ಸಿದ್ದಾಪುರದಲ್ಲಿ ಗ್ರಾಮೀಣ ಕ್ರೀಡಾಕೂಟ. ಹಗ್ಗ ಜಗ್ಗಾಟದಲ್ಲಿ ಮಾರ್ಕೆಟ್ ಬಾಯ್ಸ್ ಪ್ರಥಮ

No comments
ಸಿದ್ದಾಪುರ:- ಸಿದ್ದಾಪುರ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮೀಣ ಕ್ರೀಡಾಕೂಟವನ್ನು ಸರ್ಕಾರಿ ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿತ್ತು.ವಿವಿಧ ಕ್ರೀಡೆಗಳೊಂದಿಗೆ ಸಾರ್ವಜನಿಕರಿಗೆ ಹಗ್ಗ ಜಗ್ಗಾಟ ಸ್ವರ್ಧೆ ಏರ್ಪಡಿಸಲಾಗಿತ್ತು. ಕಾರ್ಗಿಲ್ ಬಾಯ್ಸ್ ಹಾಗೂ ಸಿದ್ದಾಪುರದ ಮಾರ್ಕೆಟ್ ಬಾಯ್ಸ್ ನಡುವೆ ನಡೆದ ರೋಮಾಂಚನಕಾರಿ ಹಗ್ಗ ಜಗ್ಗಾಟದಲ್ಲಿ   ಕಾರ್ಗಿಲ್ ಬಾಯ್ಸ್ ತಂಡವನ್ನು ಮಣಿಸಿ ಸಿದ್ದಾಪುರದ ಮಾರ್ಕೆಟ್ ಬಾಯ್ಸ್ ಪ್ರಥಮ ಸ್ಥಾನದೊಂದಿಗೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.ಮಾರ್ಕೆಟ್ ಬಾಯ್ಸ್ ಅಧ್ಯಕ್ಷ ಹ್ಯಾರಿಸ್ ನೇತೃತ್ವದ ತಂಡದಲ್ಲಿ ಯುವ ಕ್ರೀಡಾಪಟುಗಳು ಸ್ವರ್ಧೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.

No comments

Post a Comment