ನಾಪೋಕ್ಲು: ಸವಾಲಾದ ಗುಂಡಿ ಬಿದ್ದ ರಸ್ತೆಗಳು :ದುರಸ್ತಿಗೆ ಒತ್ತಾಯ

No comments
*ವರದಿ :ಝಕರಿಯ ನಾಪೋಕ್ಲು*

 ನಾಪೋಕ್ಲು : ನಾಪೋಕ್ಲು ವಿಭಾಗದ ಪ್ರಮುಖ ರಸ್ತೆಗಳು ಗುಂಡಿಗಳಿಂದ ಕೂಡಿದ್ದು ವಾಹನ ಸವಾರರು ಸಂಚರಿಸಲು ನರಕ ಯಾತನೆ
ಅನುಭವಿಸುವಂತ್ತಾಗಿದೆ.ಕಿತ್ತು ಹೋದ ಡಾಂಬರು, ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಇದರ ಸುತ್ತಲೂ ಹರಡಿದ  ಜೆಲ್ಲಿ ಕಲ್ಲುಗಳು  ಗೋಚರಿಸಿದೆ. ಇವುಗಳ ನಡುವೆ ಪ್ರಾಣವನ್ನು ಒತ್ತೆಯಿಟ್ಟು ವಾಹನ ಚಾಲನೆ ಮಾಡುವ ದುಸ್ಥಿತಿ ಚಾಲಕರದ್ದಾದರೆ, ಪಾದಾಚಾರಿಗಳು, ಶಾಲಾ ಮಕ್ಕಳು ಕೂಡ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಇದು ನಾಪೋಕ್ಲು ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಗೆ ಸೇರುವ ಕೋಟೇರಿ, ಹಳೇ ತಾಲ್ಲೂಕು, ಚೋನಾಕೆರೆ, ನೆಲಜಿ ಮಾರ್ಗವಾಗಿ ಪುಣ್ಯಕ್ಷೇತ್ರ ಭಾಗಮಂಡಲಕ್ಕೆ ತೆರಳುವ ರಸ್ತೆಯ ಪಾಡಾಗಿದೆ.ಪ್ರತಿವರ್ಷ ಕಾವೇರಿ ಸಂಕ್ರಮಣದ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ರಸ್ತೆಗಳನ್ನು ದುರಸ್ತಿಪಡಿಸುತ್ತಿದ್ದ ಜಿಲ್ಲೆಯ ಲೋಕೋಪಯೋಗಿ ಇಲಾಖೆಯವರು ಈ ವರ್ಷ ರಸ್ತೆಯಲ್ಲಿರುವ ಗುಂಡಿಗಳಿಗೆ ಜಲ್ಲಿಕಲ್ಲುಗಳನ್ನು ಹಾಕಿ ಜನರ ಕಣ್ಣೊರೆಸುವ ತಂತ್ರ ಮಾಡಿದ್ದಾರೆ.ಇದರಿಂದ  ಜೆಲ್ಲಿಕಲ್ಲುಗಳು ರಸ್ತೆ ತುಂಬಾ ಹರಡಿ ದ್ವಿಚಕ್ರವಾಹನ ಸವರಾರು ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರುವಂತೆ  ಮಾಡಿದ್ದಾರೆ ಎಂದು ನಾಗರಿಕರು ಇಲಾಖೆಯ ನಿರ್ಲಕ್ಷ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.                        ನಾಪೋಕ್ಲು ಪಟ್ಟಣದಿಂದ ಕೈಕಾಡು,ಮಾರ್ಗವಾಗಿ ವಿರಾಜಪೇಟೆ ತೆರಳುವ ಹಾಗೂ ಕೊಟ್ಟಮುಡಿ ಮಾರ್ಗವಾಗಿ ಮಡಿಕೇರಿ ತೆರಳುವ ರಸ್ತೆಯ ಹಣೆಬರಹ ಕೂಡ ಇದೇ ರೀತಿ ಇದೆ. ಬೇತು ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಮಾರ್ಗದಲ್ಲಿ ಒಂದೆಡೆ ರಸ್ತೆ ಹದಗೆಟ್ಟರೆ ಇನ್ನೊಂದೆಡೆ ರಸ್ತೆ ಇಕ್ಕಟ್ಟಿನಿಂದ ಕೂಡಿದ್ದು ಎರಡುವಾಹನಗಳು ಬಂದರೆ ಕ್ರಮಸಲು ಅಸಾಧ್ಯ ವಾಗಿ ಅಪಘಾತಗಳು ಸಂಭವಿಸುತ್ತಿದೆ.ಮುಖ್ಯರಸ್ತೆಗಳ ಪಾಡು ಒಂದೆಡೆಯಾದರೆ ಸ್ಥಳೀಯ ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಕ್ಕೆ ತೆರಳುವ ರಸ್ತೆಗಳ ಗೋಳಂತು  ಹೇಳತೀರದು.ಇಂದಿರಾ ನಗರ, ಚೆರಿಯಪರಂಬು, ಅಜ್ಜಿಮುಟ್ಟ, ಕೊಳಕೇರಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಇದೇ ರೀತಿ ಹದಗೆಟ್ಟು ಗುಂಡಿಮಯವಾಗಿದ್ದು ಗ್ರಾಮಸ್ಥರು ತಾಲ್ಲೂಕು ಆಡಳಿತ, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಶೀಘ್ರದಲ್ಲಿ ಹದಗೆಟ್ಟಿರುವ ರಸ್ತೆ ದುರಸ್ತಿಗೆ ಕ್ರಮವಹಿಸುವಂತೆಆಗ್ರಹಿಸಿದ್ದಾರೆ.
ಹೇಳಿಕೆ : "ರಾಜ್ಯ ಹೆದ್ದಾರಿಗೆ ಒಳಪಡುವ ನಾಪೋಕ್ಲು, ನೆಲಜಿ ಮಾರ್ಗವಾಗಿ ಭಾಗಮಂಡಲ ತೆರಳುವ ಮುಖ್ಯ ರಸ್ತೆಯೇ ಹದಗೆಟ್ಟಿದ್ದು, ಸವಾರರು ಸಂಚರಿಸಲು ಬವಣೆ ಪಡುವಂತ್ತಾಗಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿದ್ದರೂ ದುರಸ್ತಿ ಪಡಿಸದೆ ಇರುವುದು ವಿಪರ್ಯಾಸ. ಸಂಬಂಧಪಟ್ಟ ಇಲಾಖೆ ಇನ್ನಾದರೂ ಎಚ್ಚೆತ್ತು ದುರಸ್ತಿಪಡಿಸಬೇಕಿದೆ. ಮಣವಟ್ಟೀರ ಪೊನ್ನು ಪೊನ್ನಣ್ಣ.ನೆಲಜಿ.

