ನಿಮ್ಮ ಮತಗಳನ್ನು ನೀವೇ ಸಂಪಾದಿಸಿಕೊಳ್ಳಿ’ : ಕೊಡಗು ಯೂತ್ ಕಮಿಟಿ ಒತ್ತಾಯ

No comments
 newsline media
ಮಡಿಕೇರಿ ಡಿ.10 : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ‘ಸ್ವಾಭಿಮಾನ’ ವನ್ನು ಆಧರಿಸಿ ಮುನ್ನಡೆಯಲಿದೆ. ನಮ್ಮ ಸಂಕಷ್ಟಗಳಿಗೆ ಸ್ಪಂದಿಸಿ ಗೌರವಿಸುವ ಮೂಲಕ ರಾಜಕೀಯ ಪಕ್ಷಗಳು ‘ನಿಮ್ಮ ಮತಗಳನ್ನು ನೀವು ಸಂಪಾದಿಸಿಕೊಳ್ಳಿ’ ಎನ್ನುವ ಸಂದೇಶವನ್ನು ಕೊಡಗು ಯೂತ್ ಕಮಿಟಿ ಸಂದೇಶವನ್ನು ರವಾನಿಸುತ್ತಿದೆ ಎಂದು ಸಮಿತಿಯ ಅಧ್ಯಕ್ಷ ನಿಯಾಜ್ ತಿಳಿಸಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಸ್ಲಿಂ ಸಮುದಾಯ ಯಾರಿಗೂ ನೋವನ್ನುಂಟುಮಾಡುವ ಅಥವಾ ರಾಜಕೀಯ ನಿಂದನೆ ಮಾಡುವ ಕಾರ್ಯದಲ್ಲಿ ತೊಡಗಿಲ್ಲ. ಆದರೂ ಮುಸ್ಲಿಂ ಸಮುದಾಯ ಕಡೆಗಣಿಸಲ್ಪಡುತ್ತಿದೆ ಎಂದು ಟೀಕಿಸಿದ್ದಾರೆ.ಇತರ ಸಮುದಾಯಗಳಲ್ಲಿ ಇರುವಂತೆ ನಮ್ಮ ಸಮುದಾಯದ ವಾಟ್ಸ್ ಅಪ್ ಗ್ರೂಪ್‍ಗಳಿದ್ದು, ಅದರಲ್ಲಿ ಹಿಂದಿನ ಚುನಾವಣಾ ಫಲಿತಾಂಶ ಮತ್ತು ಪ್ರಸ್ತುತ ಚುನಾವಣೆಯ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳ ಬಗ್ಗೆ ಚರ್ಚೆಗಳು ನಡೆದಿದೆ. ಅದರಲ್ಲಿ ಚುನಾವಣಾ ಸ್ಪರ್ಧಾಕಾಂಕ್ಷಿಯನ್ನು ನಿಂದಿಸಿಲ್ಲ ಮತ್ತು ಅಗೌರವಯುತವಾಗಿ ಮಾತನಾಡಿಲ್ಲ. ಹೀಗಿದ್ದೂ ಕಾಂಗ್ರೆಸ್ ಪಕ್ಷದ ಮಡಿಕೇರಿ ಕ್ಷೇತ್ರದ ಸ್ಪರ್ಧಾ ಆಕಾಂಕ್ಷಿಯೊಬ್ಬರು ನನ್ನನ್ನು ಸಂಪರ್ಕಿಸಿ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದರು.ಮುಸಲ್ಮಾನ ಸಮುದಾಯವನ್ನು ಅವ್ಯಾಚ ಶಬ್ದಗಳಲ್ಲಿನಿಂದನೆ ಮಾಡಿದ ಈ ಬಾರಿ ವಿಧಾನಸಭೆ ಚುನಾವಣೆಯ ಮಡಿಕೇರಿ ಕಾಂಗ್ರೆಸ್ ಕ್ಷೇತ್ರದ ಆಕಾಂಕ್ಷಿ  ರವರು ಕ್ಷಮೆ ಕೇಳಬೇಕು ಹಾಗೂ ಅವರು ಹೇಳಿಲ್ಲ ಎಂದಾದರೆ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಬಂದು ಆಣೆ‌ ಮಾಡಲಿ ಎಂದು ಬಹಿರಂಗವಾಗಿ ಸವಾಲು ಹಾಕಿದರು  ಕ್ಷಮೆ ಕೇಳಲಿಲ್ಲವೆಂದರೆ ಹಾಗೂ ವ್ಯಕ್ತಿಯ ಐಡೆಂಟಿಟಿ ಹೇಳಿಲ್ಲವೆಂದರೆ ಸೂಕ್ತ ದಾಖಲೆ ಬಿಡುಗಡೆಗೊಳಿಸಿ ಕೊಡಗು ಡಿಸಿಸಿ ಕಛೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಇರುವವರಿಗೆ ತಮ್ಮ ವಿರುದ್ಧವಾದ ಟೀಕೆಗಳನ್ನು ಧನಾತ್ಮಕವಾಗಿ ತೆಗೆದುಕೊಳ್ಳುವ ಮನೋಸ್ಥಿತಿ ಇರಬೇಕು. ನಾಯಕರೆನಿಸಿಕೊಂಡವರೆಲ್ಲ ಮುಸ್ಲಿಂ ಸಮುದಾಯದ ಮತಗಳನ್ನು ಪಡೆದೆ ಅಧಿಕಾರ ಪಡೆದವರೆಂದು ಹೇಳಿದ ನಿಯಾಜ್, ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಒಳ್ಳೆಯವರು ಇದ್ದಾರೆ, ಕೆಟ್ಟವರೂ ಇದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳು ನಮ್ಮನ್ನು ಕಡೆಗಣಿಸದೆ ಗೌರವ ನೀಡಬೇಕೆಂದರು.ಕಾಂಗ್ರೆಸ್ ಪಕ್ಷದ ಅಸಡ್ಡೆಯಿಂದಾಗಿಯೇ ನೆರೆಯ ಕೇರಳ ರಾಜ್ಯದಲ್ಲಿ ಕನಿಷ್ಟ ವಿರೋಧ ಪಕ್ಷವಾಗಿಯೂ ಕಾಂಗ್ರೆಸ್ ಗುರುತಿಸಿಕೊಂಡಿಲ್ಲ. ಮುಂದಿನ ಚುನಾವಣೆಯಲ್ಲಿ ಯಾವುದೇ ಪಕ್ಷಗಳು ನಮ್ಮ ಸಮಸ್ಯೆಗಳಿಗೆ ಮೊದಲು ಸ್ಪಂದಿಸಿ ಮತಗಳನ್ನು ಸಂಪಾದಿಸಿಕೊಳ್ಳಲಿ ಎಂದು ಹೇಳಿದರು.ಮುಸ್ಲಿಂ ಸ್ವಾಭಿಮಾನದ ವಿಚಾರವನ್ನು ನಮ್ಮ ಸಂಘಟನೆ ಜಿಲ್ಲೆಯ ಪ್ರತಿ ಹಳ್ಳಿ ಹಳ್ಳಿಗಳಿಗೆ ಮುಟ್ಟಿಸಲಿದೆ. ಇದು ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕರ ವಿರುದ್ಧವಲ್ಲವೆಂದು ಸ್ಪಷ್ಟಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಕೊಡಗು ಯೂತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಶಕೀಲ್, ಜಂಟಿ ಕಾರ್ಯದರ್ಶಿ ನಿಚ್ಚು ಮೂರ್ನಾಡು, ಉಪಾಧ್ಯಕ್ಷ ಕಲಂದರ್, ಸದಸ್ಯರುಗಳಾದ ಜೈನುಲ್ ಅಬೀದ್ ಹಾಗೂ ಇಸಾಕ್ ಮೂರ್ನಾಡು ಉಪಸ್ಥಿತರಿದ್ದರು.

No comments

Post a Comment