Showing posts with label ರಾಜ್ಯ. Show all posts
Showing posts with label ರಾಜ್ಯ. Show all posts

ರಾಜೇಶ್ ನಾಯಕಗೆ "ಗೌರವ ಡಾಕ್ಟರೇಟ್"

Newsline media
ಮೈಸೂರು :-‍ಏಷ್ಯಾ ವೇದಿಕ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ  ವತಿಯಿಂದ  ತಮಿಳುನಾಡಿನ ಹೊಸೂರಿನಲ್ಲಿ ನಡೆದ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರಧಾನ ಸಮಾರಂಭದಲ್ಲಿ ಸಾಮಾಜಿಕ ಕಾರ್ಯಕರ್ತ, ಸಾಮಾಜಿಕ ಜಾಲತಾಣ ತಜ್ಞ ರಾಜೇಶ್ ನಾಯಕ ರವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.  ಜಿ .ಆರ್ ರಾಜೇಶ್ ನಾಯಕ  ಮೈಸೂರಿನ ಸಿಮ್ಕಾನ್ ಫೌಂಡೇಶನ್ ಮತ್ತು ಸೋಷಿಯಲ್ ವೇಲ್ಫೇರ್ ಟ್ರಸ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಂಸ್ಥಾಪಕ ಅಧ್ಯಕ್ಷ ರಮೇಶ್ ಎಂ.ಕೆ ಮತ್ತು ನಿರ್ದೇಶಕ ಆದರ್ಶ ಗೌಡರ ಮಾರ್ಗದರ್ಶನದಲ್ಲಿ ಮೊಬೈಲ್ ನಿಂದ ಆಗುವ ದುಷ್ಪರಿಣಾಮ ಮತ್ತು ವೈಜ್ಞಾನಿಕ ಬಳಕೆ, ಸ್ವಯಂ ಉದ್ಯೋಗ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಬಗ್ಗೆ  5000 ಕ್ಕೂ ಹೆಚ್ಚು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹಾಗೂ ಅನೇಕ ಸಂಘಸಂಸ್ಥೆಗಳಲ್ಲಿ ಗೌರವ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದು. ಅಂತರರಾಷ್ಟ್ರೀಯ ಖ್ಯಾತಿಯ ನಾಟ್ಯಶ್ರೀ ಬದರಿ ದಿವ್ಯ ಭೂಷಣ್ ಮತ್ತು ಡಾ ಅಂಜನ ಭೂಷಣ್ ರವರ ಭೂಷಣ್ ಪ್ರದರ್ಶಕ ಕಲೆಗಳು ಮತ್ತು ದೃಶ್ಯಪ್ರಸ್ತುತಿ ಕೇಂದ್ರ ರೂಪಿಸಿದ ನೃತ್ಯ ಬಲೆಯೊಂದು "ಶ್ರೀ ರಾಮಾನುಜ ಧನುರ್ ದಾಸ ವೈಭವಂ" ನೃತ್ಯ ರೂಪದಲ್ಲಿ ಶ್ರೀ ರಾಮಾನುಜರ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದು. ಈ ನೃತ್ಯ ರೂಪಕವು ದೇಶದ ನಾನಾ ಪ್ರಸಿದ್ಧ ಕಾರ್ಯಕ್ರಮಗಳಲ್ಲಿ ಪ್ರಸ್ತುತಗೊಂಡಿದೆ. ಹಾಗೂ ತಿರುಪತಿಯ ನಾದ ನಿರಜನಂ ವೇದಿಕೆಯಲ್ಲಿ ಟಿಟಿಡಿ ಚಾನಲ್ ಮುಖಾಂತರ 170 ದೇಶಗಳಲ್ಲಿ ನೇರ ಪ್ರಸಾರಗೊಂಡಿದೆ. ಹಾಗೂ ಮಹಿಳಾ ಸಬಲೀಕರಣ ಸೇವೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ರಾದೇ ಪುಸ್ತಕ ಸಂಗ್ರಹ ಮಂದಿರ ಮುಖಾಂತರವಾಗಿ ಹಲವಾರು ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಇವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಪ್ರತಿಷ್ಟಿತ "ಬಸವರತ್ನ ರಾಷ್ಟ್ರ ಪ್ರಶಸ್ತಿ", "ಡಾ. ಪಂಡಿತ್ ಪುಟ್ಟರಾಜ ಗವಾಯಿ ರಾಷ್ಟ್ರೀಯ ಸೇವಾರತ್ನ ಪ್ರಶಸ್ತಿ  " "ರಾಷ್ಟ್ರೀಯ ಯುವರತ್ನ ಪ್ರಶಸ್ತಿ " "ಭಾರತ ಸೇವಾರತ್ನ ರಾಷ್ಟ್ರೀಯ ಪ್ರಶಸ್ತಿ" "ಸೇವಾ ಭೂಷಣ ರಾಜ್ಯ ಪ್ರಶಸ್ತಿ", " ಹೆಮ್ಮೆಯ ಕನ್ನಡಿಗ ರಾಜ್ಯ ಪ್ರಶಸ್ತಿ " ಹಾಗೂ "ವಿಶ್ವ ಮಾನವ ಪ್ರಶಸ್ತಿ",    "ಕನ್ನಡ ವಿಕಾಸ ರತ್ನ" ಇನ್ನೂ ಹಲವು  ಪ್ರಶಸ್ತಿಯು ಇವರಿಗೆ ಲಭಿಸಿದೆ.

