ಅಧಿಕಾರ ಕಳೆದುಕೊಂಡ ನಂತರ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಹುಚ್ಚರಾಗುತ್ತಿದ್ದಾರೆ : ಬಿಜೆಪಿ ನಾಯಕ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ

No comments

ಬೆಂಗಳೂರು (TOC ನ್ಯೂಸ್) : "ರಾಜ್ಯಾಧಿಕಾರ ಕಳೆದುಕೊಂಡ ಮೇಲೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ ಕುಮಾರಸ್ವಾಮಿ ಹುಚ್ಚರಾಗುತ್ತಿದ್ದಾರೆ" ಎನ್ನುವ ಮೂಲಕ ಸಚಿವ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ.


ಇಂದು ನಗರದಲ್ಲಿ ಮಾತಾಡಿದ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ, ಅಧಿಕಾರ ಹೋದ ಮೇಲೆ ಮಾಜಿ ಸಿಎ ಸಿದ್ದರಾಮಯ್ಯ ಮತ್ತು ಎಚ್​​.ಡಿ ಕುಮಾರಸ್ವಾಮಿಗೆ ಹುಚ್ಚು ಹಿಡಿದಿದೆ. ಇಬ್ಬರಿಗೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಮೇಲೆ ಏನನ್ನೋ ಕಳೆದುಕೊಂಡತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಎಚ್​.ಡಿ ಕುಮಾರಸ್ವಾಮಿಯವರೇ ನೀವು ಸಿಎಂ ಆಗಿದ್ದಾಗ ನಾವು ಕೂಡ ಎಲ್ಲಾ ಜಿಲ್ಲೆಗೆ ಪ್ರವಾಸ ಮಾಡಿದ್ದೇವೆ. ಆದರೆ, ನಿಮ್ಮಂತೆ ನಾವ್ಯಾವತ್ತು ರಾಜಕೀಯ ಮಾಡಿರಲಿಲ್ಲ. ನಿನ್ನೆಯವರೆಗೂ ಪರಿಹಾರ ಬಂದಿಲ್ಲ ಅಂತ ಬಡುಕೊಂಡಿದ್ದೀರಿ. ಈಗ ಪರಿಹಾರ ಬಂದ ಮೇಲೆ ಇಷ್ಟೇನಾ ಎಂದು ಕೇಳುತ್ತಿದ್ದೀರಿ ಯಾಕೇ? ಎಂದು ಪ್ರಶ್ನಿಸಿದ್ದಾರೆ.

ಇತ್ತ ಎಚ್​​.ಡಿ ಕುಮಾರಸ್ವಾಮಿ ವಿರೋಧ ಪಕ್ಷದ ಸ್ಥಾನಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಅತ್ತ ಸಿಎಂ ಸ್ಥಾನದಿಂದ ಇಳಿದ ಮೇಲೆ ಸಿದ್ದರಾಮಯ್ಯಗೆ ಏನೋ ಕಳೆದುಕೊಂಡ ನೋವಾಗಿದೆ. ಹಾಗಾಗಿಯೇ ಹೇಗಾದರೂ ಮಾಡಿ ಕಾಂಗ್ರೆಸ್​​ನ ವಿರೋಧ ಪಕ್ಷ ಸ್ಥಾನಕ್ಕೆ ಯತ್ನಿಸುತ್ತಿದ್ದಾರೆ ಎಂದು ಕಾಲೆಳೆದರು ಕೆ.ಎಸ್​​ ಈಶ್ವರಪ್ಪ.

No comments

Post a Comment