ಕೊಡಗು ದಲಿತ ಸಂಘರ್ಷ ಸಮಿತಿಯಿಂದ ಸುಂಟಿಕೊಪ್ಪ ಅಂಬೇಡ್ಕರ್ ಕಾಲೋನಿ ನಿವಾಸಿಗಳಿಗೆ ಆಹಾರ ಕಿಟ್ ವಿತರಣೆ

No comments
  ವರದಿ; ರಂಜಿತ್ ಕವಲಪಾರ
  ಸುಂಟಿಕೊಪ್ಪ (TIMES OF COORG):- ಸೋಮವಾರ ಮಡಿಕೇರಿಯ ಸುಂಟಿಕೊಪ್ಪ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಸುಂಟಿಕೊಪ್ಪದ ಸುಮಾರು ೨೫ ದಲಿತ ಹಾಗು ಬಡಕುಟುಂಬಗಳಿಗೆ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿಯಿಂದ ಇಂದು ಆಹಾರ ಕಿಟ್ ವಿತರಿಸಲಾಗಿದೆ. ಕಿಟ್ ವಿತರಣಾ ಕಾರ್ಯಕ್ರಮಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿತ್ರಪಟಕ್ಕೆ ಹೂ ಹಾಕಿ ದೀಪ ಬೆಳಗುವ ಮೂಲಕ ಸಭಾ ಕಾರ್ಯಕ್ರಮವನ್ನು ಕೊಡಗು ಜಿಲ್ಲೆಯ ಪ್ರಖ್ಯಾತ ವಕೀಲರಾದ ಶ್ರೀಯುತ ಕೃಷ್ಣಮೂರ್ತಿಯವರು ಉದ್ಘಾಟಿಸಿ, ಪ್ರಾಸ್ತಾವಿಕವಾಗಿ ಮಾತಾನಾಡುತ್ತ.. ದೇಶದಕ್ಕೆ ಅಂಬೇಡ್ಕರ್ ಅವರ ಕೊಡುಗೆ ಅತ್ಯಮೂಲ್ಯ ಹಾಗು ಅಪಾರವಾಗಿದ್ದು ಅವರು ನಮಗೆಲ್ಲರಿಗೂ ಆದರ್ಶ ವ್ಯಕ್ತಿಯಾಗಿರುತ್ತಾರೆ ಅವರು ಹಾಕಿಕೊಟ್ಟ ಮಾರ್ಗ ಸೂಚಿಯನ್ನು ಅಳವಡಿಸಿಕೊಂಡ ಕೊಡಗಿನ ದಲಿತ ಸಂಘರ್ಷ ಸಮಿತಿಯೂ ಶ್ರೀಯುತ ದಿವಾಕರ್ ಅವರ ಮಾರ್ಗಸೂಚಿಯಂತೆ ಅತ್ಯಧ್ಭುತವಾಗಿ ಸಮಾಜ ಸೇವೆಯಲ್ಲಿ ತೊಡಗಿದ್ದು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಒಟ್ಟು ಮೊತ್ತ ಸಮಾಜಮುಖಿ ಕಾರ್ಯಕ್ರಮವು ಶ್ಲಾಘನೀಯ ಹಾಗು ಅವರ ಇಂತಹ ಸಮಾಜ ಮುಖಿ ಕಾರ್ಯಕ್ರಮಗಳು ಇನ್ನಷ್ಟು ಮೂಡಿಬರಲಿ ಎಂದು ಹಾರೈಸಿದರು ಹಾಗು ಕೊರೋನಾ ವೈರಸ್ ಭಾರತದಾದ್ಯಂತ ಉಂಟುಮಾಡಿರುವ ಪ್ರತಿಕೂಲ ಪರಿಣಾಮ ಹಾಗು ಅದರಿಂದ ಬಡ ವರ್ಗದ ಜನತೆಗೆ ಉಂಟಾಗುತ್ತಿರುವ ತೊಂದರೆಯ ಕುರಿತು ಮರುಕ ಪಟ್ಟರು. 