ನ 9ರಂದು ನಂಜನಗೂಡಿಗೆ ಜೈಭೀಮ್ ಜನ ಜಾಗ್ರತಿ ಜಾಥಾ

ಮೈಸೂರು :- ಬಹುಜನ ಸಮಾಜ ಪಕ್ಷದ ವತಿಯಿಂದ ಸಂವಿಧಾನ ರಕ್ಷಣೆಗಾಗಿ ಕನಾಟಕ ರಾಜ್ಯವ್ಯಾಪಿ ನಡೆಸುತ್ತಿರುವ ಜೈಭೀಮ್ ಜನ ಜಾಗೃತಿಜಾಥಾ ಯಾತ್ರೆ ನ.9ರಂದು ನಂಜನಗೂಡು ವಿಧಾನಸಭಾಕ್ಷೇತ್ರವನ್ನು ಪ್ರವೇಶಿಸಲಿದೆ ಎಂದು ಬಿಎಸ್ಪಿ ಜಿಲ್ಲಾ ಉಪಾಧ್ಯಕ್ಷ ಶ್ರೀಕಂಠ ಹೇಳಿದರು.
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಸಂವಿಧಾನ ರಕ್ಷಣೆಗಾಗಿ ಬಿಎಸ್ಪಿಯಿಂದ ರಾಜ್ಯ ವ್ಯಾಪಿ ಸೆ.28ರಿಂದ ಪ್ರಾರಂಭಗೊಂಡು ನ.13ರವರೆಗೆ ನಡೆ ಯಲಿರುವ ಜೈಭೀಮ್ ಜನ ಜಾಗೃತಿ ಜಾಥಾ ನ.9ರಂದು ಬೆಳಗ್ಗೆ 9 ಗಂಟೆಗೆ ತಾಲೂಕಿನ ಹೆಡಿಯಾಲ ಗ್ರಾಮದ ಮೂಲಕ ನಂಜನಗೂಡನ್ನು ಪ್ರವೇಶಿಸಲಿದ್ದು, ಬಳಿಕ ಮಡುವಿನಹಳ್ಳಿ, ಹುರ ಹಾಗೂ ಹುಲ್ಲಹಳ್ಳಿ ಮಾರ್ಗದಲ್ಲಿ ನಂಜನಗೂಡನ್ನು ಪ್ರವೇಶಿಸಲಿದೆ. ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಖಾಸಗಿ ಬಸ್ ನಿಲ್ದಾಣದ ಬಳಿ ಪಕ್ಷದ ಪ್ರಮುಖರು ಬಾಬಾ ಸಾಹೇಬ್ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜಾಗೃತಿ ರಥವನ್ನು ತಿ.ನರಸೀಪುರಕ್ಕೆ  ಬೀಳ್ಕೊಡಲಿದ್ದಾರೆ,'' ಎಂದು ಅವರು ಹೇಳಿದರು.
