ಎಸ್ ಎಸ್ ಎಫ್ ಆಝಾದ್ ನಗರ ಶಾಖೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
ಮಡಿಕೇರಿ (Times Of Coorg) : SSF ಆಝಾದ್ ನಗರ ಶಾಖೆ ವತಿಯಿಂದ 74ನೇ ಸ್ವಾತಂತ್ರೋತ್ಸವ ಕಾರ್ಯಕ್ರಮವು ನಡೆಯಿತು. ಜಮಾಅತ್ ಅಧ್ಯಕ್ಷರಾದ ಉಸ್ಮಾನ್ ಹಾಜಿ, SYS ಅಧ್ಯಕ್ಷರು C. K ಅಹ್ಮದ್ ಹಾಜಿ, ರವರು ಧ್ವಜಾರೋಹಣ ನೆರೆವೇರಿಸಿದರು. ನಂತರ ತೊಯ್ಯಿಬ್ ಸ್ವಾಗತ ಬಾಷಣ ಮಾಡಿ,SYS ನಾಯಕರುಗಳಾದ ಆಮುಚ್ಚ, ಹಂಸ ಉಸ್ತಾದ್,ಹಾಗೆಯೇ SSF ನಾಯಕರುಗಳಾದ ರವೂಫ್ ಸಖಾಫಿ, ಮುಹಮ್ಮದ್ ಸಖಾಫಿ, ಅಶ್ರಫ್ ಝೈನಿ, ಭಾಷಣ ಮಾಡಿದರು.
ಮುರ್ಷಿದ್ ಅದನಿ,ಪಂಚಾಯತ್ ಸದಸ್ಯ ಶಾಫಿ ಪಿ .ಎ. ಹಾಗೂ ಶಫೀಕ್ ಕೆ.ಎಸ್,ಸ್ವಾತಂತ್ರ್ಯ ದಿನದ ವಿಷಯವನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ SSF ಆಜ್ಹಾದ್ ನಗರ ಶಾಖಾ ಪ್ರಾಧಾನ ಕಾರ್ಯದರ್ಶಿ ಶಹೀದ್,ಪ್ರ ಶಿಹಾಬುದ್ದೀನ್ ಕೆ. ಯು, ಸಿನಾನ್ ಟಿ.ಎಚ್,ಬಷೀರ್ ಕೆ. ಎಂ, ಶರೀಫ್ ಉಸ್ತಾದ್,SYS ಹಾಗು SSF ನಾಯಕರು ಕಾರ್ಯಕರ್ತ್ತರು ಉಪಸ್ಥಿತರಿದ್ದರು.

No comments
Post a Comment