ಏಪ್ರಿಲ್ 15ರ ನಂತರ ಅಮ್ಮತ್ತಿಯಲ್ಲಿ ಕೊಡಗು ಜಿಲ್ಲಾ ಮಟ್ಟದ ಲೀಗ್ ಕಾಲ್ಚೆಂಡು ಪಂದ್ಯಾಟ:

No comments
        TOC ಮಡಿಕೇರಿ:  ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ,ಹಾಗೂ ಅಮ್ಮತ್ತಿಯ ಮಿಲನ್ಸ್ ಫುಟ್ಬಾಲ್ ಕ್ಲಬ್ ಇವರ ಸಹಯೋಗದಲ್ಲಿ ಅಮ್ಮತ್ತಿಯ ಪ್ರೌಢ ಶಾಲಾ ಮೈದಾನದಲ್ಲಿ ಜಿಲ್ಲಾ ಮಟ್ಟದ ಲೀಗ್ ಪಂದ್ಯಾಟವನ್ನು ಏಪ್ರಿಲ್ ೧೫ರ ನಂತರ ವಾರಾಂತ್ಯಗಳಲ್ಲಿ , ಪೂರ್ತಿ ದಿನ ಪಂದ್ಯಾಟವನ್ನು ನಡೆಸಲು  ಅಮ್ಮತ್ತಿಯ ಪ್ರೌಢ ಶಾಲೆಯ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಕಛೇರಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
   ಪಂದ್ಯಾಟವು ೪೫+೪೫ ನಿಮಿಷಗಳ ನಡೆಯಲಿದ್ದು, ಲೀಗ್ ನಲ್ಲಿ ಭಾಗವಹಿಸಿ ಅಂತಿಮ ಹಂತಕ್ಕೆ ತಲುಪಿದ ತಂಡಗಳ ನಡುವೆ ಸೂಪರ್ ೦೮ , ನಾಕೌಟ್ ಮಾದರಿಯ ಪಂದ್ಯಾಟಗಳು ನಡೆಯಲಿದೆ ಎಂದು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷರಾದ ಮೋಹನ್ ಅಯ್ಯಪ್ಪ ಸಭೆಯಲ್ಲಿ ತಿಳಿಸಿದರು.
     ಮುಂದೆ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅನುಮತಿ ಇಲ್ಲದೆ ಕೊಡಗಿನಲ್ಲಿ ಯಾವುದಾದರೂ ಪಂದ್ಯಾಟ ನಡೆಯುವುದು ಕಂಡುಬಂದಲ್ಲಿ ,ಅಂತಹ ಕ್ರೀಡಾಕೂಟವನ್ನು ತಡೆಹಿಡಿಯಲಾಗುವುದೆಂದು ಮೋಹನ್ ಅಯ್ಯಪ್ಪ ಹೇಳಿದರು.
       ಲೀಗ್ ಪಂದ್ಯಾಟದಲ್ಲಿ ಭಾಗವಹಿಸಿದ ಆಟಗಾರರನ್ನು ಆಯ್ಕೆ ಮಾಡಿ ಜಿಲ್ಲಾ ತಂಡವನ್ನು ಸ್ಥಾಪಿಸಲಾಗುವೆಂದು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರರ ಅಧ್ಯಕ್ಷರಾದ ಪಿ.ಎ ನಾಗೇಶ್(ಈಶ್ವರ್) ತಿಳಿಸಿದರು‌.
ಅಲ್ಲದೇ ಲೀಗ್ ಪಂದ್ಯಾಟದ ಸಮಾರೋಪ ಸಮಾರಂಭಕ್ಕೆ ರಾಜ್ಯ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷರನ್ನು ಕರೆತರುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
       ಈ ಸಂದರ್ಭ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಉಪಾಧ್ಯಕ್ಷರಾದ ದೇಚಮ್ಮ, ಖಜಾಂಜಿ ದೀಪು ಮಾಚಯ್ಯ, ಲಿಜೇಸ್ ಅಮ್ಮತ್ತಿ, ಜಗದೀಶ್, ಹಾಗೂ ರಕ್ಷಿತ್ ಇದ್ದರು.

No comments

Post a Comment