ಬಿಎಸ್ಪಿ ತಾಲೂಕು ಘಟಕದ ಅಧ್ಯಕ್ಷ ಡಿ.ಕೆ.ಶಿವಣ್ಣ ಮಾತ ನಾಡಿ,“ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಅವರ ಆಶಯಗಳಿಗೆಆಡಳಿತಾರೂಢ ಸರಕಾರಗಳು ಧಕ್ಕೆ ತಂದ್ದೊಡುವ ಮೂಲಕದೇಶವನ್ನು ಅರಾಜಕತೆಯತ್ತ ಕೊಂಡೊಯ್ಯಲು ಮುಂದಾಗಿವೆ.ಮೀಸಲಾತಿಯನ್ನು ಬಲಹೀನಗೊಳಿಸುವ ಸಂಚು ನಡೆಯುತ್ತಿದ್ದುಜೊತೆಗೆ ಸಾರ್ವಜನಿಕ ವಲಯದ ಸೇವೆಗಳನ್ನು ಖಾಸಗೀ ಕರಣಗೊಳಿಸುವಮೂಲಕ ರಾಷ್ಟ್ರದ ಹಿತಕ್ಕೆಧಕ್ಕೆತರಲಾಗುತ್ತಿದೆ. ಹೀಗಾಗಿ ಜಾಥಾ ಕೈಗೊಂಡಿದ್ದು, ಜಾಥಾದಲ್ಲಿಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣ ಮೂರ್ತಿ ಹಾಗೂ ರಾಜ್ಯ ಸಂಯೋಜಕಮಾರಸಂದ್ರ ಮುನಿಯಪ್ಪ ಪಾಲ್ಗೊಂಡು ಜನ ಜಾಗೃತಿ ಮೂಡಿಸಲಿದ್ದಾರೆ,'' ಎಂದರು.ಈ ಸಂದರ್ಭದಲ್ಲಿ ಬಿಎಸ್ಪಿ ಜಿಲ್ಲಾ ಕಾರ್ಯದರ್ಶಿ ಪುರುಷನಾಥ್,ಜಯಮೂರ್ತಿ,ಚೆನ್ನಬಸವಯ್ಯ,  ಸಿದ್ಧರಾಜು,ಮಹದೇವಯ್ಯ, ರಂಗಸ್ವಾಮಿ, ಕೆಂಪಣ್ಣಪುಟ್ಟರಯ್ಯ ಸೇರಿದಂತೆಮತ್ತಿತರರು ಇದ್ದರು.

ಸೌಹಾರ್ದತೆಯ ದೇಶ ಕಟ್ಟಲು ಮುಂದಾಗಿ:ಮಾಜಿ ಶಾಸಕ ಕೆ.ವೆಂಕಟೇಶ್. ಪಿರಿಯಾಪಟ್ಟಣದಲ್ಲಿ ಈದ್ ಮಿಲಾದ್ ಸಮಾರೋಪ

ವರದಿ:newsline media 
ಸಿದ್ದಾಪುರ :-ದೇಶದಲ್ಲಿ ಆಳುತ್ತಿರುವ ಬಿಜೆಪಿಯಿಂದ ಸಾಮಾನ್ಯ ಜನರು ಆತಂಕದ ಜೀವನ ನಡೆಸುವಂತಾಗಿದ್ದು ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರರನ್ನ ಸಾಮಾಜಿಕವಾಗಿ ತುಳಿಯುವ ಪ್ರಯತ್ನ ಮಾಡುತ್ತಿದೆ ಎಂದು ಮಾಜಿ ಸಚಿವ ಕೆ ವೆಂಕಟೇಶ್   ವಿಷಾದ ವ್ಯಕ್ತಪಡಿಸಿದರು .ಪಿರಿಯಾಪಟ್ಟಣ ಮಲಬಾರ್ ಜುಮಾ ಮಸೀದಿ ಸಮಿತಿಯಿಂದ ನಡೆದ ಈದ್ ಮಿಲಾದ್ ಸಮಾರೋಪ ಸಮಾರಂಭದ   ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿಭವ್ಯ ಭಾರತ ದೇಶದಲ್ಲಿ ಎಲ್ಲಾ ಧರ್ಮಿಯರು ಆಚಾರ ವಿಚಾರ ಸಂಸ್ಕೃತಿ ಪರಂಪರೆ ಯೊಂದಿಗೆ ಸಂವಿಧಾನದ ಆಶಯದಂತೆ  ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸೌಹಾರ್ದತಾ ದೇಶದಲ್ಲಿ ಒಡಕುಂಟು ಮಾಡಲು  ಬಿಜೆಪಿ ತನ್ನ ಅಂಗ ಸಂಸ್ಥೆ ಮೂಲಕ ಅಶಾಂತಿ ಸೃಷ್ಟಿ ಮಾಡಲು ಮುಂದಾಗಿದೆ ಎಂದು ಆರೋಪಿಸಿದ ಅವರು ದೇಶದ ಐಕ್ಯತೆಯ ಒಡೆದು ಆಳುವವರನ್ನ ದೂರ ಇಡಬೇಕಾಗಿದೆ. ಎಲ್ಲಾ ಧರ್ಮದ ಆಚಾರ ವಿಚಾರ ಸಂಸ್ಕೃತಿ ಪರಂಪರೆಯನ್ನು ಗೌರವಿಸುವ ಮೂಲಕ ನಾವೆಲ್ಲರೂ ಒಗ್ಗಟ್ಟಿನೊಂದಿಗೆ ಮತ್ತೆ ದೇಶ ಕಟ್ಟುವ ಕೆಲಸ ಮಾಡಬೇಕೆಂದು ಹೇಳಿದ ಅವರು ಸರ್ವಧರ್ಮಿಯರನ್ನು ಒಗ್ಗೂಡಿಸಿ ಈದ್ ಮಿಲಾದ್ ಆಚರಣೆ ಮಾಡುತ್ತಿರುವದು ಶ್ಲಾಘನೀಯ ಎಂದರು.ಮಾಜಿ ಶಾಸಕ ಕೆ.ಎಂ ಇಬ್ರಾಹಿಂ ಮಾಸ್ಟರ್ ಮಾತನಾಡಿ  ಸಾಮರಸ್ಯದಿಂದ ಜೀವನ ನಡೆಸುವ ಜನರ ಮಧ್ಯೆ ಅಶಾಂತಿ ಸೃಷ್ಟಿ ಮಾಡಲು ಮುಂದಾಗಿರುವುದು ವಿಷಾದನೀಯ ಒಂದು ವರ್ಗವನ್ನು ಗುರಿಯಾಗಿಸಿ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿರುವದು ಸರಿಯಲ್ಲ ಅಶಾಂತಿ ಸೃಷ್ಟಿ ಮಾಡುವವರನ್ನ ದೂರವಿಟ್ಟು ಸಮಾಜ ಕಟ್ಟುವ ಕೆಲಸ ನಾವೆಲ್ಲರೂ ಮಾಡುವ ಎಂದು ಹೇಳಿದರು.ಧಾರ್ಮಿಕ ಪಂಡಿತ ಮುಸ್ತಫಾ ಹುದವಿ ಅಕೋಡ್ ಮಿಲಾದ್ ಸಂದೇಶ ಭಾಷಣ ಮಾಡಿದರು .ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು .ಮಕ್ಕಳ ಕಲಾ, ಸಾಹಿತ್ಯ, ದಫ್ ಸ್ಪರ್ಧೆ ಗಮನ ಸೆಳೆಯಿತು.ಮಲಬಾರ್ ಜುಮಾ ಮಸೀದಿ ಸಮಿತಿ ಅಧ್ಯಕ್ಷ ಮುಹಮ್ಮದ್ ರಾಫಿ,ಪುರಸಭಾ ಸದಸ್ಯರಾದ ಮುಷೀರ್, ರವಿ,ಕಾಂಗ್ರೆಸ್ ಮುಖಂಡ ಎಸ್. ಜಿ ವೆಂಕಟೇಶ್, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಸಫೀರ್ ಅಹ್ಮದ್, ಪ್ರಮುಖರಾದ ಮಹದೇಶ,ಸಿಪಿಎಂ ಬಶೀರ್ ಹಾಜಿ,ತಮ್ಲಿಕ್ ದಾರಿಮಿ, ಹಮೀದ್ ಮೌಲವಿ,ರವೂಫ್ ಹಾಜಿ,ಕೆ. ಎಂ ಬಶೀರ್ ಸೇರಿದಂತೆ ಮಲಬಾರ್ ಮುಸ್ಲಿಂ ಸಮಿತಿ ಪದಾಧಿಕಾರಿಗಳು ಹಾಜರಿದ್ದರು .      

