರು, ವಾಲ್ನೂರು ತ್ಯಾಗತ್ತೂರು.

ವಿರಾಜಪೇಟೆ ತಾಲ್ಲೂಕಿನ ವಿರಾಜಪೇಟೆ ಹೋಬಳಿಯ ಕದನೂರು, ಕೆದಮುಳ್ಳೂರು, ಅಮ್ಮತ್ತಿ ಹೋಬಳಿಯ ಹೊಸೂರು, ಅಮ್ಮತ್ತಿ, ಮಾಲ್ದಾರೆ, ಬಿಳುಗುಂದ.

ಪೊನ್ನಂಪೇಟೆ ತಾಲ್ಲೂಕಿನ ಪೊನ್ನಂಪೇಟೆ ಹೋಬಳಿಯ ಹಾತೂರು, ಬಿ.ಶೆಟ್ಟಿಗೇರಿ, ಕಿರಗಂದೂರು, ಮಾಯಾಮುಡಿ, ಬಾಳೆಲೆ ಹೋಬಳಿಯ ನಿಟ್ಟೂರು, ಪೊನ್ನಪ್ಪಸಂತೆ, ಹುದಿಕೇರಿಯ ಬಲ್ಯಮಂಡೂರು, ಬಿರುನಾಣಿ, ಶ್ರೀಮಂಗಲ ಹೋಬಳಿಯ  ಕೆ.ಬಾಡಗ ಮತ್ತು ನಾಲ್ಕೇರಿ. 

ಆಸಕ್ತ ಪ್ರಾಂಚೈಸೀಸ್‍ಗಳು https://www.karnatakaone.gov.in/.../GramOneFranchiseeTerms ಈ ಲಿಂಕ್‍ನ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಪ್ರಾಜೆಕ್ಟ್ ಮ್ಯಾನೇಜರ್, ಜಿಲ್ಲಾಧಿಕಾರಿ ಕಚೇರಿ, ಮೊ.ಸಂ. 8861682120 ಇವರಿಂದ ಪಡೆಯಬಹುದಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರು ತಿಳಿಸಿದ್ದಾರೆ.

No comments

Post a Comment