ಈಗಾಗಲೇ ನೀಡಿರುವ ಮಾಹಿತಿಯಂತೆ 05 ಜನರು ದೆಹಲಿಯಲ್ಲಿ ಕ್ವಾರಂಟೈನ್ ನಲ್ಲಿ ಇರುತ್ತಾರೆ ಮತ್ತು ಇನ್ನೂ 05 ಜನರು ಹೊರ ಜಿಲ್ಲೆಗಳಲ್ಲಿ ವಾಸವಿದ್ದು, ಈ ಬಗ್ಗೆ ಸಂಬಂಧಪಟ್ಟ ಜಿಲ್ಲೆಗಳಿಗೆ ಮಾಹಿತಿ ನೀಡಲಾಗಿದೆ. ಉಳಿದ ಎಲ್ಲಾ 12 ಜನರನ್ನು ಜಿಲ್ಲಾ ಆಸ್ಪತ್ರೆಯ ಐಸೋಲೇಶನ್ ವಾರ್ಡ್ ನಲ್ಲಿ ಇರಿಸಲಾಗಿದ್ದು, ಇವರಿಗೆ ಕೊರೋನಾ ವೈರಸ್ ನ ಲಕ್ಷಣಗಳಿರುವುದಿಲ್ಲ. ಆದಾಗ್ಯೂ ಇವರ ಗಂಟಲು ದ್ರವ ಮಾದರಿಗಳನ್ನು ತೆಗೆದು ಪರೀಕ್ಷೆಗೆ ಕಳುಹಿಸಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನ್ನಿಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ದೆಹಲಿ ನಿಜಾಮುದ್ದೀನ್ ಧಾಮಿ೯ಕ ಸಭೆಯಲ್ಲಿ ಜಿಲ್ಲೆಯಿಂದ 22 ಮಂದಿ ಭಾಗಿ : ಜಿಲ್ಲಾಧಿಕಾರಿ
ಮಡಿಕೇರಿ ( Times Of Coorg ): ದೆಹಲಿ ಧಾಮಿ೯ಕ ಸಭೆಯಲ್ಲಿ ಜಿಲ್ಲೆಯಿಂದ ಪಾಲ್ಗೊಂಡವರ ಬಗ್ಗೆ ಈ ಕಚೇರಿಯಿಂದ ದಿನಾಂಕ:01-04-2020 ರಂದು ನೀಡಿದ ಮಾಹಿತಿಯನ್ನು ಮುಂದುವರೆಸುತ್ತಾ, ಜಿಲ್ಲೆಯಲ್ಲಿ ಮತ್ತೆ 10 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, ಜಿಲ್ಲೆಯಿಂದ ದೆಹಲಿಗೆ ತೆರಳಿದವರ ಸಂಖ್ಯೆ ಒಟ್ಟು 22 ಆಗಿರುತ್ತದೆ.
No comments
Post a Comment