ಪ್ರವಾದಿಯವರ ಸಂದೇಶ ಮೈಗೂಡಿಸಿಕೊಳ್ಳಿ :ಶಾಸಕ ಕೆ. ಮಹದೇವ್. ಮಲಬಾರ್ ಜುಮಾ ಮಸೀದಿ ಸಮಿತಿಯಿಂದ ಈದ್ ಮಿಲಾದ್ ಆಚರಣೆ

ವರದಿ:- newsline media 
.ಸಿದ್ದಾಪುರ :-ಶಾಂತಿ ಸಹಬಾಳ್ವೆಯ ಜೀವನ ನಡೆಸುವುದರೊಂದಿಗೆ ಎಲ್ಲಾ ಧರ್ಮವನ್ನು  ಗೌರವಯುತವಾಗಿ ಕಾಣುವ ಮೂಲಕ ಜಾತ್ಯತೀತ ಮನೋಭಾವದೊಂದಿಗೆ ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದು ಪಿರಿಯಾಪಟ್ಟಣ ಶಾಸಕ ಕೆ ಮಹದೇವ್ ಕರೆ ನೀಡಿದ್ದಾರೆ.ಪಿರಿಯಾಪಟ್ಟಣ ಮಲಬಾರ್ ಜುಮಾ ಮಸೀದಿ ಸಮಿತಿಯಿಂದ ನಡೆದ ಜಿಸ್ನೆ ಮಿಲಾದ್ ಫೆಸ್ಟ್  ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಭಾರತ ದೇಶದಲ್ಲಿ ಪ್ರತಿಯೊಬ್ಬರೂ ಧಾರ್ಮಿಕ ಹಿನ್ನೆಲೆಯೊಂದಿಗೆ ತಮ್ಮದೇ ಆದ ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು ಸೌಹಾರ್ದಯುತವಾಗಿ ಬದುಕು ಸಾಗಿಸುತ್ತಿದ್ದಾರೆ.ಇತ್ತೀಚಿನ ದಿನಗಳಲ್ಲಿ ಒಂದು ವರ್ಗವನ್ನು ಗುರಿಯಾಗಿಸಿಕೊಂಡು ಸಂವಿಧಾನ ವಿರುದ್ಧವಾಗಿ ನಡೆದುಕೊಳ್ಳುವುದರ ಮೂಲಕ ಅಶಾಂತಿ ಸೃಷ್ಟಿಸಲು ಮುಂದಾಗಿರುವ ಪಕ್ಷ ಸಂಘಟನೆಗಳ ವಿರುದ್ಧ ಪ್ರತಿಯೊಬ್ಬರು ಜಾಗೃತರಾಗಬೇಕಿದೆ.ದೇಶದಲ್ಲಿ ಸಂವಿಧಾನದ ಆಶಯದಂತೆ ಪ್ರತಿಯೊಬ್ಬರೂ ತಮ್ಮದೇ ಆದ ಜೀವನ ನಡೆಸುತ್ತಿದ್ದಾರೆ.  ಜಾತ್ಯಾತೀತ ರಾಷ್ಟ್ರವನ್ನ ಒಡೆದು ಆಳುವ ನೀತಿ ಅನುಸರಿಸುತ್ತಿರುವ ಸಂವಿಧಾನ ವಿರೋಧಿಗಳನ್ನು ದೂರ ಇಡಬೇಕಾಗಿದೆ.ಪಿರಿಯಾಪಟ್ಟಣದ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಎಲ್ಲ ಬಾಂಧವರು ಶಾಂತಿ ಸೌಹಾರ್ದತೆಯ ಸಹಬಾಳ್ವೆಯೊಂದಿಗೆ ಜೀವನ ನಡೆಸುತ್ತಿದ್ದಾರೆ.ಇಲ್ಲಿ ಯಾವುದೇ ಅಶಾಂತಿಯ ವಾತಾವರಣವಿಲ್ಲ ಎಲ್ಲರೂ ಒಂದೇ ಎನ್ನುವ  ಭಾವೈಕ್ಯತೆಯಿಂದ ಬದುಕು ಸಾಗಿಸುತ್ತಿರುವುದು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಪ್ರವಾದಿಯವರು ಇಡೀ ವಿಶ್ವಕ್ಕೆ ಶಾಂತಿ ಸೌಹಾರ್ದತೆಯ ಸಂದೇಶ ಸಾರಿದ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದರು.ಮಿಲಾದ್ ಅಂಗವಾಗಿ ನಡೆದ ಕಲಾ, ಸಾಹಿತ್ಯ,ದಫ್ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭ ಪುರಸಭಾ ಅಧ್ಯಕ್ಷ ಕೆ.ಮಹೇಶ್ ,ಸದಸ್ಯರಾದ  ಮುಶೀರ್, ರವಿ, ಮಲಬಾರ್ ಜುಮಾ ಮಸೀದಿ ಸಮಿತಿ ಅಧ್ಯಕ್ಷ ಮುಹಮ್ಮದ್ ರಾಫಿ,ಕಾರ್ಯದರ್ಶಿ  ಸೈದು,ಉಪಾಧ್ಯಕ್ಷ  ಮುಹಮ್ಮದ್,ಜಂಟಿ ಕಾರ್ಯದರ್ಶಿ ಹಂಸ ಸಫ, ಉಸ್ತಾದ್  ಮಜೀದ್ ಬಾಖವಿ,ಸಂಶು ಬಾಖವಿ,ಪ್ರಮುಖರಾದ ಜಂಶಾದ್,ನೌಷಾದ್,ಶರೀಫ್,ಹನೀಫ್,ಆಸ್ಕರ್ ಸೇರಿದಂತೆ ಸ್ವಲಾತ್ ಸಮಿತಿಯ ಸದಸ್ಯರುಗಳು ಹಾಜರಿದ್ದರು

