SKSSF ಕೊಡಗು ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾಗಿ ತಮ್ಲೀಕ್ ದಾರಿಮಿ - ಪ್ರಧಾನ ಕಾರ್ಯದರ್ಶಿಯಾಗಿ ಜಂಶೀರ್ ವಾಫಿ ಆಯ್ಕೆ

No comments


 
ನೆಲ್ಲಿಯಹುದಿಕೇರಿ KSSF ಕೊಡಗು ಜಿಲ್ಲಾ ಸಮಿತಿಯ ವಾರ್ಷಿಕ ಸಭೆ ನೆಲ್ಲಿಯಹುದಿಕೇರಿ ಕೋಫಿಯ ರೆಸ್ಟೋರೆಂಟ್ ನಲ್ಲಿ ದಿನಾಂಕ 09/02/2022 ರ ಬುಧವಾರ ನಡೆಯಿತು. ಕೌನ್ಸಿಲ್ ಕ್ಯಾಂಪ್ ಕಾರ್ಯಕ್ರಮವನ್ನು ಸಮಸ್ತ ಕೇಂದ್ರ ಮುಷಾವರ ಸದಸ್ಯರಾದ ಶೈಖುನಾ ಎಂ ಎಂ ಅಬ್ದುಲ್ಲಾ ಮುಸ್ಲಿಯಾರ್ ಉದ್ಘಾಟಿಸಿದರು. SKSSF ಕರ್ನಾಟಕ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಆರಿಫ್ ಫೈಝಿ ಹಿತನುಡಿಗಳನ್ನಾಡುತ್ತಾ ಗತಕಾಲದಲ್ಲಿ ಕೊಡಗು ಜಿಲ್ಲಾ ಸಮಿತಿಯು ನಡೆದು ಬಂದ ಹಾದಿಯನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ವಾರ್ಷಿಕ ಲೆಕ್ಕ ಪತ್ರಗಳನ್ನು ಮಂಡಿಸಿದ ನಂತರ 2022-24 ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ತಮ್ಲೀಕ್ ದಾರಿಮಿ, ಪ್ರಧಾನ ಕಾರ್ಯದರ್ಶಿಯಾಗಿ ಜಂಶೀರ್ ವಾಫಿ, ಕೋಶಾಧಿಕಾರಿಯಾಗಿ ಸಿದ್ದೀಕ್ ಹಾಜಿ ಕೊಡ್ಲಿಪೇಟೆ ಹಾಗೂ ಕಾರ್ಯಕಾರಿ ಕಾರ್ಯದರ್ಶಿಯಾಗಿ ಸಜೀರ್ ಪೊನ್ನಂಪೇಟೆ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಸುಹೈಬ್ ಫೈಝಿ, ನಾಸರ್ ದಾರಿಮಿ, ಸಿದ್ದೀಕ್ ವಾಫಿ, ಉಮ್ಮರ್ ಮುಸ್ಲಿಯಾರ್, ಮೋಹಿನುದ್ದೀನ್,  ಜೊತೆ ಕಾರ್ಯದರ್ಶಿಯಾಗಿ ಹನೀಫ್ ಫೈಝಿ ಗುಂಡಿಗೆರೆ, ರಫೀಕ್ ಬಾಖವಿ ಕೊಡಗರಹಳ್ಳಿ, ಶಮೀರ್ ಕೆ.ಪಿ ಸಂಘಟನಾ ಕಾರ್ಯದರ್ಶಿಯಾಗಿ ಹನೀಫ್ ಫೈಝಿ ಎಡಪ್ಪಲ, ಶಾಹುದ್ ಅಲಿ ಕಲ್ಲುಬಾಣೆ, ಹಸ್ಸನ್ ಮಾಪಿಳತ್ತೊಡ್ ಆಯ್ಕೆಯಾಗಿದ್ದಾರೆ. 

ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಕೇಂದ್ರ ಸಮಿತಿ ಪ್ರತಿನಿಧಿ ಬಶೀರ್ ಫೈಝಿ ಮಾಣಿಯೂರ್ ನೂತನ ಸಮಿತಿಯನ್ನು ಘೋಷಿಸಿ ಮಾತನಾಡುತ್ತಾ, ಸಂಘಟನೆಯ ಮಹತ್ವದ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಉಮ್ಮರ್ ಫೈಝಿ, ಇಕ್ಬಾಲ್ ಮುಸ್ಲಿಯಾರ್ ಹಾಗೂ ಶಾಖಾ ಪ್ರತಿನಿಧಿಗಳು, ವಲಯ ಮಟ್ಟದ ನಾಯಕರುಗಳು, ಜಿಲ್ಲಾ ಸಮಿತಿಯ ನೇತಾರರು ಭಾಗವಹಿಸಿದ್ದರು. ಸುಹೈಬ್ ಫೈಝಿ ಸ್ವಾಗತಿಸಿ, ಜಂಶೀರ್ ವಾಫಿ ವಂದಿಸಿದರು.

No comments

Post a Comment