ಸಿದ್ದಾಪುರ : ನೆಲ್ಯಹುದಿಕೇರಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ನೂತನ ಕ್ಯಾಲೆಂಡರ್ ನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಬಿಡುಗಡೆಗೊಳಿಸಿದರು.
ಶಾಸಕರ ಸೋಮವಾರಪೇಟೆ ಕಛೇರಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮರ್ ರೈ ಸಮ್ಮುಖದಲ್ಲಿ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಶಾಸಕರು ಪಕ್ಷ ಸಂಘಟನೆ ಉದ್ದೇಶ ಹಾಗೂ ಕೇಂದ್ರದ ಯೋಜನೆಗಳು ಕ್ಯಾಲೆಂಡರ್ ಮೂಲಕ ಮನೆ ಮನೆ ತಲುಪುವಂತೆ ಮಾಡುತ್ತಿರುವ ನೆಲ್ಯಹುದಿಕೇರಿ ಶಕ್ತಿ ಕೇಂದ್ರದ ವಿನೂತನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಸಮಿತಿ ಸದಸ್ಯ ಶರಣ್,ನೆಲ್ಯಹುದಿಕೇರಿ ಶಕ್ತಿ ಕೇಂದ್ರ ಪ್ರಮುಖ್ ಕಡೀರ ಬೆಳ್ಳಿಯಪ್ಪ, ಸಹ ಪ್ರಮುಖ್ ಪ್ರಮೋದ್, ಕೃಷಿ ಮೋರ್ಚಾ ಅಧ್ಯಕ್ಷ ಚಂದ್ರಶೇಖರ್,ನೆಲ್ಯಹುದಿಕೇರಿ ಯುವ ಮೋರ್ಚಾ ಅಧ್ಯಕ್ಷ ಸಚಿನ್, ಪಕ್ಷದ ಪ್ರಮುಖರಾದ ಪದ್ಮನಾಭ ಹಾಜರಿದ್ದರು.
No comments
Post a Comment