ಸಿದ್ದಾಪುರ (Times Of Coorg) : ನೆಲ್ಯಹುದಿಕೇರಿ ಸಾಮಾಜಿಕ ಕಾರ್ಯಕರ್ತ ಹಾಗೂ ಪತ್ರಕರ್ತರೂ ಆದ ಎಂ.ಎ.ಅಜೀಜ್ ಅವರ ವಿರುದ್ದ ವೈಯಕ್ತಿಕ ದ್ವೇಷ ಸಾಧನೆಗಾಗಿ FIR ದಾಖಲು ಮಾಡಿರುವ ಕ್ರಮವನ್ನು SKSSF ನೆಲ್ಯಹುದಿಕೇರಿ ಘಟಕ ತೀವ್ರವಾಗಿ ಖಂಡಿಸುತ್ತಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊರೊನಾ ಮಹಾಮಾರಿ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರೋಗ್ಯ ಇಲಾಖೆ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಜನ ಜಾಗೃತಿ ಮೂಡಿಸುತ್ತಿದೆ. ಇದರ ಜೊತೆಗೆ ವಿವಿಧ ಸಂಘ ಸಂಸ್ಥೆಗಳು, ಸಮಾಜ ಸೇವಕರು ಸಹ ಜನ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅದರಂತೆ ಸಾರ್ವಜನಿಕರಿಗೆ ಒಳಿತಾಗುವ ನಿಟ್ಡಿನಲ್ಲಿ ಕರ್ಫ್ಯೂ ಸಡಿಲಿಕೆಯ ದಿನವಾದ ಸೋಮವಾರದಂದು ಸಿದ್ದಾಪುರ ಪಟ್ಟಣದಲ್ಲಿ ಅಂಗಡಿಗಳ ಮುಂದೆ ಪರಸ್ಪರ ಒಬ್ಬರಿಗೊಬ್ಬರು ಅಂತರ ಕಾಯ್ದು ಕೊಳ್ಳದೆ ಸಾಲುಗಟ್ಟಿ ನಿಂತಿದ್ದ ಸಂದರ್ಭ ಪೊಲೀಸರು ಜನರನ್ನು ಹತೋಟಿಗೆ ತರಲು ಹರಸಾಹಸ ಪಡುತ್ತಿದ್ದರು. ಈ ಸಂದರ್ಭ ಸಿದ್ದಾಪುರಕ್ಕೆ ತೆರಳಿದ ಅಜೀಜ್ ಜನರಿಗೆ ಅಂತರ ಕಾಯ್ದು ಕೊಳ್ಳುವಂತೆ ಮನವಿ ಮಾಡಿದ್ದಾರೆ. ಆದರೆ ಸಿದ್ದಾಪುರ ಗ್ರಾಪಂ ಅಧ್ಯಕ್ಷ ಮಣಿ ಹಾಗೂ ಮಾಜಿ ಉಪಾಧ್ಯಕ್ಷ ಮೂಸಾ ಅವರು ಅಜೀಜ್ ಮೇಲಿನ ದ್ವೇಷ ಸಾಧನೆಯ ಸಲುವಾಗಿ ಪೊಲೀಸ್ ದೂರು ನೀಡಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವ ಅಜೀಜ್ ವಿರುದ್ದ ದೂರು ನೀಡಿದ ಅಧ್ಯಕ್ಷರ ಕ್ರಮವನ್ನು ಎಸ್ಕೆಎಸ್ಎಸ್ಎಫ್ ನೆಲ್ಯಹುದಿಕೇರಿ ಘಟಕವು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದೆ. ಅಧ್ಯಕ್ಷರು, ಎಸ್ಕೆಎಸ್ಎಸ್ಎಫ್ ನೆಲ್ಯಹುದಿಕೇರಿ ಘಟಕ.
No comments
Post a Comment