ಸಿದ್ದಾಪುರ (Times Of Coorg): ಜನಜಾಗೃತಿ ಮೂಡಿಸುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಖಂಡಿಸುವುದಾಗಿ ಸಿದ್ದಾಪುರ ಗ್ರಾ.ಪಂ ಸದಸ್ಯರು ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಗ್ರಾ.ಪಂ ಸದಸ್ಯರಾದ ಶೌಕತ್ ಅಲಿ, ರಜಿತ್ ಕುಮಾರ್, ಹುಸೈನ್, ಪಟ್ಟಣದಲ್ಲಿ ಜನರು ಅಗತ್ಯ ಸಾಮಾಗ್ರಿಗಳನ್ನು ಖರೀದಿಸಲು ಮುಗಿ ಬಿದ್ದಿದ್ದು, ಜನರು ಗುಂಪು ಸೇರಿದಂತೆ ಗ್ರಾ.ಪಂ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಆದರೇ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರೇ ಜಾಗೃತಿ ಕಾರ್ಯವನ್ನು ಮಾಡಿದ್ದರು. ಪಟ್ಟಣದಲ್ಲಿ ಸಾಮಾಜಿಕ ಕಾರ್ಯಕರ್ತ ಎಂ.ಎ ಅಜೀಜ್ ಕೂಡ ಮೈಕ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದು, ಗ್ರಾ.ಪಂ ವ್ಯಾಪ್ತಿಯ ಜನರ ಹಿತದೃಷ್ಟಿಯಿಂದ ಮಾಡಿರುವ ಕಾರ್ಯ ಶ್ಲಾಘನೀಯ. ಆದರೇ ವೈಯುಕ್ತಿಕ ದ್ವೇಶದಿಂದ ಅವರ ವಿರುದ್ಧ ಪ್ರಕರಣ ದಾಖಲಿಸಿರುವುದು ಖಂಡನೀಯ. ಗ್ರಾ.ಪಂ ಮಾಡಬೇಕಾದ ಕಾರ್ಯವನ್ನು ಇತರರು ಮಾಡುವಾಗ ಅವರಿಗೆ ಬೆಂಬಲ ನೀಡುವುದು ಗ್ರಾ.ಪಂ ನ ಕೆಲಸ. ಜಾಗೃತಿ ಕಾರ್ಯಕ್ಕೆ ಎಲ್ಲರ ಬೆಂಬಲ ಅಗತ್ಯವಾಗಿದೆ ಎಂದರು.
ಈಗಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ವಾಧಿಕಾರಿ ಧೋರಣೆಯನ್ನು ದೂರ ಇಟ್ಟು ಸಾರ್ವಜನಿಕರ ಸಹಕಾರದೊಂದಿಗೆ ಕೊರೋನಾ ವನ್ನು ಎದುರಿಸಬೇಕಾಗಿದ್ದು, ದ್ವೇಶವನ್ನು ದೂರ ಇಡಬೇಕಾಗಿದೆ. ಗ್ರಾಮಸ್ಥರು ಕೂಡ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸಾಮಾಗ್ರಿಗಳನ್ನು ಖರೀಧಿಸಬೇಕು. ಅನಗತ್ಯವಾಗಿ ಮನೆಯಿಂದ ಹೊರಬರಬಾರದು ಎಂದು ಮನವಿ ಮಾಡಿದರು.
No comments
Post a Comment