ಪಾಲಿಬೆಟ್ಟದಲ್ಲಿ ಉಚಿತ ನೇತ್ರ ತಪಾಸಣೆ, ಚಿಕಿತ್ಸೆ ಶಿಬಿರ.

No comments
 NEWLINE MEDIA
ಸಿದ್ದಾಪುರ:-ಲಯನ್ಸ್ ಕ್ಲಬ್ ಪಾಲಿಬೆಟ್ಟ,ಚೆಶೈರ್ ಹೋಮ್ಸ್ ಇಂಡಿಯಾ ಕೂರ್ಗ್ ಹಾಗೂ "ಇಕ್ಷಾ" ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಪಾಲಿಬೆಟ್ಟದ ಚೆಶೈರ್ ಹೋಮ್ಸ್ ಇಂಡಿಯಾ ಕೂರ್ಗ್ ವಿಶೇಷ ಶಾಲೆಯಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸ ಶಿಬಿರ ಅಯೋಜಿಸಲಾಗಿತ್ತು.ನೇತ್ರ ತಜ್ಞರಾದ ಡಾ/ ಎ.ಜಿ.ಚಿಣ್ಣಪ್ಪ ಶಿಬಿರ ಉದ್ಘಾಟಿಸಿ ಮಾತನಾಡಿ ಕಣ್ಣುಗಳ ಆರೈಕೆಯೊಂದಿಗೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕೆಂದು ಹೇಳಿದ ಅವರು ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಇಕ್ಷಾ ಆಸ್ಪತ್ರೆಯಲ್ಲಿ ಕಂಪ್ಯೂಟರ್ ಲೇಸರ್ ಚಿಕಿತ್ಸೆ ವ್ಯವಸ್ಥೆಯಿದ್ದು ಕಣ್ಣುಗಳಲ್ಲಿ ಯಾವುದೇ ಸಮಸ್ಯೆಗಳು ಕಂಡು ಬಂದಲ್ಲಿ ಪರೀಕ್ಷಿಸಿಕೊಳ್ಳುವಂತೆ ಸಲಹೆ ನೀಡಿದ ಅವರು ಶಿಬಿರಾರ್ಥಿಗಳಿಗೆ  ರಿಯಾಯಿತಿ ಹಲವು ಸೌಲಭ್ಯಗಳು ಸಿಗಲಿದೆ ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು. ಪಾಲಿಬೆಟ್ಟ  ಲಯನ್ಸ್  ಕ್ಲಬ್ ಅಧ್ಯಕ್ಷ ಡೋಮಿ ರೊಜೇರಿಯೋ ಮಾತನಾಡಿ ಲಯನ್ಸ್ ಕ್ಲಬ್ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು ಕಣ್ಣಿನ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಪ್ರಯೋಜನಕಾರಿಯಾಗುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ  ಕಣ್ಣು ತಪಾಸಣೆ ಶಿಬಿರ ಅಯೋಜಿಸಲಾಗಿದ್ದು 200ಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಉಚಿತ ಔಷಧಿಗಳೊಂದಿಗೆ ಪ್ರಯೋಜನ ಪಡೆದುಕೊಂಡಿದ್ದಾರೆ30 ಕ್ಕೆ ಹೆಚ್ಚು ಮಂದಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಲಯನ್ಸ್  ಕ್ಲಬ್ ಮೂಲಕ ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.ಚೆಶೈರ್ ಹೋಮ್ಸ್ ಇಂಡಿಯಾ ಕೂರ್ಗ್ ವಿಶೇಷ ಶಾಲೆಯ ಅಧ್ಯಕ್ಷೆ  ಗೀತಾ ಚಂಗಪ್ಪ ಮಾತನಾಡಿ  ಪಾಲಿಬೆಟ್ಟ, ಸಿದ್ದಾಪುರ, ಮಾಲ್ದಾರೆ, ಅಮ್ಮತ್ತಿ ಸೇರಿದಂತೆ ಹಲವು ಗ್ರಾಮಗಳಿಂದ  ನೂರಾರು ಮಂದಿ ಕಣ್ಣು ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಂಡಿದ್ದಾರೆ.ಸಮಾಜ ಸೇವೆಯೊಂದಿಗೆ ಶಿಬಿರ ಕಾರ್ಯಕ್ರಮಗಳನ್ನ ಆಯೋಜಿಸಿ ಸಂಕಷ್ಟದಲ್ಲಿರುವವರಿಗೆ ನೆರವಾದ ಲಯನ್ಸ್ ಕ್ಲಬ್ ಸೇವಾ ಕಾರ್ಯವನ್ನು ಸ್ಲಾಗಿಸಿದರು. ಈ ಸಂದರ್ಭ ಲಯನ್ಸ್  ಕ್ಲಬ್ ಕಾರ್ಯದರ್ಶಿ ಡಾ. ಜಿ.ಎಂ. ದೇವಗಿರಿ, ಖಜಾಂಜಿ  ರಾಣಾ ಮುತ್ತಪ್ಪ, ಪ್ರಮುಖರಾದ ಡಾ. ಎ.ಸಿ ಗಣಪತಿ, ಅನಂತ್ ರಾಮ್,ಸ್ವರೂಪ ಅಯ್ಯಪ್ಪ, ಬಾಬು ರಾಘವನ್, ಕನ್ನಿಕಾ ಅಯ್ಯಪ್ಪ, ಶಾರದಾ ಪೊನ್ನಪ್ಪ, ಇಂದಿರಾ ಗಣಪತಿ,ಕವಿತಾ, ವಿಶೇಷ ಶಾಲೆ ಮುಖ್ಯ ಶಿಕ್ಷಕ ಶಿವರಾಜು ಸೇರಿದಂತೆ ಶಾಲಾ ಶಿಕ್ಷಕರಗಳು, ಆಸ್ಪತ್ರೆಯ ಸಿಬ್ಬಂದಿಗಳು ಸೇರಿದಂತೆ ಮತ್ತು ಇತರರು ಪಾಲ್ಗೊಂಡಿದ್ದರು.

No comments

Post a Comment