ಶಾಲೆಗಳು ತೆರೆಯದಿದ್ದರೂ, ವಿದ್ಯಾರ್ಥಿಗಳು ಮರೆಯಲಿಲ್ಲ ಸ್ವಾತಂತ್ರ್ಯ ದಿನಾಚರಣೆ

No comments

✍🏻 ಅಸ್ಫಾಕ್ ಮೊಹಮ್ಮದ್
ದೇಶಾದ್ಯಂತ 74ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಹಿಂದಿನ ವರ್ಷಗಳಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದ ಸ್ವಾತಂತ್ರ ದಿನಾಚರಣೆ ಈ ಬಾರಿ ಕೊರೋನ ಬಿಕ್ಕಟ್ಟಿನಿಂದ ಕಳೆಗುಂದಿದೆ ಅಂತಲೇ ಹೇಳಬಹುದು. ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಆಕರ್ಷಣೆ ಎಂದರೆ ಅದು ಅಂದಿನ ಭಾಷಣ. ಸಾಮಾನ್ಯವಾಗಿ ಶಾಲೆಗಳಲ್ಲಿ ರಾಷ್ಟ್ರ ಹಬ್ಬಕ್ಕೆ ಹತ್ತು-ಹದಿನೈದು ದಿನಗಳಿರುವಾಗಲೇ ತಯಾರಿಗಳೆಲ್ಲ ಪ್ರಾರಂಭವಾಗುತ್ತಿದ್ದವು. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಭಾಷಣ, ದೇಶಭಕ್ತಿಗೀತೆ ಹೀಗೆ ಹಲವು ಕಾರ್ಯಕ್ರಮಗಳು ಶಿಕ್ಷಕರು ವಿದ್ಯಾರ್ಥಿಗಳಿಗೆ ಕಲಿಸಿ ಕೊಡುತ್ತಿದ್ದರು.

ಆದರೆ ಇಂದು ಕೊರೋನ ಸಂಕಷ್ಟದಿಂದ ಶಾಲೆಗಳೆಲ್ಲವೂ ಬಂದ್. ಈ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಸ್ವಾತಂತ್ರ್ಯ ದಿನ ಆಚರಿಸಲು ಮರೆಯಲಿಲ್ಲ.
ಅಕ್ಕ - ಪಕ್ಕದ ಮನೆಯಲ್ಲಿರುವ ಸ್ನೇಹಿತರೆಲ್ಲರನ್ನೂ ಸೇರಿಸಿ ಒಂದು ಸಣ್ಣ ವೇದಿಕೆಯ ಮೂಲಕ ತಮಗೆ ತಿಳಿದಿರುವ ಭಾಷಣ ಹಾಗೂ ದೇಶಭಕ್ತಿ ಗೀತೆಗಳನ್ನು ಹಾಡುವುದರ ಮೂಲಕ ಸರಳವಾಗಿ ಸ್ವಾತಂತ್ರ ದಿನಾಚರಣೆ ಆಚರಿಸಿದರು. ವಿದ್ಯಾರ್ಥಿಗಳಲ್ಲಿನ ಈ ಮನೋಭಾವನೆ ಅವರ ದೇಶಪ್ರೇಮ, ರಾಷ್ಟ್ರೀಯ ಹಬ್ಬದ ಆಚರಣೆಯ ಮಹತ್ವ ತಿಳಿಯಬಹುದು. ಮುಂದಿನ ದಿನಗಳಲ್ಲಿ ಭವ್ಯ ಭಾರತಕ್ಕಾಗಿ ಉತ್ತಮ ಕೊಡುಗೆಗಳು ನಿಮ್ಮದಾಗಲಿ...
ಭವಿಷ್ಯ ಉಜ್ವಲವಾಗಲಿ...

 ನಮ್ಮಯ ತನವನು ನಾವು ಮರೆಯದೆ,
ಯೋಧರಂತೆ ನಾವು ಹೋರಾಡೋಣ,
ದೇಶಕ್ಕಾಗಿ ಎದೆ ತಟ್ಟೋಣ


No comments

Post a Comment