*ಕೊಡಗು ಜಿಲ್ಲೆಗೆ ಡಿಕೆಶಿ ಭೇಟಿ ನಂತರ ಹತಾಶಗೊಂಡ ಬಿಜೆಪಿ*. ಡಿಕೆಶಿ ವಿರುದ್ಧ ಅಪಪ್ರಚಾರಕ್ಕೆ ಖಂಡನೆ: ಸರಿತಾ ಪೂಣಚ್ಚ

ಮಡಿಕೇರಿ : ಇದುವರೆಗೂ ಜಿಲ್ಲೆಗೆ ಭೇಟಿ ನೀಡುವ ಯಾವುದೇ ನಾಯಕರುಗಳು ಹಾಗೂ ಜನಪ್ರತಿನಿಧಿಗಳನ್ನು ಸಂಪ್ರದಾಯದ ರೀತಿಯಲ್ಲಿ ಗೌರವಿಸುವುದು ಸಹಜವಾಗಿದ್ದರೂ ಉದ್ದೇಶಪೂರ್ವಕವಾಗಿ ಕೆಪಿಸಿಸಿ ರಾಜ್ಯಾಧ್ಯಕ್ಷ  ಡಿ.ಕೆ ಶಿವಕುಮಾರ್ ವಿರುದ್ಧ ಅಪಪ್ರಚಾರಕ್ಕೆ ಮುಂದಾಗಿರುವ ಬಿಜೆಪಿಯಿಂದ ಸಂಸ್ಕೃತ ಪಾಠ ಕಲಿಯಬೇಕಾಗಿಲ್ಲ ಎಂದು ಕೊಡಗು ಕಾಂಗ್ರೆಸ್ ವಕ್ತಾರೆ ಕೇಚಮಾಡ ಸರಿತಾ ಪೂಣಚ್ಚ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಮೇಕೆದಾಟು ಯೋಜನೆಗಾಗಿ ರಾಜ್ಯಾದ್ಯಂತ ಪಾದಯಾತ್ರೆ ಕೈಗೊಂಡಿರುವ ಡಿ.ಕೆ ಶಿವಕುಮಾರ್ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಗೌರವಪೂರ್ವಕವಾಗಿಯೇ ನಡೆದುಕೊಂಡಿದ್ದಾರೆಯೇ ಹೊರತು ಎಲ್ಲೂ ಅಗೌರವ ತೋರಿಲ್ಲ. ಡಿಕೆಶಿಯವರ ಕುಟುಂಬದ ಅಜ್ಜಿಯೊಬ್ಬರು ಇತ್ತೀಚೆಗೆ ಅಕಾಲಿಕವಾಗಿ ಮೃತಪಟ್ಟಿದ್ದು ಕುಟುಂಬದಲ್ಲಿ ಸೂತಕವಾಗಿರುವದರಿಂದ ಕ್ಷೇತ್ರಗಳಲ್ಲಿ ದೂರದಿಂದಲೇ ಭಕ್ತಿಪೂರ್ವಕವಾಗಿ ನಮಿಸಿದ್ದಾರೆ. ಇದನ್ನು ಸಹಿಸದ ಬಿಜೆಪಿಯ ಕೆಲವರು ಡಿಕೆಶಿ ವಿರುದ್ಧ ಅಪಪ್ರಚಾರ ಮಾಡಿರುವುದು ಖಂಡನೀಯ.ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಒಗ್ಗಟ್ಟು ಪ್ರದರ್ಶನದ ಮೂಲಕ ಪಕ್ಷ ಕಟ್ಟುವ ಕೆಲಸವಾಗುತ್ತಿದೆ. ಇದರಿಂದ ಹತಾಶಗೊಂಡಿರುವ ಬಿಜೆಪಿ. ರಾಜ್ಯ ನಾಯಕರ ವಿರುದ್ಧ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದ ಅವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಈ ಹಿಂದೆ ಬಿಜೆಪಿ ಮಾಡಿದ್ದುಇವರಿಂದ ಕಾಂಗ್ರೆಸ್ ಪಾಠ ಕಲಿಯಬೇಕಾಗಿಲ್ಲ. ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ರಸ್ತೆ, ನೀರು, ವಿದ್ಯುತ್, ನಿವೇಶನ, ಕಾಡುಪ್ರಾಣಿಗಳ ಹಾವಳಿ ಸೇರಿದಂತೆ ರೈತರು, ಕಾರ್ಮಿಕರು ಸಾಮಾನ್ಯ ಜನರು ಸಂಕಷ್ಟದ ಬದುಕಿನಲ್ಲಿ ಜೀವನ ನಡೆಸುವಂತಾಗಿದೆ.ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಗಂಭೀರವಾಗಿ ಚಿಂತಿಸಬೇಕಾದ ಬಿಜೆಪಿ ಭ್ರಷ್ಟಾಚಾರದೊಂದಿಗೆ ಕೋಮು ಭಾವನೆಗಳನ್ನು ಕೆರಳಿಸುವ ಮೂಲಕ  ಜನಾಂಗಗಳ  ನಡುವೆ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ಬಿಜೆಪಿಯ ದುರಾಡಳಿತದ ವಿರುದ್ಧ ಜಿಲ್ಲೆಯ ಜನತೆ ಆಕ್ರೋಶಗೊಂಡಿದ್ದು ಕಾಂಗ್ರೆಸ್ ನತ್ತ ಒಲವು ತೋರುತ್ತಿದ್ದಾರೆ. ಇನ್ನಾದರೂ ಕೀಳುಮಟ್ಟದ ರಾಜಕಾರಣ ಮಾಡುವದನ್ನ ಬಿಟ್ಟು ಗಂಭೀರ ಸಮಸ್ಯೆಗಳಿಗೆ ಸ್ಪಂದಿಸದಿದ್ದಲ್ಲಿ ಬಿಜೆಪಿಯ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.        

ಮಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆ ಹಾಗೂ ತರಗತಿ ಮುಂದೂಡಿಕೆ


ಮಂಗಳೂರು (Times Of Coorg) :  ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆ ಹಾಗೂ ತರಗತಿಗಳನ್ನು ರದ್ದುಪಡಿಸಿ ಮುಂದೂಡಲಾಗಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪಿ.ಎಲ್ ಧರ್ಮ ತಿಳಿಸಿದ್ದಾರೆ. ಮಂಗಳವಾರ ಆರಂಭಗೊಂಡಿದ್ದ ಮೌಲ್ಯಮಾಪನವನ್ನು ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ. ಕೋವಿಡ್-19 ಜಾಗೃತ ಕ್ರಮವಾಗಿ ಪರೀಕ್ಷೆ & ತರಗತಿಗಳನ್ನು ಮುಂದೂಡವಂತೆ ದ.ಕ ಜಿಲ್ಲಾಧಿಕಾರಿ ಆದೇಶಿಸಿದ್ದರು.



ನಾಗರಹೊಳೆ. ಚೊಟ್ಟೆಪಾರೆ ಹಾಡಿ ನಿವಾಸಿಗಳಿಗೆ ಕಿಟ್ ವಿತರಣೆ.

ಸಿದ್ದಾಪುರ  :ಬೆಂಗಳೂರಿನ ಯು ಎಸ್ ಟಿ ಸಂಸ್ಥೆ , ಬನವಾಸಿ ಕನ್ನಡಿಗರ ತಂಡ,ಸ್ವಸ್ಥ ರಂಗತಂಡದಿಂದ ನಮ್ಮ ಕೊಡಗು ತಂಡದ ನೇತ್ರತ್ವದಲ್ಲಿ ನಾಗರಹೊಳೆ ಸುತ್ತಮುತ್ತಲ ಹಾಡಿ ಹಾಗೂ ಚೆನ್ನಯ್ಯನ ಕೋಟೆ  ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೊಟ್ಟೆಪಾರೆ ಹಾಡಿಯ ಕುಟುಂಬಗಳಿಗೆ  ಆಹಾರ ಪದಾರ್ಥಗಳ ಕಿಟ್ ವಿತರಿಸಿದರು. ಆದಿವಾಸಿ ಸಂಘಟನೆಯ ಮುಖಂಡ ಜೆ. ಕೆ ಅಪ್ಪಾಜಿ ಮಾತನಾಡಿ ಚೆನ್ನಯ್ಯನ ಕೋಟೆ  ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೊಟ್ಟೆಪಾರೆ ಹಾಡಿ, ದಿಡ್ಡಳ್ಳಿ ಹಾಡಿ ಪೊನ್ನಂಪೇಟೆ ತಾಲ್ಲೂಕಿನ ನಾಗರಹೊಳೆ ವ್ಯಾಪ್ತಿಯ ಹಾಡಿಗಳಲ್ಲಿರುವ ನೂರ ಐವತ್ತು ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳಿಗೆ ಸ್ಯಾನಿಟೈಸರ್, ಮಾಸ್ಕ್, ಬೆಡ್ ಶೀಟ್,ಸ್ವೆಟರ್ , ಅಕ್ಕಿ ಸೇರಿದಂತೆ ಆಹಾರ ಪದಾರ್ಥಗಳ ಕಿಟ್ ಗಳನ್ನು ವಿತರಿಸಿದ್ದಾರೆ.