ನೆಲ್ಯಹುದಿಕೇರಿ ಗ್ರಾ ಪಂ ಕಟ್ಟಡಕ್ಕೆ ಕರೆಂಟ್ ಕಟ್. ರಾಜಕೀಯ ದುರುದ್ದೇಶ: ಎ.ಕೆ ಹಕೀಂ

No comments
.NewsLine Media
ಸಿದ್ದಾಪುರ :- ವಿದ್ಯುತ್  ಬಿಲ್ ಪಾವತಿ ಮಾಡಿಲ್ಲ ಎಂದು ಚೆಸ್ಕಾಂ ಇಲಾಖೆ ನೆಲ್ಯಹುದಿಕೇರಿ  ಗ್ರಾಮ ಪಂಚಾಯಿತಿ ಕಟ್ಟಡ ಕ್ಕೆ ವಿದ್ಯುತ್ ಸಂಪರ್ಕ ಕಡಿತುಗೊಳಿಸಿರುವುದರ ಹಿಂದೆ  ರಾಜಕೀಯ ದುರುದ್ದೇಶ ಇದೆ ಎಂದು ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಕೆ ಹಕೀಂ ಆರೋಪಿಸಿದ್ದಾರೆ. ಪತ್ರಿಕೆಗೋಷ್ಠಿಯಲ್ಲಿ ಮಾತನಾಡಿ ಕಾಂಗ್ರೆಸ್ ಬೆಂಬಲಿತ ಆಡಳಿತದ ಗ್ರಾಮ ಪಂಚಾಯಿತಿಗಳ ಮೇಲೆ ಸಣ್ಣ ಮೊತ್ತದ ವಿದ್ಯುತ್ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ಸಂಪರ್ಕ ಗಡಿತಗೊಳಿಸಿ ಸಾರ್ವಜನಿಕರಿಗೆ ತೊಂದರೆ ನೀಡಲು ಮುಂದಾಗಿರುವ ಚೆಸ್ಕಾಂ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಹಲವು ಪಂಚಾಯಿತಿಗಳಲ್ಲಿಅಂದಾಜು 50 ಲಕ್ಷದಷ್ಟು ವಿದ್ಯುತ್ ಬಿಲ್ ಬಾಕಿ ಇರಿಸಿಕೊಂಡಿದ್ದಾರೆ. ನೆಲ್ಯಹುದಿಕೇರಿ ಗ್ರಾಮ ಪಂಚಾಯತಿಯಿಂದ  ಸಾರ್ವಜನಿಕರಿಗೆ ಬೀದಿ ದೀಪ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು ಪ್ರತಿ ತಿಂಗಳಿಗೆ ಒಂದುವರೆ ಲಕ್ಷದಷ್ಟು ಬರುತ್ತಿದ್ದ ವಿದ್ಯುತ್ ಬಿಲ್ ಗೆ  ಇದೀಗ ದಂಡದ ಹೆಸರಿನಲ್ಲಿ 3ಲಕ್ಷದಷ್ಟು ಬಿಲ್ ಬರುತ್ತಿದ್ದು ಹೆಚ್ಚುವರಿ ವಸೂಲಿಗೆ  ಚೆಸ್ಕಾಂ ಇಲಾಖೆ ಮುಂದಾಗಿದ್ದು 16 ಲಕ್ಷ ಬಾಕಿ ಹಿರಿಸಿಕೊಂಡ ಕಾರಣಕ್ಕೆ ಗ್ರಾಮ ಪಂಚಾಯಿತಿ ಕಟ್ಟಡ ಕ್ಕೆ ಕರೇಂಟ್  ಕಟ್ ಮಾಡಿದ್ದಾರೆ. ಆಧಿಕ ಮೊತ್ತದ  ಹಣ ಬಾಕಿ ಇರಿಸಿಕೊಂಡ ಇತರೆ ಪಂಚಾಯಿತಿಗಳಿಗೆ ಯಾವುದೇ ಕ್ರಮ ಕೈಗೊಳ್ಳದೆ ನೆಲ್ಯಹುದಿಕೇರಿ ಹಾಗೂ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯನ್ನು ಮಾತ್ರ ಗುರಿಯಾಗಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡಲು ಮುಂದಾಗಿರುವು ಬಿಜೆಪಿ ಸರ್ಕಾರದ ನಡೆ  ಸರಿಯಾದ ಕ್ರಮವಲ್ಲ ಎಂದು ಆರೋಪಿಸಿದ ಅವರು  ಚೆಸ್ಕಾಂ ಇಲಾಖೆಯ ಜನವಿರೋದಿ ಧೋರಣೆ ಹಾಗೂ ದಂಡದ ಹೆಸರಿನಲ್ಲಿ ವಸೂಲಿಗೆ ಇಳಿದಿರುವುದನ್ನ ಜಿಲ್ಲಾಡಾಳಿತದ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.16 ಲಕ್ಷ ರೂ ವಿದ್ಯುತ್ ಬಿಲ್ ಬಾಕಿ ಇರಿಸಿಕೊಂಡ ಕಾರಣದಿಂದ ಕಟ್ಟಡಕ್ಕೆ ಸಂಪರ್ಕ ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ಕಳೆದ 29ದಿನಗಳಿಂದ ಜನರೇಟರ್ ಬಳಸಿ ಜನರಿಗೆ ಸೇವೆ ನೀಡಲಾಗಿದೆ ಗ್ರಾಮ ಪಂಚಾಯಿತಿಯಲ್ಲಿ ಇತರ ಯಾವುದೇ ಅನುದಾನಗಳಿಲ್ಲದೆ 15ನೇ ಹಣಕಾಸಿನ ಮೂಲಕ 10 ಲಕ್ಷ ರೂ ಚೆಸ್ಕಾಂಗೆ ವಿದ್ಯುತ್ ಬಿಲ್ ಕಟ್ಟಲು ಮುಂದಾಗಿರುವುದಾಗಿ ಅಧ್ಯಕ್ಷ   ಎ.ಕೆ ಹಕೀಂ ತಿಳಿಸಿದ್ದಾರೆ.  ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಸಾಬು ವರ್ಗೀಸ್ ಮಾತನಾಡಿ ಉದ್ಯೋಗ ಖಾತ್ರಿ ಸೇರಿದಂತೆ ಹಲವು ಯೋಜನೆಗಳ ಮೂಲಕ ಒಂದುವರೆಕೋಟಿಗೂ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದ್ದು ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ನನಗೂ ಪ್ರಶಸ್ತಿಗಳು ಬಂದಿದೆ ಅತ್ಯಾಧುನಿಕವಾಗಿ ಗ್ರಂಥಾಲಯ ಹಾಗೂ ಪಂಚಾಯಿತಿ ಕಟ್ಟಡವನ್ನ ನವಿಕರಣ ಮಾಡಿ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲೂ ಗುರುತಿಸಿಕೊಂಡು  ಅತ್ಯುತ್ತಮ ಸಾಧನೆಗೆ ಪ್ರಶಸ್ತಿ ಲಭಿಸಿದೆ.ನೆಲ್ಯಹುದಿಕೇರಿ ಮಾದರಿ ಪಂಚಾಯಿತಿಯನ್ನಾಗಿಸಿ ಮೆಚ್ಚಿಗೆ ಗಳಿಸಿದ ಏಕೈಕ ಪಂಚಾಯತಿಯಾಗಿದೆ. ಅಭಿವೃದ್ಧಿಯನ್ನು ಸಹಿಸದ ಕೆಲವರು ಪಂಚಾಯಿತಿ ಮೇಲೆ ಇಲ್ಲಸಲ್ಲದ ಆರೋಪಗಳನ್ನ ಮಾಡಿ ಚೆಸ್ಕಾಂ ಇಲಾಖೆ ಮೇಲೆ ಒತ್ತಡ ಹಾಕಿ ಬಿಲ್ ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದರ ಹಿಂದೆ ರಾಜಕೀಯ ಒತ್ತಡವಿದೆ. ಜಿಲ್ಲೆಯಲ್ಲಿ ದೊಡ್ಡ ಮೊತ್ತದ ಬಾಕಿ ಉಳಿಸಿಕೊಂಡಿರುವ ಪಂಚಾಯಿತಿಗಳು ಇದ್ದು ಉದ್ದೇಶಪೂರ್ವಕವಾಗಿ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿಯನ್ನು ಗುರಿಯಾಗಿಸಿ ಸಾರ್ವಜನಿಕರಿಗೆ ತೊಂದರೆ ನೀಡುವುದು ಸರಿಯಲ್ಲ ಎಂದರು.

No comments

Post a Comment