ರಾಜೇಶ್ ನಾಯಕಗೆ "ಗೌರವ ಡಾಕ್ಟರೇಟ್"

No comments
Newsline media
ಮೈಸೂರು :-‍ಏಷ್ಯಾ ವೇದಿಕ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ  ವತಿಯಿಂದ  ತಮಿಳುನಾಡಿನ ಹೊಸೂರಿನಲ್ಲಿ ನಡೆದ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರಧಾನ ಸಮಾರಂಭದಲ್ಲಿ ಸಾಮಾಜಿಕ ಕಾರ್ಯಕರ್ತ, ಸಾಮಾಜಿಕ ಜಾಲತಾಣ ತಜ್ಞ ರಾಜೇಶ್ ನಾಯಕ ರವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.  ಜಿ .ಆರ್ ರಾಜೇಶ್ ನಾಯಕ  ಮೈಸೂರಿನ ಸಿಮ್ಕಾನ್ ಫೌಂಡೇಶನ್ ಮತ್ತು ಸೋಷಿಯಲ್ ವೇಲ್ಫೇರ್ ಟ್ರಸ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಂಸ್ಥಾಪಕ ಅಧ್ಯಕ್ಷ ರಮೇಶ್ ಎಂ.ಕೆ ಮತ್ತು ನಿರ್ದೇಶಕ ಆದರ್ಶ ಗೌಡರ ಮಾರ್ಗದರ್ಶನದಲ್ಲಿ ಮೊಬೈಲ್ ನಿಂದ ಆಗುವ ದುಷ್ಪರಿಣಾಮ ಮತ್ತು ವೈಜ್ಞಾನಿಕ ಬಳಕೆ, ಸ್ವಯಂ ಉದ್ಯೋಗ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಬಗ್ಗೆ  5000 ಕ್ಕೂ ಹೆಚ್ಚು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹಾಗೂ ಅನೇಕ ಸಂಘಸಂಸ್ಥೆಗಳಲ್ಲಿ ಗೌರವ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದು. ಅಂತರರಾಷ್ಟ್ರೀಯ ಖ್ಯಾತಿಯ ನಾಟ್ಯಶ್ರೀ ಬದರಿ ದಿವ್ಯ ಭೂಷಣ್ ಮತ್ತು ಡಾ ಅಂಜನ ಭೂಷಣ್ ರವರ ಭೂಷಣ್ ಪ್ರದರ್ಶಕ ಕಲೆಗಳು ಮತ್ತು ದೃಶ್ಯಪ್ರಸ್ತುತಿ ಕೇಂದ್ರ ರೂಪಿಸಿದ ನೃತ್ಯ ಬಲೆಯೊಂದು "ಶ್ರೀ ರಾಮಾನುಜ ಧನುರ್ ದಾಸ ವೈಭವಂ" ನೃತ್ಯ ರೂಪದಲ್ಲಿ ಶ್ರೀ ರಾಮಾನುಜರ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದು. ಈ ನೃತ್ಯ ರೂಪಕವು ದೇಶದ ನಾನಾ ಪ್ರಸಿದ್ಧ ಕಾರ್ಯಕ್ರಮಗಳಲ್ಲಿ ಪ್ರಸ್ತುತಗೊಂಡಿದೆ. ಹಾಗೂ ತಿರುಪತಿಯ ನಾದ ನಿರಜನಂ ವೇದಿಕೆಯಲ್ಲಿ ಟಿಟಿಡಿ ಚಾನಲ್ ಮುಖಾಂತರ 170 ದೇಶಗಳಲ್ಲಿ ನೇರ ಪ್ರಸಾರಗೊಂಡಿದೆ. ಹಾಗೂ ಮಹಿಳಾ ಸಬಲೀಕರಣ ಸೇವೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ರಾದೇ ಪುಸ್ತಕ ಸಂಗ್ರಹ ಮಂದಿರ ಮುಖಾಂತರವಾಗಿ ಹಲವಾರು ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಇವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಪ್ರತಿಷ್ಟಿತ "ಬಸವರತ್ನ ರಾಷ್ಟ್ರ ಪ್ರಶಸ್ತಿ", "ಡಾ. ಪಂಡಿತ್ ಪುಟ್ಟರಾಜ ಗವಾಯಿ ರಾಷ್ಟ್ರೀಯ ಸೇವಾರತ್ನ ಪ್ರಶಸ್ತಿ  " "ರಾಷ್ಟ್ರೀಯ ಯುವರತ್ನ ಪ್ರಶಸ್ತಿ " "ಭಾರತ ಸೇವಾರತ್ನ ರಾಷ್ಟ್ರೀಯ ಪ್ರಶಸ್ತಿ" "ಸೇವಾ ಭೂಷಣ ರಾಜ್ಯ ಪ್ರಶಸ್ತಿ", " ಹೆಮ್ಮೆಯ ಕನ್ನಡಿಗ ರಾಜ್ಯ ಪ್ರಶಸ್ತಿ " ಹಾಗೂ "ವಿಶ್ವ ಮಾನವ ಪ್ರಶಸ್ತಿ",    "ಕನ್ನಡ ವಿಕಾಸ ರತ್ನ" ಇನ್ನೂ ಹಲವು  ಪ್ರಶಸ್ತಿಯು ಇವರಿಗೆ ಲಭಿಸಿದೆ.

No comments

Post a Comment