ಹದೆಗೆಟ್ಟ ಅರೆಕಾಡು ರಸ್ತೆ : ಜಿಲ್ಲಾಧಿಕಾರಿಗಳಿಗೆ ಮನವಿ
ಸಿದ್ದಾಪುರ, ಜ.24: ಮಡಿಕೇರಿ ತಾಲೂಕಿನ ಹೊಸ್ಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರೆಕಾಡು ಗ್ರಾಮದಿಂದ ನೇತಾಜಿ ನಗರಕ್ಕೆ ಸಂಪರ್ಕ ಕಲ್ಪಿಸುವ ಸಾರ್ವಜನಿಕ ರಸ್ತೆ ಹದಗೆಟ್ಟಿದ್ದು, ರಸ್ತೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಕೊಡವ ವೆಲ್ಫೇರ್ ಅಸೋಸಿಯೇಷನ್ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಜಿಲ್ಲಾಧಿಕಾರಿ ಸೇರಿದಂತೆ ಸಿಇಒ ಹಾಗೂ ಹೊಸ್ಕೇರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭ ಅನ್ನಾರ್ ಕಂಡ ಸೋಮಯ್ಯ, ತೊಂಡಿಯಂಡ ನಾಣಯ್ಯ, ತೊಂಡಿಯಂಡ ರಂಜಿ ತಮ್ಮಯ್ಯ, ನೆಲ್ಲಮಕ್ಕಡ ಪ್ರಕಾಶ್, ರವಿ, ಬೊಳಿಯಾಡಿರ ಅರುಣ, ಎಂ.ಎ ಇಬ್ರಾಹಿಂ, ಎಂ.ಕೆ ಸಲೀಂ ಮತ್ತು ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಪಿ.ಕೆ ಯೂಸುಫ್ ಅಲಿ ಇದ್ದರು.
No comments
Post a Comment