ಜಿಲ್ಲೆಯ ಸುನ್ನಿ ಸಂಘಟನೆಗಳ ವತಿಯಿಂದ ಕೊಟ್ಟಮುಡಿ ಮರ್ಕಝ್ ನಲ್ಲಿ ಆಝಾದಿ ಸಂದೇಶ ಕಾರ್ಯಕ್ರಮ

No comments

ಮಡಿಕೇರಿ (Times Of Coorg) : 74'ನೇ ಸ್ವಾತಂತ್ರ್ಯೋವದ ಅಂಗವಾಗಿ ಕರ್ನಾಟಕ ಮುಸ್ಲಿಂ ಜಮಾಅತ್, SYS, SSF, SJM ಸಂಘಟನೆಗಳ ಸಹಯೋಗದೊಂದಿಗೆ ಕೊಟ್ಟಮುಡಿ ಮರ್ಕಝುಲ್ ಹಿದಾಯದಲ್ಲಿ ಇಂದು ಆಝಾದಿ ಸಂದೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯಭಾಷಣ ಮಾಡಿದ ನ್ಯಾಯವಾದಿ ಕುಞ್ಞಬ್ದುಲ್ಲಾ ಮಡಿಕೇರಿ ಸ್ವಾತಂತ್ರ್ಯಕ್ಕೆ ಹೋರಾಡಿದ ಹುತಾತ್ಮರ ಜೀವನ ಚರಿತ್ರೆಯನ್ನು ಸ್ಮರಿಸುತ್ತಾ ಪ್ರತಿಯೊಬ್ಬರೂ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಅಧ್ಯಯನ ಮಾಡಬೇಕೆಂದರು.
ದೇಶ ಪ್ರೇಮವನ್ನು ಮೈಗೂಡಿಸಿಕೊಳ್ಳಬೇಕೆಂಬ ಸಂದೇಶವನ್ನು ಸಾರಿದರು. ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷರಾದ ಸಯ್ಯಿದ್ ಶಿಹಾಬುದ್ದೀನ್ ಅಲ್‌ಹೈದರೂಸಿ ಧ್ವಜಾರೋಹಣ ಮಾಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ನಾಇಬ್ ಖಾಝಿ ಮಹ್ಮೂದ್ ಉಸ್ತಾದ್ ಪ್ರಾರ್ಥನೆ ಮಾಡಿದರು.
SJM ಜಿಲ್ಲಾ ಅಧ್ಯಕ್ಷರಾದ ಮುಸ್ತಫಾ ಸಖಾಫಿ ಉದ್ಘಾಟಿಸಿದರು. SYS ರಾಜ್ಯ ನಾಯಕರಾದ ಹನೀಫ್ ಸಖಾಫಿ ಪ್ರಾಸ್ತಾವಿಕ ಭಾಷಣ ಮಾಡಿದರು.
KMJ ಕೊಡಗು ಜಿಲ್ಲಾ ಕಾರ್ಯಧ್ಯಕ್ಷರಾದ ಯೂಸುಫ್ ಕೊಂಡಂಗೇರಿ,ಮ ಮ್ಯಾನೇಜರ್ ಇಸ್ಮಾಯಿಲ್ ಸಖಾಫಿ,
SYS ಜಿಲ್ಲಾಧ್ಯಕ್ಷರಾದ ಅಬ್ದುಲ್ಲಾ  ಸಖಾಫಿ, SSF ಜಿಲ್ಲಾಧ್ಯಕ್ಷರಾದ ಅಬ್ದುಲ್ ಅಝೀಝ್ ಸಖಾಫಿ,
ಹಲವು ಗಣ್ಯರು ಪಾಲ್ಗೊಂಡಿದ್ದರು.

KMJ ರಾಜ್ಯ‌ ನಾಯಕರಾದ MB ಹಮೀದ್ ಕಬಡಗೇರಿ ಕಾರ್ಯಕ್ರಮ ನಿರೂಪಿಸಿದರು.
KMJ ಕಾರ್ಯದರ್ಶಿ ಮುಹಮ್ಮದ್ ಹಾಜಿ ಸ್ವಾಗತಿಸಿ ಸಂಘಟನಾ ಕಾರ್ಯದರ್ಶಿ ಹಫೀಲ್ ಸಅದಿ ವಂದಿಸಿದರು.









No comments

Post a Comment