 "ನಾಪೋಕ್ಲು ವ್ಯಾಪ್ತಿಯ ಎಲ್ಲಾ ರಸ್ತೆಗಳು ಹದಗೆಟ್ಟು ವಾಹನ ಚಾಲಕರಿಗೆ ಸವಾಲಾಗಿ ಪರಿಣಮಿಸಿದೆ. ದ್ವಿಚಕ್ರ ಸವಾರರು ಜೀವ ಪಣಕ್ಕಿಟ್ಟು ಸಂಚರಿಸಬೇಕಾಗಿದೆ. ಹಲವರು ಬಿದ್ದು ಆಸ್ಪತ್ರೆ ಸೇರಿರುವ ಘಟನೆ ಕೂಡ ನಡೆದಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಶೀಘ್ರ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು."ಎಂ. ಎ. ಮನ್ಸೂರ್ ಆಲಿಜೆಡಿಎಸ್ ಮುಖಂಡರು ನಾಪೋಕ್ಲು.

"ಪಟ್ಟಣದ ಸುತ್ತಮುತ್ತಲಿನ ರಸ್ತೆಗಳು ತೀರಾ ಹದಗೆಟ್ಟಿದ್ದು ಆಟೋರಿಕ್ಷಾ ಚಾಲಕಲಾಗಿರುವ ನಾವು ನರಕಾಯಾತನೆ ಅನುಭವಿಸುವಂತಾಗಿದೆ. ಆಟೋ ರಿಪೇರಿಯಾಗಿ ದಿನದಲ್ಲಿ ದುಡಿದ ಹಣವನ್ನು ಗ್ಯಾರೇಜಿಗೆ ಕೊಡಬೇಕಾದ ಪರಿಸ್ಥಿತಿ ಇದೆ. ಇದರಿಂದ ವರಮಾನ ಕಡಿಮೆಯಾಗಿ ಜೀವನ  ಕಷ್ಟಕರವಾಗಿದೆ. ಆದ್ದರಿಂದ ಶೀಘ್ರದಲ್ಲಿ ರಸ್ತೆಯ ದುರಸ್ತಿಗೆ ಕ್ರಮ ಕೈಗೊಳ್ಳಬೇಕು
."ಎಂ.ಇ. ಅಬ್ದುಲ್ ರಜಾಕ್ ಅಧ್ಯಕ್ಷರು ವಾಹನ ಚಾಲಕರ ಸಂಘ ನಾಪೋಕ್ಲು.

No comments

Post a Comment