ಕೋವಿಡ್ ಲಾಕ್ ಡೌನ್  ನಿಂದ ಕೂಲಿ  ಕೆಲಸವೂ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದ ಆದಿವಾಸಿ ಕುಟುಂಬಗಳ ಬಗ್ಗೆ  ಮಾಹಿತಿ ತಿಳಿದು ಬೆಂಗಳೂರಿನಿಂದ ಹಾಡಿಗೆ ಬಂದು ಕಿಟ್ ಗಳನ್ನು ನೀಡಿರುವ ಸಂಘಟನೆ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಬೆಂಗಳೂರಿನ ಬನವಾಸಿ ಕನ್ನಡಿಗರ ತಂಡದ ಜೈಕಿರಣ್  ಮಾತನಾಡಿ ಹಲವು ವರ್ಷಗಳಿಂದ ಕೊಡಗು ಜಿಲ್ಲೆಗೆ ಸಮಾಜಸೇವಾ ಸಂಘಟನೆಗಳ ಸಹಕಾರದಿಂದ   ನಮ್ಮ ಕೊಡಗು ತಂಡದ ನೇತೃತ್ವದಲ್ಲಿ ಹಲವಾರು ಸೇವಾ ಕಾರ್ಯಗಳನ್ನು ಮಾಡಲಾಗಿದೆ.ಕೋವಿಡ್ ಲಾಕ್ ಡೌನ್  ಸಂದರ್ಭದಲ್ಲಿ ಜನರು ಸಂಕಷ್ಟದಲ್ಲಿರುವುದನ್ನು ಅರಿತು  ಜಿಲ್ಲೆಯ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮನೋಭಾವ ದಿಂದ ಇದುವರೆಗೂ ಸಾವಿರಕ್ಕೂ ಹೆಚ್ಚು ಮಂದಿಗೆ ಕಿಟ್ ಗಳನ್ನು   ವಿತರಿಸಲಾಗಿದೆ ಎಂದರು. ಬೆಂಗಳೂರಿನ  ಸ್ವಸ್ಥ  ರಂಗ ತಂಡದ ಶಮಂತ್ ಮಾತನಾಡಿ ಕೊಡಗು ಜಿಲ್ಲೆಯ ಸಂತ್ರಸ್ತ ಕುಟುಂಬಗಳು ಲಾಕ್ ಡೌನ್  ಸಂಕಷ್ಟದಲ್ಲಿರುವುದನ್ನು ಅರಿತು ಯು.ಎಸ್ ಟಿ ಸಂಸ್ಥೆ ಆಹಾರ ಪದಾರ್ಥಗಳ ಕಿಟ್ ಗಳನ್ನು ನೀಡಿದ್ದಾರೆ.ಹಲವಾರು ದಾನಿಗಳು  ಕೈಜೋಡಿಸಿದ್ದಾರೆ. ಪ್ರಕೃತಿ ಸೌಂದರ್ಯದಿಂದ ಕೂಡಿರುವ ಕೊಡಗು ಜಿಲ್ಲೆಯನ್ನ ವೀಕ್ಷಿಸಲು ರಾಜ್ಯದ ನಾನಾ ಭಾಗಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.ಬರುವವರು ಪ್ರವಾಸಿಗರಿಗಷ್ಟೇ ಸೀಮಿತರಾಗದೆ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಸಹಾಯ ಮಾಡಿದಲ್ಲಿ ಸಂತ್ರಸ್ತರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ.ಸೇವಾ ಮನೋಭಾವದಿಂದ ಎಲ್ಲರೂ ಕೈ ಜೋಡಿಸಿದಲ್ಲಿ  ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದರು.ಈ ಸಂದರ್ಭ   ಬನವಾಸಿ ಕನ್ನಡಿಗರ ತಂಡದ  ಕಿರಣ್ ಮಾಯಿ ಶರ್ಮಾ, ನಮ್ಮ ಕೊಡಗು ತಂಡದ ಲೋಹಿತ್,ಭೂಮಿ ಮತ್ತು ವಸತಿ ವಂಚಿತ ಹೋರಾಟ ಸಮಿತಿಯ ನಿರ್ವಾಣಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು