ಎನ್.ಸಿ.ಹೆಚ್.ಆರ್.ಓ ರಾಜ್ಯ ಸಮಿತಿ ಕೋಶಾಧಿಕಾರಿಯಾಗಿ ಟಿ.ಹೆಚ್ ಅಬೂಬಕ್ಕರ್ ಆಯ್ಕೆ
ಮಡಿಕೇರಿ: ಮಾನವ ಹಕ್ಕು ಸಂಘಟನೆಯಾದ ನ್ಯಾಶನಲ್ ಕೊನ್ಫೆಡೆರೇಷನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ (ಎನ್.ಸಿ ಹೆಚ್.ಆರ್.ಓ) ಕರ್ನಾಟಕ ರಾಜ್ಯ ಘಟಕದ ನೂತನ ರಾಜ್ಯ ಸಮಿತಿಯ ವಾರ್ಷಿಕ ಚುನಾವಣೆಯು ಇತ್ತೀಚೆಗೆ ಬೆಂಗಳೂರಿನ ಇಂಡಿಯನ್ ಸೋಶಿಯಲ್ ಇನ್ಸ್ಟಿಟ್ಯೂಟ್ ನಲ್ಲಿ ನಡೆಯಿತು.ಹೈಕೋರ್ಟಿನ ಹಿರಿಯ ವಕೀಲ ಎಸ್ ಬಾಲನ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಮಂಗಳೂರಿನ ವಕೀಲ ಮಹಮ್ಮದ್ ಕಕ್ಕಿಂಜೆ, ಪ್ರಧಾನ ಕಾರ್ಯದರ್ಶಿಯಾಗಿ ಮಂಗಳೂರಿನ ವಕೀಲ ಒಮರ್ ಫಾರೂಕ್, ಕಾರ್ಯದರ್ಶಿಯಾಗಿ ಬೆಂಗಳೂರಿನ ಜಿ. ಗಣೇಶ್, ಕೋಶಾಧಿಕಾರಿಯಾಗಿ ಮಡಿಕೇರಿಯ ವಕೀಲ ಟಿ.ಹೆಚ್ ಅಬೂಬಕ್ಕರ್ ಆಯ್ಕೆಯಾಗಿದ್ದಾರೆ.ರಾಜ್ಯ ಸಮಿತಿ ಸದಸ್ಯರಾಗಿ ಮೈಸೂರಿನ ಡಾ. ಪದ್ಮಶ್ರೀ, ರಂಗಸ್ವಾಮಿ, ರಾಯಚೂರಿನ ಮಲ್ಲೇಶ್, ಬೆಂಗಳೂರಿನ ಜ್ಞಾನ ಮೂರ್ತಿ, ಶುಹೈಬ್, ಸಾಜಿದ, ಅಬ್ದುಲ್ ರಹೀಮ್, ಮುಝಫ್ಫರ್, ಗೌತಮ್, ರಾಮನಗರದ ಚಾಂದ್ ಪಾಷ, ದಾವಣಗೆರೆಯ ಅನೀಸ್, ಮಂಗಳೂರಿನ ಶರೀಫ್ ಕೊಡಾಜೆ, ಚಿಕ್ಕಮಗಳೂರಿನ ಸೀಮಾ, ಬೀದರಿನ ಬಸವ ಪ್ರಸಾದ್, ಚನ್ನರಾಯಪಟ್ಟಣದ ಉಮ್ಮರ್ ಫಾರೂಕ್ ಹಾಗೂ ಮಂಗಳೂರು ರಿಯಾಝ್ ಆಯ್ಕೆಯಾಗಿದ್ದಾರೆ. ಈ ಸಂದರ್ಭಸಂಘಟನೆಯ ರಾಷ್ಟ್ರೀಯ ಸಮಿತಿ ಸದಸ್ಯರಾದ ಅನ್ಸರ್ ಇಂದೋರಿ ಉಪಸ್ಥಿತರಿದ್ದರು.
No comments
Post a Comment