   ಇದೇ ಸಂದರ್ಭ ಸಭೆಯಲ್ಲಿ ಪಾಲ್ಗೊಂಡಿದ್ದ ಸುಂಟಿಕೊಪ್ಪ ವಲಯದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್‌ರವರು ಮಾತನಾಡಿ ಕೊರೋನಾ ವೈರಸ್ ಕುರಿತು ಹಾಗು ಅದರಿಂದ ಪಾರಾಗಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಆಗಮಿಸಿದ ಬಡವರ್ಗದ ಕಾರ್ಮಿಕರಲ್ಲಿ  ಜಾಗೃತಿ ಮೂಡಿಸಿದರು. 
  ಸಭಾಧ್ಯಕ್ಷರು ಹಾಗು ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರಾದ ಹೆಚ್ ಎಲ್ ದಿವಾಕರ್‌ರವರು ಮಾತನಾಡಿ ಈ ಕೊರೋನ ಮಾರಿಯು ಪ್ರಪಂಚದಾದ್ಯಂತ ಬಡ, ಮಧ್ಯಮ ವರ್ಗದ ಜನತೆಯನ್ನು ಆಹಾರ ಕೊರತೆಯಿಂದ ಕಂಗಾಲಾಗಿಸಿದ್ದು. ಈ ಸಂದರ್ಭದಲ್ಲಿ ಸ್ಥಿತಿವಂತರು ಬಡವರ ಬೆಂಬಲಕ್ಕೆ ನಿಂತು ಅವರ ಕಷ್ಟಪಾಡುಗಳಿಗೆ ಸ್ಪಂದಿಸಿ ಮಾನವೀಯತೆ ಮರೆಯುವಂತೆ ಮಾದ್ಯಮದ ಮೂಲಕ ಕೋರಿಕೊಂಡರು ಹಾಗು ಪಂಚಾಯತಿಯಿಂದಲು ಬಡವರ್ಗದ ನಾಗರಿಕರಿಗೆ ಅಕ್ಕಿಯೊಂದಿಗೆ ಅಗತ್ಯ ದಿನಸಿ ಸಾಮಾಗ್ರಿಗಳನ್ನು ಕಲ್ಪಿಸಿಕೊಡುವಂತೆ ಸುಂಟಿಕೊಪ್ಪ ಪಿ.ಡಿ.ಓ ಬಳಿ ತಮ್ಮ ಬೇಡಿಕೆಯನ್ನು ಇಟ್ಟರು. ನಂತರ ಸಭಾಕಾರ್ಯಕ್ರಮದಲ್ಲಿ ಅಗತ್ಯ ಮುಂಜಾಗ್ರತ ಕ್ರಮದೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಭಾಗವಹಿಸಿದ್ದ ಸುಂಟಿಕೊಪ್ಪದ ಅಂಬೇಡ್ಕರ್  ಕಾಲೋನಿಯ ಸುಮಾರು ೨೫ ಬಡ ಕುಟುಂಬಗಳಿಗೆ ಅಗತ್ಯ ದಿನಸಿ ಪದಾರ್ಥಗಳನ್ನು ಒಳಗೊಂಡಿದ್ದ ಆಹಾರ ಕಿಟ್ಟನ್ನು ವಿತರಿಸಿದರು. 
    ಈ ಸಂದರ್ಭ ದಲಿತ ಸಂಘರ್ಷ ಸಮಿತಿಯ ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷ ದೀಪಕ್ ಏ ಪಿ, ಮಡಿಕೇರಿ ನಗರದ ಲೋಕೋಪಯೋಗಿ ಗುತ್ತಿಗೆದಾರರಾದ ವಿಜಯ ಕುಮಾರ್, ದಲಿತ ಸಂಘರ್ಷ ಸಮಿತಿಯ ಮಡಿಕೇರಿ ನಗರ ಸಂಚಾಲಕರಾದ ಸಿದ್ದೇಶ್ವರ್, ಸುಂಟಿಕೊಪ್ಪ ಹೋಬಳಿ ಸಂಚಾಲಕರಾದ ರವಿ ಇನ್ನಿತರರು ಭಾಗಿಯಾಗಿದ್ದರು. 
.

No comments

Post a Comment